

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ 136 ಸಂಚಾರಿ ಘಟಕಗಳು ಹಾಗೂ 36 ಕೆರೆಗಳಲ್ಲಿ ಶನಿವಾರ ಒಟ್ಟು 52,350 ಗಣೇಶ ಮೂರ್ತಿಗಳ ವಿಸರ್ಜನೆಯಾಗಿವೆ.
ಹಿಂದಿನ ದಿನ (ಶುಕ್ರವಾರ) 2.60 ಲಕ್ಷ ಮೂರ್ತಿಗಳು ವಿಸರ್ಜನೆಯಾಗಿದ್ದು ಇದುವರೆಗೆ ಒಟ್ಟು 3.12 ಲಕ್ಷ ಮೂರ್ತಿಗಳು ವಿಸರ್ಜನೆಯಾದಂತಾಗಿದೆ. ಶನಿವಾರ ಪ್ರಮಾಣ ಕಡಿಮೆಯಾಗಿದ್ದು, 52 ಸಾವಿರ ಮೂರ್ತಿಗಳು ಮಾತ್ರ ವಿಸರ್ಜನೆಯಾಗಿವೆ. ಪ್ರಮುಖವಾಗಿ ಸ್ಯಾಂಕಿ ಕೆರೆ, ಯಡಿಯೂರು ಕೆರೆ, ಹಲಸೂರು ಕೆರೆಗಳಲ್ಲಿ ಹೆಚ್ಚಿನ ಮೂರ್ತಿಗಳು ವಿಸರ್ಜನೆಯಾಗಿವೆ.
ಸಂಚಾರಿ ಘಟಕಗಳಲ್ಲೂ ಹೆಚ್ಚು ಪ್ರಮಾಣದಲ್ಲಿ ಮೂರ್ತಿಗಳು ವಿಸರ್ಜಿಸಲ್ಪಟ್ಟಿವೆ. ಮಹದೇವಪುರ ವಲಯವೊಂದರಲ್ಲಿ ಸುಮಾರು 900 ಮೂರ್ತಿಗಳು ಕೆರೆ ಹಾಗೂ ಸಂಚಾರಿ ಘಟಕಗಳಲ್ಲಿ ವಿಸರ್ಜನೆಯಾಗಿದೆ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ತಿಳಿಸಿದ್ದಾರೆ.