ರು.422 ಕೋಟಿ ಮೌಲ್ಯದ ಭೂ ತೆರವು

ಬೆಂಗಳೂರು ನಗರ ಜಿಲ್ಲಾಡಳಿತ ಶನಿವಾರ ರು.422 ಕೋಟಿ ಮೌಲ್ಯದ 105.30 ಎಕರೆ ಭೂ ಒತ್ತುವರಿ ತೆರವುಗೊಳಿಸಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)
Updated on: 

ಬೆಂಗಳೂರು: ಬೆಂಗಳೂರು ನಗರ ಜಿಲ್ಲಾಡಳಿತ ಶನಿವಾರ ರು.422 ಕೋಟಿ ಮೌಲ್ಯದ 105.30 ಎಕರೆ ಭೂ ಒತ್ತುವರಿ ತೆರವುಗೊಳಿಸಿದೆ.

ಬ್ಯಾಂಡಹಳ್ಳಿ ಗ್ರಾಮದ ಸರ್ಕಾರಿ ಕೆರೆ ಸರ್ವೆ ನಂ.2ರಲ್ಲಿ 1 ಎಕರೆ, ಯಶವಂತಪುರ ಹೋಬಳಿ, ಅಬ್ಬಿಗೆರೆ ಗ್ರಾಮದ ಸರ್ವೆ ನಂ.1 ರಿಂದ 6ರ ಮಧ್ಯದ ರಕ್ಷಸ ಹಳ್ಳದ 3 ಎಕರೆ ಜಾಗವನ್ನು ತೆರವು ಮಾಡಲಾಯಿತು. ಬೆಂಗಳೂರು ಉತ್ತರ (ಅಪರ) ತಾಲೂಕು ಹೆಸರಘಟ್ಟ ಹೋಬಳಿ, ಮಾವಳ್ಳಿಪುರದ ಸರ್ವೆ ನಂ.116ರಲ್ಲಿ 15 ಎಕರೆ, ಮಾದಪ್ಪನಹಳ್ಳಿ ಗ್ರಾಮದ ಸರ್ಕಾರಿ ಕೆರೆ ಸರ್ವೆ ನಂ.79ರಲ್ಲಿ 3.13 ಎಕರೆ, ಶಿವಕೋಟಿ ಗ್ರಾಮದ ಸರ್ಕಾರಿ ಕೆರೆ ಸರ್ವೆ ನಂ.37ರಲ್ಲಿ 2.28 ಎಕರೆ, ಕಾಳತಮ್ಮನಹಳ್ಳಿ ಗ್ರಾಮದ ಸರ್ಕಾರಿ ಕೆರೆ ಸರ್ವೆ ನಂ.18ರಲ್ಲಿ 4.26 ಎಕರೆ ಭೂಮಿ ವಶಪಡಿಸಿಕೊಳ್ಳಲಾಯಿತು.

ದಕ್ಷಿಣ ತಾಲೂಕು, ತಾವರೆಕೆರೆ ಹೋಬಳಿ, ಜೋಗೇರಹಳ್ಳಿ ಗ್ರಾಮದ ಸರ್ಕಾರಿ ಗೋಮಾಳ ಸರ್ವೆ ನಂ.21 ರಲ್ಲಿ 1.31 ಎಕರೆಯನ್ನು ಬೋರ ಲಿಂಗಪ್ಪ ಎಂಬುವರು ಒತ್ತುವರಿ ಮಾಡಿಕೋಳಿ ಫಾರಂ ನಿರ್ಮಿಸಿ ಬಾಡಿಗೆ ಕೊಟ್ಟಿದ್ದರು. ಈ ಬಗ್ಗೆ ತನಿಖೆ ಕೈಗೊಂಡಾಗ ಬೋರಲಿಂಗಪ್ಪ ಒತ್ತುವರಿ ಮಾಡಿಕೊಂಡಿರುವುದು ಖಚಿತವಾಗಿದ್ದು, ಅದರೊಂದಿಗೆ ದೂರಿನ ಅರ್ಜಿ ಸಲ್ಲಿಸಿದ್ದ ಪದ್ಮಾವತಿ ಅವರದ್ದೇ ಆದ ಭೂಮಿಯಲ್ಲಿ 26 ಗುಂಟೆ ಒತ್ತುವರಿ ಮಾಡಿಕೊಂಡಿರುವುದು ಪತ್ತೆಯಾಯಿತು. ಬೋರಲಿಂಗಪ್ಪ ಕಟ್ಟಿಕೊಂಡಿದ್ದ ಮನೆ, ದನದ ಕೊಟ್ಟಿಗೆ ವಾಹನ ನಿಲುಗಡೆ ಪ್ರದೇಶ ತೆರವು ಗೊಳಿಸಲಾಯಿತು.

ಉತ್ತರಹಳ್ಳಿ ಹೋಬಳಿ ದೊಡ್ಡಕಲ್ಲ ಹಳ್ಳಿ ಗ್ರಾಮದ ಸರ್ವೆ ನಂ.5/1 ಎ,ಡಿ, ಸರ್ವೆ ನಂ.3, ಸರ್ವೆ ನಂ.25ರಲ್ಲಿ ಒಟ್ಟು 26.35 ಎಕರೆ ವಶಕ್ಕೆ ಪಡೆಯಲಾಯಿತು. ದಕ್ಷಿಣ ತಾಲೂಕು, ಸರ್ವೆ ನಂ 3, 5-1ಎಸ 5-1 ಡಿ, 22 ಜೋಡಿದಾರರ ಮಾಲೀಕತ್ವದಲ್ಲಿದ್ದು ಸದರಿ ಭೂಮಿಯನ್ನು ಹಲವರು ಉಳುವವನೇ ಭೂಮಿ ಒಡೆಯ ಎಂಬ ಕಾನೂನಿನ ಪ್ರಕಾರ ಅರ್ಜಿ ಸಲ್ಲಿಸಿಕೊಂಡಿದ್ದರು. ಇದರ ವಾಹ ಹೈಕೋರ್ಟ್ ನಲ್ಲಿ ಇತ್ಯರ್ಥವಾಗದೆ ಭೂ ನ್ಯಾಯಮಂಡಳಿಗೆ ಮರಳಿ ಬಂದಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಜಾಗವನ್ನು ಸರ್ಕಾರದ ವಶಕ್ಕೆ ಪಡೆಯಲು ಆದೇಶ ಹೊರಡಿಸಿತ್ತು. ಒಟ್ಟು 26.35 ಎಕರೆ ವಶಕ್ಕೆ ಪಡೆಯಲಾಗಿದೆ. ಇದರಲ್ಲಿ ಬಿಡಿಎ ಅಕ್ರಮವಾಗಿ 2 ಎಕರೆ, ಬ್ಯಾಂಕ್ ಅಧಿಕಾರಿಗಳ ಸಂಘ, ಖಾಸಗಿ ಶಿಕ್ಷಣ ಸಂಸ್ಥೆ, ಮನೆಗಳು, ಇಂಡಸ್ಟ್ರಿಯಲ್ ಷೆಡ್ ಗಳು ಇದ್ದು, 4 ಎಕರೆ ಖಾಲಿಯಿದೆ. ಇದರ ಮಾರುಕಟ್ಟೆ ಬೆಲೆ ರು. 250 ಕೋಟಿಯಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com