ಔಷಧವಿಲ್ಲದೆ ರೋಗಿಗಳ ಪರದಾಟ

ಔಷಧ ಮತ್ತು ಕಾಂತಿವರ್ಧಕ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಬೆಂಗಳೂರಿನ ಎಲ್ಲ ಔಷಧ ಅಂಗಡಿ ಮಾಲೀಕರು...
ಔಷಧ ಅಂಗಡಿ
ಔಷಧ ಅಂಗಡಿ
Updated on: 

ಬೆಂಗಳೂರು: ಔಷಧ ಮತ್ತು ಕಾಂತಿವರ್ಧಕ ಕಾಯ್ದೆಗೆ ತಿದ್ದುಪಡಿ ತರಲು ಹೊರಟಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಬೆಂಗಳೂರಿನ ಎಲ್ಲ ಔಷಧ ಅಂಗಡಿ ಮಾಲೀಕರು ಬುಧವಾರ ಸ್ವಾತಂತ್ರ್ಯ ಉದ್ಯಾನದಲ್ಲಿ ಪ್ರತಿಭಟನೆ ನಡೆಸಿದರು.

ಈ ಕಾಯಿದೆಗೆ ತಿದ್ದುಪಡಿ ಆನ್‍ಲೈನ್ ಮುಖಾಂತರ ಔಷಧ ಮಾರಾಟಕ್ಕೆ ಅನುಮತಿ ನೀಡಿದರೆ ಸಮಾಜದಲ್ಲಿ ಘನಘೋರ ಅನಾಹುತಗಳು ಸಂಭವಿಸಲಿವೆ. ಬಹು ವರ್ಷಗಳಿಂದ ಈ ವ್ಯಾಪಾರವನ್ನೇ ನಂಬಿಕೊಂಡಿರುವ ಚಿಲ್ಲರೆ, ಸಗಟು ಔಷಧ ವ್ಯಾಪಾರಸ್ಥರು ಬೀದಿಗೆ ಬೀಳುತ್ತಾರೆ ಎಂದು ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸಾವಿರಾರು ಮಂದಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ವಿ.ಹರಿಕೃಷ್ಣ ಮಾತನಾಡಿ, ಆನ್‍ಲೈನ್ ಔಷಧ ವ್ಯಾಪಾರದಿಂದ ನಕಲಿ ಔಷಧಗಳ ವ್ಯಾಪಾರ ಅಧಿಕವಾಗುತ್ತದೆ. ಯುವ ಜನತೆಯ ಸುರಕ್ಷತೆಯ ದೃಷ್ಟಿಯಿಂದ ಯಾವುದೇ ಕಾರಣಕ್ಕೂ ಆನ್ ಲೈನ್ ಮೂಲಕ ಔಷಧ ಮಾರಾಟಕ್ಕೆ ಅನುವು ಮಾಡಿಕೊಡಬಾರದು ಎಂದು ಆಗ್ರಹಿಸಿದರು. ಬಳಿಕ ಔಷಧ ನಿಯಂತ್ರಣಾ ಮಂಡಳಿಯ ರಘುರಾಮ್ ಬಂಡಾರಿ ಅವರನ್ನು ಭೇಟಿಯಾದ ಪ್ರತಿಭಟನಾಕಾರರು ಸರ್ಕಾರಕ್ಕೆ ತಮ್ಮ ಮನವಿ ಸಲ್ಲಿಸಿದರು. ಆನ್‍ಲೈನ್ ಮೂಲಕ ಔಷಧ ಮಾರಾಟಕ್ಕೆ ವಿರೋಧಿಸಿ ಕಳೆದ ಮಧ್ಯರಾತ್ರಿಯಿಂದ ಬೆಂಗಳೂರಿನ 6500 ಹಾಗೂ ರಾಜ್ಯದ 25 ಸಾವಿರ ಔಷಧ ಅಂಗಡಿಗಳು ಬಂದ್ ಆಗಿದ್ದವು. ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆ ಔಷಧ ಮಳಿಗೆಗಳಿಗೆ ಮಾತ್ರ ತೆರೆದಿದ್ದವು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com