ಬಿಜೆಪಿಯಲ್ಲಿ ಕ್ಷೀಣಿಸಿದ ಭರವಸೆ; ಚುನಾವಣೆಗಿಲ್ಲ ಪಕ್ಷದ ಶಾಸಕರು, ಸಂಸದರು

ಬಿಬಿಎಂಪಿ ಮೇಯರ್ ಗದ್ದುಗೆ ಹಿಡಿಯಲು ಕಾಂಗ್ರೆಸ್ ಪಕ್ಷವು ಜೆಡಿಎಸ್ ಮನವೊಲಿಸಿರುವ ಬೆನ್ನಲ್ಲೇ ತಳಮಳಗೊಂಡಿರುವ ಬಿಜೆಪಿಯು ನಾನಾ ರೀತಿಯ ತಂತ್ರಗಳನ್ನು ರೂಪಿಸುತ್ತಲೇ ಇದೆಯಾದರೂ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬರಲಾಗಿಲ್ಲ...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)
Updated on: 

ಬೆಂಗಳೂರು: ಬಿಬಿಎಂಪಿ ಮೇಯರ್ ಗದ್ದುಗೆ ಹಿಡಿಯಲು ಕಾಂಗ್ರೆಸ್ ಪಕ್ಷವು ಜೆಡಿಎಸ್ ಮನವೊಲಿಸಿರುವ ಬೆನ್ನಲ್ಲೇ ತಳಮಳಗೊಂಡಿರುವ ಬಿಜೆಪಿಯು ನಾನಾ ರೀತಿಯ ತಂತ್ರಗಳನ್ನು ರೂಪಿಸುತ್ತಲೇ ಇದೆಯಾದರೂ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬರಲಾಗಿಲ್ಲ. ಈ ನಡುವೆಯೇ ತನ್ನ ಮುಂದಿರುವ ಆಯ್ಕೆಗಳ ಬಗ್ಗೆ ಪಕ್ಷದೊಳಗೆ ಚರ್ಚೆ ಆರಂಭವಾಗಿದೆ.

ನ್ಯಾಯಾಲಯದ ಮೊರೆ ಹೋಗಿದ್ದ ಬಿಜೆಪಿಗೆ ಅಲ್ಲೂ ಸ್ಪಷ್ಟ ಉತ್ತರ ಸಿಗದ ಹಿನ್ನೆಲೆಯಲ್ಲಿ ಈ ವಿಷಯವನ್ನು ಸಾರ್ವಜನಿಕರ ಮುಂದೆ ಗಂಭೀರ ರೀತಿಯಲ್ಲಿ ತೆಗೆದುಕೊಂಡು ಹೋಗುವ ಬಗ್ಗೆ
ಯೋಚಿಸುತ್ತಿದೆ. ಬೆಂಗಳೂರಿನ ಜನರು 100 ಸ್ಥಾನ ನೀಡಿ ಬಹುಮತ ಕೊಟ್ಟರೂ ಕಾಂಗ್ರೆಸ್ ಅಧಿಕಾರದಿಂದ ದೂರ ಇಡುತ್ತಿದೆ ಎಂಬ ವಿಷಯವನ್ನು ಜನರಮನಸ್ಸಿನಲ್ಲಿ ಮನದಟ್ಟು
ಮಾಡಿಕೊಡಬಾರದೆಂಬ ಆಲೋಚನೆಯೂ ಪಕ್ಷದಲ್ಲಿದೆ.

ಅದೇ ರೀತಿ ಮೇಯರ್ ಚುನಾವಣೆ ವೇಳೆ ಹೇಗಿದ್ದರೂ ಗೆಲ್ಲುವುದು ಸುಲಭವಲ್ಲದೇ ಇರುವುದರಿಂದ ಕೇಂದ್ರ ಸಚಿವರು (ಸಂಸದರು), ವಿಧಾನಪರಿಷತ್ ಸದಸ್ಯರು ಮತ್ತು ಶಾಸಕರನ್ನು ಚುನಾವಣೆಗೆ ಕರೆಸದೇ ಜನರಿಗೆ ಒಂದು ಸಂದೇಶ ರವಾನಿಸುವ ಬಗ್ಗೆಯೂ ಚಿಂತನೆ ನಡೆದಿದೆ. ಆದರೆ, ಕೊನೆ ಹಂತದಲ್ಲಿ ಜೆಡಿಎಸ್ ಪಕ್ಷವನ್ನು ಬೆಂಬಲಿಸಬಹುದೆಂಬ ಆಶಾಭಾವನೆಯೂ ಪಕ್ಷದ ನಾಯಕರಲ್ಲಿದೆ. ಒಟ್ಟಾರೆ. ಗುರುವಾರ ನಡೆವ ಸಭೆಯಲ್ಲಿ ಒಂದು ಸ್ಪಷ್ಟ ತೀರ್ಮಾನವಾಗುವ ನಿರೀಕ್ಷೆ ಇದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com