ಬೆಂಗಳೂರು: ನ್ಯಾಯಾಲಯಕ್ಕೆ ಬಂದು ಸಾಕ್ಷಿ ಹೇಳದ ಮಹಿಳೆಯರು, ಖುಲಾಸೆಯಾಗುತ್ತಿವೆ ಪ್ರಕರಣಗಳು, ಪ್ರಯೋಜನ ಪಡೆಯುತ್ತಿರುವ ಸರಗಳ್ಳರು! ಹೌದು, ಪ್ರತಿ ವರ್ಷ ನಗರದಲ್ಲಿ ವರದಿಯಾಗುವ ಪ್ರಕರಣಗಳಿಗಿಂತ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. ಬಂಧಿತ ಆರೋಪಿಗಳು ಕಂಬಿ ಹಿಂದೆ ಹೋಗುತ್ತಾರೆ. ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಅನ್ನೂ ಸಲ್ಲಿಸುತ್ತಾರೆ. ಅಷ್ಟಕ್ಕೆ ಪೊಲೀಸರ ತನಿಖೆಯ ಭಾಗ ಮುಗಿಯುತ್ತದೆ. ಆದರೆ, ಅದಕ್ಕಿಂತ ಮಹತ್ವದ ಕೆಲಸ ಇರುವುದು ನ್ಯಾಯಾಲಯದಲ್ಲಿ. ಆರೋಪಿಗಳಿಗೆ ಶಿಕ್ಷೆ ಆಗುವಂತೆ ಮಾಡುವ ಮಹತ್ವದ ಜವಾಬ್ದಾರಿ ಸರ ಕಳೆದುಕೊಂಡ ಮಹಿಳೆಯರದು.