ಆಯುಧಪೂಜೆ, ವಿಜಯದಶಮಿ ಸಂಭ್ರಮ

ನವರಾತ್ರಿ ಹಬ್ಬದ ಮುಖ್ಯ ಘಟ್ಟಕ್ಕೆ ಬಂದು ತಲುಪಿದೆ. ನಾಳೆ ಆಯುಧ ಪೂಜೆ, ನಾಡಿದ್ದು ವಿಜಯದಶಮಿ...
ಕೆ.ಆರ್. ಮಾರುಕಟ್ಟೆಯಲ್ಲಿನ ವ್ಯಾಪಾರ, ವಹಿವಾಟು ದೃಶ್ಯ
ಕೆ.ಆರ್. ಮಾರುಕಟ್ಟೆಯಲ್ಲಿನ ವ್ಯಾಪಾರ, ವಹಿವಾಟು ದೃಶ್ಯ
Updated on: 

ಬೆಂಗಳೂರು: ನವರಾತ್ರಿ ಹಬ್ಬದ ಮುಖ್ಯ ಘಟ್ಟಕ್ಕೆ ಬಂದು ತಲುಪಿದೆ. ನಾಳೆ ಆಯುಧ ಪೂಜೆ, ನಾಡಿದ್ದು ವಿಜಯದಶಮಿ. ಹೀಗಾಗಿ ರಾಜಧಾನಿ ಬೆಂಗಳೂರಲ್ಲಿ ವ್ಯಾಪಾರ, ವ್ಯವಹಾರದ ಭರಾಟೆ ಜೋರಾಗಿ ಸಾಗುತ್ತಿದೆ.

ನಗರದ ಪ್ರಮುಖ ವ್ಯಾಪಾರ ಕೇಂದ್ರಗಳಾದ ಕೆ.ಆರ್.ಮಾರ್ಕೆಟ್, ಮಲ್ಲೇಶ್ವರಂ, ಮೆಜೆಸ್ಟಿಕ್ ಮೊದಲಾದ ಕಡೆಗಳಲ್ಲಿ ಜನಸಂದಣಿ ದಟ್ಟವಾಗಿದ್ದು ನಾಳಿನ ಹಬ್ಬಕ್ಕೆ ಖರೀದಿಯಲ್ಲಿ ತೊಡಗಿರುವ ದೃಶ್ಯ ಸಾಮಾನ್ಯವಾಗಿದೆ. ಎಂದಿನಂತೆ ಹೂವು, ಹಣ್ಣು, ತರಕಾರಿಗಳ ಬೆಲೆ ಗಗನಕ್ಕೇರಿದೆ.

ನಾಳೆ ಆಯುಧಪೂಜೆ, ವಿಜಯದಶಮಿ, ನಾಡಿದ್ದು ಶನಿವಾರ, ಭಾನುವಾರ, ನಂತರ ವಾಲ್ಮೀಕಿ ಜಯಂತಿ ಹೀಗೆ ಸಾಲಾಗಿ ರಜೆ ಬಂದಿರುವುದರಿಂದ ಊರಿಗೆ ಹೋಗುವವರು, ಪ್ರವಾಸ ಹೋಗುವವರ ಸಂಖ್ಯೆ ಜಾಸ್ತಿಯಾಗಿದೆ. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಜನಜಂಗುಳಿ ಕಂಡುಬರುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com