ಅ.3ರಿಂದ ಎರಡನೇ ರೈತ ಚೈತನ್ಯ ಯಾತ್ರೆ

ಬಿಜೆಪಿ ಹಮ್ಮಿಕೊಂಡಿದ್ದ ರೈತ ಚೈತನ್ಯ ಯಾತ್ರೆಗೆ ಅಭೂತಪೂರ್ವ ಬೆಂಬಲ ದೊರೆತಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 3 ರಿಂದ 11 ರವರೆಗೆ ಎರಡನೇ ಹಂತದ ರೈತಚೈತನ್ಯ ಯಾತ್ರೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಹೇಳಿದರು...
(ಸಾಂದರ್ಭಿಕ  ಚಿತ್ರ)
(ಸಾಂದರ್ಭಿಕ ಚಿತ್ರ)
Updated on: 

ಬೆಂಗಳೂರು: ಬಿಜೆಪಿ ಹಮ್ಮಿಕೊಂಡಿದ್ದ ರೈತ ಚೈತನ್ಯ ಯಾತ್ರೆಗೆ ಅಭೂತಪೂರ್ವ ಬೆಂಬಲ ದೊರೆತಿರುವ ಹಿನ್ನೆಲೆಯಲ್ಲಿ ಅಕ್ಟೋಬರ್ 3 ರಿಂದ 11 ರವರೆಗೆ ಎರಡನೇ ಹಂತದ ರೈತ
ಚೈತನ್ಯ ಯಾತ್ರೆ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎರಡು ದಿನ ನಡೆದ ಬಿಜೆಪಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ವಿಚಾರದ ಬಗ್ಗೆ ಚರ್ಚಿಸಲಾಗಿದ್ದು, ಹಾವೇರಿ ಯಿಂದ ಆರಂಭವಾಗಿ ಮೈಸೂರಿ- ನಲ್ಲಿ ಅಂತ್ಯಗೊಂಡ ಯಾತ್ರೆಗೆ ಉತ್ತಮ ಬೆಂಬಲ ದೊರಕಿದೆ. ಜನರು ಸರ್ಕಾರದ ವಿರುದಟಛಿ ಆಕ್ರೋಶ ವ್ಯಕ್ತಪಡಿಸಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ರಾಜ್ಯದ 25 ಜಿಲ್ಲೆಗಳ 57 ಕೇಂದ್ರಗಳಲ್ಲಿ ನಡೆದ ಸಭೆಯಲ್ಲಿ ಸಾವಿರಾರು ಮಂದಿ ಭಾಗವಹಿಸಿ ದ್ದರು. ಈ ವೇಳೆ 700 ಹಳ್ಳಿಗಳಿಗೆ ನೀರು ಪೂರೈಕೆಯಾಗದಿರುವುದು ನಮಗೆ ತಿಳಿಯಿತು.

ಇದರ ಶಮನಕ್ಕಾಗಿ ಎರಡನೇ ಹಂತದ ಯಾತ್ರೆಯನ್ನು ಬಳ್ಳಾರಿಯಿಂದ ನರಗುಂದದವರೆಗೆ 50 ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು. ಸಮಾಜದಲ್ಲಿ ಆರ್ಥಿಕ ಮತ್ತು  ಸಾಮಾಜಿಕವಾಗಿ ಹಿಂದುಳಿದ ವರ್ಗಗಳಿಗಾಗಿಯೇ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮುದ್ರಾ ಬ್ಯಾಂಕ್ ಯೋಜನೆಯನ್ನು ಪ್ರಚುರ ಪಡಿಸಲು ಇದೇ 25ರಿಂದ ಅಕ್ಟೋಬರ್ 2 ರವರೆಗೆ ಬಿಜೆಪಿ ಬ್ಯಾಂಕುಗಳು ಸಂಯುಕ್ತಾಶ್ರಯದಲ್ಲಿ ಸಪ್ತಾಹ ಹಮ್ಮಿಕೊಳ್ಳಲಾಗುವುದು. ಬಿಜೆಪಿ ಸಂಸದರು, ಶಾಸಕರು ಹಿಂದುಳಿದ ವರ್ಗದವರಿಗೆ ಮುದ್ರಾ ಬ್ಯಾಂಕ್ ಯೋಜನೆ ಬಗೆಗೆ ಅರಿವು ಮೂಡಿಸುವರು. ರು.50 ಸಾವಿರದಿಂದ ರು.10 ಲಕ್ಷದವರೆಗೂ ಸಿಗುವ ಸೌಲಭ್ಯ ಬಳಸಿಕೊಂಡು ಸ್ವಉದ್ಯೋಗ ಕಂಡುಕೊಳ್ಳಲು ಅನುವು ಮಾಡಿಕೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.

ಎಸ್ಕಾಂಗೆ ಮುತ್ತಿಗೆ: ರಾಜ್ಯದಲ್ಲಿ ತಲೆದೋರಿರುವ ವಿದ್ಯುತ್ ಕ್ಷಾಮ ಪರಿಹರಿಸುವಲ್ಲಿ ವಿಫಲವಾಗಿರುವ ರಾಜ್ಯ ಸರ್ಕಾರದ ಧೋರಣೆ ಖಂಡಿಸಿ ಇದೇ 22 ಮತ್ತು 23 ರಂದು ಎಲ್ಲ ತಾಲೂಕುಗಳಲ್ಲಿರುವ ಎಸ್ಕಾಂ ಕಚೇರಿಗೆ ಬೀಗ ಜಡಿದು ಮುತ್ತಿಗೆ ಹಾಕಲಾಗುವುದು. ಸಚಿವ ಸ್ಥಾನ ಸಿಗದಿದ್ದಾಗ ತಮ್ಮ ಪವರ್ ಬಳಸಿ ಪವರ್ ಮಿನಿಸ್ಟ್ರಾದ ಡಿ. ಕೆ. ಶಿವಕುಮಾರ್ ಖಾತೆ ನಿರ್ವಹಿಸುವಲ್ಲಿ ಎಡವಿದ್ದಾರೆ. ಅವರ ಖಾತೆಯನ್ನು ಮುಖ್ಯಮಂತ್ರಿಗಳು ವಾಪಸ್ ಪಡೆದು ತಾವೇ ನಿರ್ವಹಿಸಬೇಕು. ಸಿಎಂ ಮತ್ತು ಇಂಧನ ಸಚಿವರ ನಡುವಿನ ಹೊಂದಾಣಿಕೆ ಕೊರತೆ
ಇದಕ್ಕೆ ಕಾರಣವಾಗಿದೆ. ಬರ ಪರಿಸ್ಥಿತಿಯ ಬಗ್ಗೆ ಮುಖ್ಯಮಂತ್ರಿಗಳು ತಾವು ಅಸಹಾಯಕ ಎಂದರೆ, ಡಿ.ಕೆ.ಶಿವಕುಮಾರ್ ದೇವರೆ ಗತಿ ಎನ್ನುತ್ತಾರೆ. ಇವರಿಗೆ ಆಡಳಿತ ನಡೆಸಲು
ಆಗದಿದ್ದಲ್ಲಿ ಅಧಿಕಾರದಿಂದ ಕೆಳಗಿಳಿಯಬೇಕು ಎಂದು ತಾಕೀತು ಮಾಡಿದರು. ಶಾಸಕರಾದ ವಿಶ್ವೇಶ್ವರ ಹೆಗಡೆ ಕಾಗೇರಿ, ಸಿ.ಟಿ.ರವಿ, ಸೋಮಣ್ಣ ಬೆವಿನಮರದ ಉಪಸ್ಥಿತರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com