ಅಕ್ರಮ ಪತ್ತೆಗೆ ಉಪಗ್ರಹ ನೆರವು

ಉಪಗ್ರಹಗಳ ನೆರವಿನಿಂದ ಅಕ್ರಮ ಗಣಿಗಾರಿಕೆ ತಡೆ, ಹೊಸ ನಿಕ್ಷೇಪಗಳ ಶೋಧಕ್ಕೆ ವೈಮಾನಿಕ ಸಮೀಕ್ಷೆ ಹಾಗೂ ಬಿಗಿ ಗಣಿ ಗಣಿ ನೀತಿ ಅಳವಡಿಸಿಕೊಳ್ಳುವ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 
 ಬೆಂಗಳೂರು: ಉಪಗ್ರಹಗಳ ನೆರವಿನಿಂದ ಅಕ್ರಮ ಗಣಿಗಾರಿಕೆ ತಡೆ,  ಹೊಸ ನಿಕ್ಷೇಪಗಳ ಶೋಧಕ್ಕೆ ವೈಮಾನಿಕ ಸಮೀಕ್ಷೆ  ಹಾಗೂ ಬಿಗಿ ಗಣಿ  ಗಣಿ ನೀತಿ ಅಳವಡಿಸಿಕೊಳ್ಳುವ ವಾಗ್ದಾನ ನೀಡುವ ಮೂಲಕ ಮೂರು ದಿನಗಳ ಗಣಿಗಾರಿಕೆ ನಿಕ್ಷೇಪ ಅನ್ವೇಷಣಾ ಸಮ್ಮೇಳನ ಮತ್ತು ವ್ಯಾಪಾರ ಮೇಳಕ್ಕೆ ಬೆಂಗಳೂರು ಅಂತಾ ರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಚಾಲನೆ ದೊರೆಯಿತು. ಸಮಾರಂಭದಲ್ಲಿ ಮಾತನಾಡಿದ ಇಲಾಖೆ ಕಾರ್ಯದರ್ಶಿ ಬಲವೀಂದರ್ ಕುಮಾರ್ ಮಾತನಾಡಿ, ``ಉದ್ಯಮಸ್ನೇಹಿ ಗಣಿ ನೀತಿಯನ್ನು ಅಳವಡಿಸಿಕೊಳ್ಳಲು ಮುಂದಾ ಗಿರುವ ಸರ್ಕಾರ, ಅಂತಾರಾಷ್ಟ್ರೀಯ ಏಜೆನ್ಸಿಯೊಂದಕ್ಕೆ ನೂತನ ನಿಕ್ಷೇಪಗಳ ವೈಮಾನಿಕ ಸಮೀಕ್ಷೆ ಹೊಣೆ ನೀಡಲಿದೆ. 8 ಲಕ್ಷ ಚದರ ಕಿ.ಮೀ. ಪ್ರದೇಶದಲ್ಲಿ ಸಮೀಕ್ಷೆ ನಡೆಯಲಿದ್ದು, ಉದ್ಯಮಸ್ನೇಹಿ ವಾತಾವರಣ ರೂಪಿಸಲಾಗುವುದು,'' ಎಂದರು. ``ಸಮೀಕ್ಷೆ ಮುಗಿಯಲು ಮೂರ್ನಾಲ್ಕು ವರ್ಷಗಳೇ ಬೇಕಾಗುತ್ತವೆ. ಈ ಮಧ್ಯೆ, ಅಕ್ರಮ ಗಣಿಗಾರಿಕೆ ಪತ್ತೆಗೆ ಉಪಗ್ರಹಗಳ ನೆರವು ಪಡೆಯಲಾಗುವುದು ಹಾಗೂ ಯಥಾಸ್ಥಿತಿ ಮಾಹಿತಿ ಪಡೆಯಲು ವಿಶೇಷ ಆ್ಯಪ್‍ಗಳನ್ನು ಅಭಿವೃದ್ಧಿಪಡಿಸಲಾಗುವುದು. ಇಂಥ ಎಲ್ಲ ಉದ್ದೇಶಗಳ ನಿರ್ವಹಣೆಗಾಗಿ ಕಳೆದ ತಿಂಗಳು ರಾಷ್ಟ್ರೀಯ ಖನಿಜ ಶೋಧ ಟ್ರಸ್ಟ್ ಸ್ಥಾಪಿಸಲಾಗಿದೆ. ಬಿಎಚ್‍ಪಿ ಬಿಲ್ಟನ್, ರಿಯೋ ಟಿಂಟೊದಂಥ ಜಾಗತಿಕ ಗಣಿ ದೈತ್ಯರ ತಾಂತ್ರಿಕ ಪರಿಣಿತಿಯನ್ನು ನಿಕ್ಷೇಪ ಪತ್ತೆಗೆ
ಬಳಸಿಕೊಳ್ಳಲಾಗುವುದು. ಟ್ರಸ್ಟ್ ನ ಕಾರ್ಯ ನಿರ್ವಹಣೆಗಾಗಿ ರು.400-500 ಕೋಟಿ ಅನುದಾನ ನೀಡಲಾಗಿದೆ'' ಎಂದರು. ಖಾಸಗಿ ಸಂಸ್ಥೆಗಳನ್ನೂ ನಿಕ್ಷೇಪ ಪತ್ತೆಗೆ ತೊಡಗಿಸಿಕೊಳ್ಳುವ ಮೂಲಕ ಗಣಿ ಉದ್ಯಮ ದಿಂದ ಬರುತ್ತಿರುವ ಒಟ್ಟು ರಾಷ್ಟ್ರೀಯ ಉತ್ಪನ್ನ (ಜಿಡಿಪಿ) ಪ್ರಮಾಣವನ್ನು ಶೇ.2ರಿಂದ ಶೇ.6ಕ್ಕೆ ಏರಿಸುವ ಗುರಿ ಇದೆ ಎಂದು ವಿವರಿಸಿದರು.
ಮೂರು ದಿನಗಳ ಸಮ್ಮೇಳನದಲ್ಲಿ ಗಣಿ ಕುರಿತ ವರ್ತಮಾನ ಹಾಗೂ ಭವಿಷ್ಯದ ಕುರಿತು ಸಂವಾದ , ಪ್ರದರ್ಶನಗಳು ಏರ್ಪಾಟಾಗಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com