ತುಮಕೂರು: ರಾಜ್ಯವನ್ನು ಬೆಚ್ಚಿ ಬೀಳಿಸಿದ್ದ ಗಾರ್ಮೆಂಟ್ ಮಹಿಳಾ ಉದ್ಯೋಗಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ಶಿರಾದಲ್ಲಿ ಇಬ್ಬರನ್ನು ಹಾಗೂ ನೆಲಮಂಗಲದಲ್ಲಿ ಒಬ್ಬರನ್ನು ಬಂಧಿಸಲಾಗಿದೆ.
ತುಮಕೂರು ಜೆಲ್ಲೆ ಚಿಕ್ಕತೊಟ್ಲು ಕೆರೆ ಗ್ರಾಮದ ಕರೀಪಾಷ(30), ಗೇರಹಳ್ಳಿಯ ಶಫೀವುಲ್ಲಾ(28), ಅಂತರಸನಹಳ್ಳಿಯ ವಿ ರಾಜು(45) ಬಂಧಿತರು.
ಅ.13ರಂದು ಕ್ಯಾತಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯ ಎನ್ ಎಚ್ 48ರಲ್ಲಿ ಸುಮಾರು 28 ವರ್ಷ ವಯಸ್ಸಿನ ಮಹಿಳೆಯೊಬ್ಬರನ್ನು ದುಷ್ಕರ್ಮಿಗಳು ಸುಮೋ ವಾಹನದಲ್ಲಿ ಹತ್ತಿಸಿಕೊಂಡು ದಾಬಸ್‍ಪೇಟೆ ಮತ್ತು ಕ್ಯಾತಸಂದ್ರ ಜಾಸ್ ಟೋಲ್ ಗೇಟ್ ಮಧ್ಯೆ ವಾಹನದಲ್ಲೇ ಆಕೆಯ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದರು.