

ಶಿರಾ: ತಾಲೂಕಿನ ದ್ವಾರಾಳು ಗ್ರಾಮ ಮೂಲದ ಚಂದ್ರಕಾಂತ್ ಆರ್ಯ ಅವರು ಕೆನಡದ ಸಂಸತ್‍ಗೆ ಚುನಾಯಿತರಾಗಿದ್ದಾರೆ. ಕೆನಡದ ಒಟ್ಟಾವ ನಗರದ ನೇಪಿಯರ್ ಕ್ಷೇತ್ರದಿಂದ ಲಿಬರಲ್ ಪಾರ್ಟಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಅವರು ಜಯಶೀಲರಾಗಿದ್ದಾರೆ.
ದ್ವಾರಾಳು ಗ್ರಾಮದ ನಿವಾಸಿಯಾಗಿರುವ ನಿವೃತ್ತ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಕೆ. ಗೋವಿಂದಯ್ಯ ಅವರ ಪುತ್ರ 52 ವರ್ಷದ ಚಂದ್ರಕಾಂತ್ ಬೆಂಗಳೂರು ವಿವಿಯಿಂದ ಬಿ.ಇ.ಹಾಗೂ ಕವಿವಿಯಿಂದ ಎಂಬಿಎ ಪದವಿ ಪಡೆದಿದ್ದರು. ಡಿಆರ್ಡಿಒದಲ್ಲೂ ಸೇವೆ ಸಲ್ಲಿಸಿದ್ದರು. ವಿದೇಶದಲ್ಲಿ `ಇನ್‍ವೆಸ್ಟ್ ಒಟ್ಟಾವ' ಸಂಸ್ಥೆ ಸದಸ್ಯರಾಗಿ, `ಇಂಡೋ ಕೆನಡಾ ಒಟ್ಟಾವ ಬಿಸಿನೆಸ್ ಚೆಂಬರ್' ಅಧ್ಯಕ್ಷರಾಗಿ, `ಇಂಡೋ-ಕೆನಡಿಯ ನ್ ಕಮ್ಯುನಿಟಿ ಸೆಂಟರ್' ಅಧ್ಯಕ್ಷರಾಗಿ,`ಹಿಂದೂ ಸೊಸೈಟಿ ಆಫ್ ಒಟ್ಟಾವ' ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ.