ಬೆಂಗಳೂರು: ಬೆಂಗಳೂರಿನಲ್ಲಿ ಕತ್ತಲಾಗುತ್ತಿದ್ದಂತೆ ಅತ್ಯಾಚಾರ, ದೌರ್ಜನ್ಯ ಪ್ರಕರಣ ಹೆಚ್ಚುತ್ತಿರು ಹಿನ್ನೆಲೆಯಲ್ಲಿ ಬಿಎಂಟಿಸಿ ಸೇವೆಯನ್ನು ರಾತ್ರಿ ವೇಳೆ ಹೆಚ್ಚಿಸುವ ಬಗ್ಗೆ ಚಿಂತನೆ ನಡೆದಿದೆ. ಸಮಾನ್ಯವಾಗಿ ರಾತ್ರಿ 10.30ರಿಂದ ಬೆಳಗ್ಗೆವರೆಗೆ ಕನಿಷ್ಠ ಸಂಖ್ಯೆಯಲ್ಲಿ ಬಸ್ಸುಗಳು ಸಂಚರಿಸುತ್ತಿವೆ. ಈ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸುವುದು ಬಿಎಂಟಿಸಿಯ ಆಲೋಚನೆ. ಚರ್ಚೆ ನಡೆದಿದ್ದು, ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಲಾಗಿದೆ. ಕನ್ನಡಪ್ರಭಕ್ಕೆ ಲಭ್ಯವಾದ ಮಾಹಿತಿ ಪ್ರಕಾರ ಸದ್ಯ ರಾತ್ರಿ 10.30ರಿಂದ ಬೆಳಗ್ಗೆ 4 ಗಂಟೆ ವರೆಗೆ 55 ಬಸ್ಸುಗಳು ಸಂಚರಿಸುತ್ತಿವೆ. ತಕ್ಷಣದಲ್ಲೇ ಇನ್ನೂ 10 ಬಸ್ಸುಗಳ ಸೇವೆ