ಕಟ್ಟಡದಿಂದ ಬಿದ್ದು ವಿಜ್ಞಾನಿ ಸಾವು

ಅರಣ್ಯ ಮತ್ತು ಪರಿಸರ ಇಲಾಖೆಯ ಪರಿಸರ ವಿಜ್ಞಾನಿಯೊಬ್ಬರು ಅಪಾರ್ಟ್‍ಮೆಂಟ್‍ನ 4ನೇ ಮಹಡಿಯಿಂದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಬೆಂಗಳೂರು: ಅರಣ್ಯ ಮತ್ತು ಪರಿಸರ ಇಲಾಖೆಯ ಪರಿಸರ ವಿಜ್ಞಾನಿಯೊಬ್ಬರು ಅಪಾರ್ಟ್‍ಮೆಂಟ್‍ನ 4ನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಘಟನೆ ಪುಲಕೇಶಿನಗರದ ಸ್ಟೀಫನ್ ರಸ್ತೆಯಲ್ಲಿನ ಅಪಾರ್ಟ್‍ಮೆಂಟ್‍ನಲ್ಲಿ ನಡೆದಿದೆ.

ಸ್ಟೀಫನ್ ರಸ್ತೆ ಭರುಚಾ ಅಪಾರ್ಟ್‍ಮೆಂಟ್‍ನ ಜಾನ್ (55)ಮೃತರು. ಮಂಗಳವಾರ ಬೆಳಿಗ್ಗೆ 3.30ರ ಸುಮಾರಿಗೆ ಮಹಡಿಯಿಂದ ಬಿದ್ದ ಪರಿಣಾಮ ಜಾನ್ ಅವರ ಕೈ ತುಂಡಾಗಿ, ತಲೆಗೆಗಂಭೀರ ಗಾಯವಾಗಿತ್ತು. ರಕ್ತದ ಮಡುವಿನಲ್ಲಿದ್ದುದ್ದನ್ನು ಗಮನಿಸಿ ಅಕ್ಕಪಕ್ಕದವರು ಠಾಣೆಗೆ ಮಾಹಿತಿ ನೀಡಿ ಗಾಯಾಳುವನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದರು.

ಚಿಕಿತ್ಸೆ ಫಲಿಸದೆ ಬೆಳಗ್ಗೆ 9.30ಕ್ಕೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅರಣ್ಯ ಮತ್ತು ಪರಿಸರ ಇಲಾಖೆಯಲ್ಲಿ ಪರಿಸರ ವಿಜ್ಞಾನಿಯಾಗಿದ್ದ ಜಾನ್ ಅವಿವಾಹಿತರಾಗಿದ್ದರು.ಒಂಟಿ ಯಾಗಿ ವಾಸವಿದ್ದರು. ಸಂಬಂಧಿಕರು ಮತ್ತು ಪಾಲಕರಿಂದ ದೂರವಾಗಿದ್ದರು. ಮಾನಸಿಕ ಖಿನ್ನತೆಯಿಂದ ಆತ್ಮಹತ್ಯೆ ಮಾಡಿಕೊಂಡಿರಬೇಕು ಇಲ್ಲವೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com