ಹಾವೇರಿ: ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ 13 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವುದು ತಡವಾಗಿ ಬೆಳಕಿಗೆ ಬಂದಿದೆ. ಆದರೆ, ನ್ಯಾಯ ಕೊಡಬೇಕಾದ ಪೊಲೀಸರು ಪ್ರಕರಣ ದಾಖಲಿಸಿಕೊಳ್ಳದೆ ಪಾಲಕರನ್ನು ಹೆದರಿಸಿ ಕಳುಹಿಸಿದ್ದು, ಸುವರ್ಣ ನ್ಯೂಸ್ ತಂಡ ಬೆನ್ನುಬಿದ್ದ ಪರಿಣಾಮ ಎಚ್ಚೆತ್ತು ಪ್ರಕರಣ ದಾಖಲಿಸಿಕೊಳ್ಳಲು ಮುಂದಾಗಿದ್ದಾರೆ. ಅ. 15ರಂದು ಸಂಜೆ ಸುಮಾರು 7 ಗಂಟೆ ಹೊತ್ತಿಗೆ ಶಿಗ್ಗಾವಿ ಪಟ್ಟಣದಲ್ಲಿರುವ ಹೊಸಜೀವನ ಎನ್‍ಜಿಓ ಕಚೇರಿಯಲ್ಲಿ ಟ್ಯೂಷನ್ ಮುಗಿಸಿ ಸಹಪಾಠಿಗಳೊಂ ದಿಗೆ ಬಾಲಕಿ ಬರುತ್ತಿದ್ದಳು. ಶಬರಿನಗರದ ನಿರ್ಜನ ಪ್ರದೇಶದಲ್ಲಿ ಬಾಲಕಿಯರ ಮೇಲೆ ಬೈಕ್‍ನಲ್ಲಿ ಬಂದ ಇಬ್ಬರು ಯುವಕರು ದಾಳಿ ನಡೆಸಿದ್ದಾರೆ. ಆಗ ತಪ್ಪಿಸಿಕೊಳ್ಳಲು ಬಾಲಕಿಯರು ಓಡುವ ವೇಳೆ ಈಕೆ ಮಾತ್ರ ಸಿಕ್ಕಿಬಿದ್ದಿದ್ದು, ಅತ್ಯಾಚಾರವೆಸಗಲಾಗಿದೆ. ಬಾಲಕಿಯ ಅಪ್ಪ, ಅಮ್ಮ ತೀರಿಕೊಂಡಿದ್ದು,