ಲಾಲ್‍ಬಾಗ್‍ನಲ್ಲಿ ಆಕರ್ಷಣೀಯ ಆರ್ಕಿಡ್ ಶೋ

ಆರ್ಕಿಡ್ ಸಸಿಗಳನ್ನು ಬೆಳೆಸುವುದು ಎಷ್ಟು ಕಷ್ಟವೋ ಹಾಗೆಯೇ ಅದರ ಸಂರಕ್ಷಣೆ ಕೂಡ ಕಷ್ಟಕರವಾದದ್ದು, ಅದರ ಜತೆಗೆ ಎಲ್ಲ ಹೂವುಗಳನ್ನು ಅಲಂಕಾರಿಕವಾಗಿ ಬೆಳೆಸಿ, ಬಳಸುವ ಚಾಕಚಕ್ಯತೆಯನ್ನು ಬೆಳೆಗಾರರು ಅಳವಡಿಸಿಕೊಳ್ಳಬೇಕು ಎಂದು ಕೋಲ್ಕತಾ ಹೈಕೋರ್ಟ್ ನ ಮುಖ್ಯ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)
Updated on: 

ಬೆಂಗಳೂರು: ಆರ್ಕಿಡ್ ಸಸಿಗಳನ್ನು ಬೆಳೆಸುವುದು ಎಷ್ಟು ಕಷ್ಟವೋ ಹಾಗೆಯೇ ಅದರ ಸಂರಕ್ಷಣೆ ಕೂಡ ಕಷ್ಟಕರವಾದದ್ದು, ಅದರ ಜತೆಗೆ ಎಲ್ಲ ಹೂವುಗಳನ್ನು ಅಲಂಕಾರಿಕವಾಗಿ ಬೆಳೆಸಿ, ಬಳಸುವ ಚಾಕಚಕ್ಯತೆಯನ್ನು ಬೆಳೆಗಾರರು ಅಳವಡಿಸಿಕೊಳ್ಳಬೇಕು ಎಂದು ಕೋಲ್ಕತಾ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಮಂಜುಳಾ ಚೆಲ್ಲೂರ್ ತಿಳಿಸಿದರು.

ಆರ್ಕಿಡ್ ಸೊಸೈಟಿ ಲಾಲ್ ಬಾಗ್ ನಲ್ಲಿ ಹಮ್ಮಿಕೊಂಡಿದ್ದ ಆರ್ಕಿಡ್ ಶೋ ಉದ್ಘಾಟಿಸಿದ ಅವರು, ಆರ್ಕಿಡ್ ಹೂವುಗಳು ಎಲ್ಲ ಪ್ರದೇಶದಲ್ಲೂ ಬೆಳೆಯುವುದಿಲ್ಲ. ಅದರಲ್ಲಿ ಕೆಲವೊಂದು ಎಲ್ಲೆಡೆ ಬೆಳೆಯುತ್ತವೆ.

ನಾನು ಸುಮಾರು ವರ್ಷಗಳಿಂದ ಈ ಪ್ರದರ್ಶನಕ್ಕೆ ಬರುತ್ತಿದ್ದೇನೆ. ಪ್ರತಿ ವರ್ಷವೂ ಹೊಸತನ್ನು ಕಂಡಿದ್ದೇನೆ. ಈ ಬಾರಿ ಮಾಡಲಾಗಿರುವ ರೇನ್ ಟ್ರೀ ರೀತಿಯ ಹೂವಿನ ಜೋಡಣೆ ಸಾಕಷ್ಟು ಸಂತೋಷ ತಂದಿದೆ. ಬಗೆಬಗೆಯ 500 ಕ್ಕೂ ಹೆಚ್ಚು ರಾತಿಯ ಹೂವುಗಳಿವೆ. ಎಲ್ಲವೂ ಬೇರೆಬೇರೆ ಬಣ್ಣಗಳಿಂದ ಕಂಗೊಳಿಸುತ್ತದೆ ಎಂದು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಪಿ.ಬಿ.ರಾಮಮೂರ್ತಿ ಹೇಳಿದರು.

ಸುಮಾರು 300ಕ್ಕೂ ಹೆಚ್ಚು ಸದಸ್ಯರು ಬೆಳೆದಿರುವ ಡೆಂಟ್ರೋಬಿಯಮ್ಸ್, ಪ್ಯಾಪಿಲೋಪೀಡಿಯಂ, ವ್ಯಾಂಡಾ ಮತ್ತಿತರ ತಳಿಯ ಆರ್ಕಿಡ್ ಸಸಿಗಳನ್ನು ಪ್ರದರ್ಶಿಸಲಾಗುತ್ತದೆ. ಹೈಬ್ರೀಡ್ ತಳಿಗಳಾದ ಫಲನೋಪ್ಸಿಸ್, ವ್ಯಾಂಡಾ, ವೊಕಾರಾ ಸೇರಿದಂತೆ ಸುಮಾರು 15-10 ತಳಿಯ ಆರ್ಕಿಡ್ ಗಳನ್ನು ಪ್ರದರ್ಶಿಸಲಾಗುವುದು. ಮಾರಾಟಕ್ಕೆಂದೇ ಸುಮಾರು 12 ಬಗೆಯ ತಳಿಗಳಿರಲಿವೆ. ಅದರಲ್ಲೇ ಸ್ಪರ್ಧೆಗೋಸ್ಕರ 100 ಗಿಡಗಳು ಪ್ರದರ್ಶನಗೊಂಡವು. ಈ ಪ್ರದರ್ಶನ ನ.1ಕ್ಕೆ ಮುಕ್ತಾಯವಾಗಲಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com