

ಬೆಂಗಳೂರು: ಕಪ್ಪು ಹಣವನ್ನು ತೆರಿಗೆ ಪಾವತಿಸಿದ ಹಣವನ್ನಾಗಿ(ವೈಟ್ ಮನಿ) ಮಾಡಿಕೊಟ್ಟರೆ ಕೋಟ್ಯಾಂತರ ರುಪಾಯಿ ಕಮೀಷನ್ ನೀಡುವುದಾಗಿ ಹೇಳಿ ಸಾರ್ವಜನಿಕರಿಗೆ
ವಂಚಿಸುತ್ತಿದ್ದ ಜಾಲ ಪತ್ತೆ ಮಾಡಿರುವ ಸಿಸಿಬಿ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪರಪ್ಪನ ಅಗ್ರಹಾರ ಸಮೀಪದ ಚನ್ನಕೇಶವ ನಗರ ನಿವಾಸಿ ಕಿರಣ್ ಕುಮಾರ್(27), ಆಂಧ್ರಪ್ರದೇಶದ ಅನಂತಪುರ ಮೂಲದ ಕೆ. ಸೂರ್ಯನಾರಾಯಣ(41), ಜೆ.ಎಂ ರಸ್ತೆ ಬಸವಣ್ಣ ಲೇನ್‍ನ ಎಂ.ಮಂಜುನಾಥ್(56), ಬನ ಶಂಕರಿ 3ನೇ ಹಂತ ಕತ್ರಿಗುಪ್ಪೆ ನಿವಾಸಿ ಎಂ.ರಘು(32) ಹಾಗೂ ರಾಮನಗರದ ಚಿಕ್ಕಗೌಡನ ದೊಡ್ಡಿ ಸಿ.ರಾಜು(29) ಬಂಧಿತರು.
ಆರೋಪಿಗಳು `ಜೆನೆಸಿಸ್ ಎಜ್ಯುಕೇಷನಲ್ ಆ್ಯಂಡ್ ಚಾರಿಟೇ ಬಲ್ ಟ್ರಸ್ಟ್' ಹೆಸರಿನಲ್ಲಿ ತಮ್ಮ ಬಳಿ ತಮಿಳುನಾಡಿನ ಕೆಲವು ಟ್ರಸ್ಟ್‍ಗಳಲ್ಲಿ ಹೇರಳವಾದ ಕಪ್ಪು ಹಣವಿದೆ. ಈ ಹಣವನ್ನು ವೈಟ್ ಮನಿಯಾಗಿ ಮಾರ್ಪಾಡು ಮಾಡಿ ಶೇ.80ರಷ್ಟು ಹಣ ನಮಗೆ ಹಾಗೂ ಶೇ.20 ಕಮೀಷನ್ ನಿಮಗೆ ಎಂದು ಪುಸಲಾ ಯಿಸುತ್ತಿದ್ದರು. ಆದರೆ, ನಿಮಗೆ ಸಾವಿರಾರು ಕೋಟಿ ಹಣ ವರ್ಗಾವಣೆ ಮಾಡುವುದಕ್ಕೂ ಮೊದಲು ನಾವು ಹೇಳಿದ ಖಾತೆಗೆ ರು.2ಕೋಟಿ ಹಣ ಹಾಕಬೇಕು ಎಂದು ವಂಚಿಸಲು ಯತ್ನಿಸುತ್ತಿದ್ದರು.
ಈ ಬಗ್ಗೆ ಮಾಹಿತಿ ಸಂಗ್ರಹಿಸಿದ ಸಿಸಿಬಿ ಅಧಿಕಾರಿಗಳು ಮಲ್ಲೇಶ್ವರ ಮತ್ತು ಕತ್ರಿಗುಪ್ಪೆಯ ಕಾಪಿs ಡೇಗಳ ಮೇಲೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ ಜೆನೆಸಿಸ್
ಎಜ್ಯುಕೇಷನಲ್ ಆ್ಯಂಡ್ ಚಾರಿಟೇ ಬಲ್ ಟ್ರಸ್ಟ್ ಹೆಸರಿಗೆ ಭಾರತ ಸರ್ಕಾರ ಆದಾಯ ತೆರಿಗೆ ಆಯುಕ್ತರ ಕಚೇರಿಯಿಂದ ನೀಡಿರುವಂತೆ ಸೃಷ್ಟಿ ಸಿರುವ ನಕಲಿ ಪ್ರಮಾಣಪತ್ರದ
ಕಲರ್ ಝರಾಕ್ಸ್ ಪ್ರತಿ. ಅದೇ ಟ್ರಸ್ಟ್‍ನ ಹೆಸರಿನಲ್ಲಿ ರು.22,234 ಕೋಟಿ ಹಣ ಇರುವ ಪತ್ರ ವಶಪಡಿಸಿಕೊಳ್ಳಲಾಗಿದೆ.