ರೈಡ್ಗೆಂದು ಬುಧವಾರ ಐಟಿ ಅಧಿಕಾರಿ ಗಳು ಬಂದಿದ್ದಾರೆ. ಸಂಜೆವರೆಗೂ ದಾಳಿ ನಡೆಸಿ, ಲೆಕ್ಕಪತ್ರ ಪರಿಶೀಲಿಸಿ ಸುಸ್ತಾದ ಅವರು ಕೊನೆಗೆ ಲಾಡ್ಜ್ ಪಕ್ಕದಲ್ಲೇ ಇದ್ದ ಬಾರ್ನಲ್ಲಿ ಕಂಠಪೂರ್ತಿ ಕುಡಿದು ಬಾಯಿಗೆ ಬಂದಂತೆ ಮಾತನಾಡುತ್ತಿದ್ದರು ಎನ್ನಲಾ ಗಿದೆ. ಅನುಮಾನಗೊಂಡ ಸಾರ್ವಜನಿಕರು ಯಾರೆಂದು ಕೇಳಿದಾಗ ಸಮರ್ಪಕ ಉತ್ತರ ನೀಡದೇ ದಬಾಯಿಸಿದ್ದಾರೆ. ಕುಪಿತಗೊಂಡ ಸಾರ್ವಜನಿಕರು ರಾತ್ರಿ 11ರ ವೇಳೆಗೆ ಅವರ ನ್ನು ಠಾಣೆಗೆ ಕರೆದೊಯ್ದಿದ್ದಾರೆ. ಪಿಎಸ್ಐ ಸಮೀರ ಮುಲ್ಲಾ ಠಾಣೆಯಲ್ಲಿ ವಿಚಾರಣೆ ನಡೆಸಿದ ಬಳಿಕವಷ್ಟೇ ಇವರು ಐಟಿ ಅಧಿಕಾರಿ ಗಳು ಎಂಬ ವಿಷಯ ತಿಳಿದಿದೆ. ಬಳಿಕ ಹೀಗೆ ನಡೆದುಕೊಳ್ಳಬಾರದೆಂಬ ಸಲಹೆ ನೀಡಿ ಬಿಡುಗಡೆ ಮಾಡಿ ಕಳುಹಿಸಿದ್ದಾರೆ