ಕಸ ವಿಲೇವಾರಿ ತಂದ ಕಸಿವಿಸಿ

ರಾಮನಗರ ಮತ್ತು ಚನ್ನಪಟ್ಟಣ ನಗರಸಭೆಗಳಿಗೆ ಕಸ ವಿಲೇವಾರಿ ವಿವಾದ ಕಸಿವಿಸಿ ಉಂಟು ಮಾಡಿದೆ. ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತದ ವೈಫಲ್ಯದಿಂದ ಸಮಸ್ಯೆ ಕಗ್ಗಂಟಾಗಿ ಪರಿಣಮಿಸಿದೆ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)
Updated on: 

ರಾಮನಗರ: ರಾಮನಗರ ಮತ್ತು ಚನ್ನಪಟ್ಟಣ ನಗರಸಭೆಗಳಿಗೆ ಕಸ ವಿಲೇವಾರಿ ವಿವಾದ ಕಸಿವಿಸಿ ಉಂಟು ಮಾಡಿದೆ. ಜನಪ್ರತಿನಿಧಿಗಳು ಮತ್ತು ಜಿಲ್ಲಾಡಳಿತದ ವೈಫಲ್ಯದಿಂದ ಸಮಸ್ಯೆ ಕಗ್ಗಂಟಾಗಿ ಪರಿಣಮಿಸಿದೆ.

ಕಣ್ವ ಜಲಾಶಯದ ಸಮೀಪ 2011ರಲ್ಲಿ ಮಂಜೂರಾದ 50 ಎಕರೆ ಸರ್ಕಾರಿ ಗೋಮಾಳದ ಜಮೀನಿನಲ್ಲಿ ಉಭಯ ನಗರಸಭೆಗಳ ಕಸ ವಿಲೇವಾರಿ ಘಟಕಗಳು ಸ್ಥಾಪನೆಯಾಗಿವೆ. ಇದನ್ನು ವಿರೋಧಿಸಿದ ಚಳವಳಿ ಭುಗಿಲೆದ್ದಿದೆ. ಕಣ್ವ ಉಳಿಸಿ ಹೋರಾಟ ಸಮಿತಿ ನೇತೃತ್ವದಲ್ಲಿ ಕಳೆದೆರಡು ವಾರದಿಂದ ಅನಿರ್ದಿಷ್ಟಾವಧಿ ಹೋರಾಟಕ್ಕೆ ಧುಮುಕಿರುವ ಸ್ಥಳೀಯರು ಎರಡೂ ನಗರಗಳ ಕಸ ವಿಲೇವಾರಿ ಅಡ್ಡಿಪಡಿಸುತ್ತಿದ್ದಾರೆ.

ಕಸಕ್ಕೆ ಕಳ್ಳ ಮಾರ್ಗ: ಕಣ್ವ ಉಳಿಸಿ ಹೋರಾಟ ಸಮಿತಿಯ ಚಳವಳಿಯನ್ನು ಉಭಯ ನಗರಸಭೆ ಆಡಳಿತಗಳ ಜತೆಗೆ ಜಿಲ್ಲಾಡಳಿತ, ಜನಪ್ರತಿನಿಧಿಗಳೂ ಪ್ರಾರಂಭದಲ್ಲಿ ಲಘುವಾಗಿ ಪರಿಗಣಿಸಿದ್ದರು. ಚಳವಳಿ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದ್ದು, ಈಗ ಬಿಸಿ ತಟ್ಟಿದೆ. ಬಿಬಿಎಂಪಿ ಕಸ ವಿಲೇವಾರಿಗೆ ಸಮಸ್ಯೆ ಎದುರಾದಾಗ ಅಲ್ಲಿನ ಗುತ್ತಿಗೆದಾರರು ರಾಮನಗರದ ಬಿಡದಿ ಆಸುಪಾಸಿನ ಪ್ರದೇಶ, ಬೆಂಗಳೂರು-ಮೈಸೂರು ಹೆದ್ದಾರಿ ಬದಿಯನ್ನೇ ತೊಟ್ಟಿಯಾಗಿಸಿಕೊಂಡಿದ್ದರು.

ರಾತ್ರೋರಾತ್ರಿ ಕದ್ದು ಮುಟ್ಟಿ ಕಸ ತಂದು ಸುರಿದು, ರಾಶಿಗೆ ಬೆಂಕಿ ಇಡುತ್ತಿದ್ದರು. ಅದೇ ಪರಿಸ್ಥಿತಿ ಈಗ ರಾಮನಗರ ಮತ್ತು ಚನ್ನಪಟ್ಟಣ ನಗರಸಭೆಗಳಿಗೂ ಎದುರಾಗಿದೆ. ಕಣ್ವ ಬಳಿಕ ಕಸ ವಿಲೇವಾರಿ ಘಟಕದ ಮಾರ್ಗ ಮುಚ್ಚಿರುವುದರಿಂದ ಎರಡೂ ನಗರಸಭೆಗಳು ಕಸ ವಿಲೇವಾರಿಗೆ ಕಳ್ಳ ಮಾರ್ಗಗಳನ್ನು ಹುಡುಕಿಕೊಂಡಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com