

ಬೆಂಗಳೂರು: ಕದ್ದ ಆಟೋಗಳ ಎಂಜಿನ್ ಹಾಗೂ ಚಾಸಿ ನಂಬರ್ ಬದಲಿಸಿ ತಮಿಳುನಾಡಿ ನಲ್ಲಿ ಮಾರಾಟ ಮಾಡುತ್ತಿದ್ದ ಐವರು ಆರೋಪಿಗಳನ್ನು ಕಲಾಸಿಪಾಳ್ಯ ಪೊಲೀಸರು ಬಂಧಿಸಿದ್ದಾರೆ.
ಕೃಷ್ಣಗಿರಿಯ ಹರೀಶ್ (35), ವಿ. ಮುರುಗೇಶ್ (30) ಬೊಮ್ಮನಹಳ್ಳಿಯ ಪೈರೋಜ್ (45), ಚಂದಾಪುರದ ಮೆಹಬೂಬ್ ಬಾಬು (40) ಹಾಗೂ ಚಾಮರಾಜಪೇಟೆಯ ಹೇಮಚಂದ್ರ (50) ಬಂಧಿತರು. ಆರೋಪಿಗಳು ಕಲಾಸಿಪಾಳ್ಯ ಕೃಂಬಿಗಲ್ ರಸ್ತೆಯಲ್ಲಿ ಆಟೋದಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದಾಗ ತಡೆದ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಆಟೋ ಕಳ್ಳರು ಎಂದು ಗೊತ್ತಾಗಿದೆ.
ಮನೆ ಮುಂದೆ ಮತ್ತು ಪಾರ್ಕಿಂಗ್ ಸ್ಥಳಗಳಲ್ಲಿ ನಿಲ್ಲಿಸಿದ್ದ ಆಟೋಗಳನ್ನು ಮೆಹಬೂ ಬ್, ಹೇಮಚಂದ್ರ ಮತ್ತು ಪೈರೋಜ್ ಕಳವು ಮಾಡಿ ತಮಿಳುನಾಡಿಗೆ ತೆಗೆದುಕೊಂಡು ಹೋಗುತ್ತಿದ್ದರು. ಅಲ್ಲಿ ಹರೀಶ್ ಮತ್ತು ಮುರುಗೇಶ್ ಮೂಲಕ ಗುಜರಿ ಆಟೋಗಳ ನೋಂದಣಿ ಪುಸ್ತಕಗಳನ್ನು ಗುಜರಿ ಅಂಗಡಿ ಮತ್ತು ಆರ್‍ಟಿಓ ಕಚೇರಿಯಲ್ಲಿ ತೆಗೆದುಕೊಳ್ಳುತ್ತಿದ್ದರು. ಕದ್ದ ಆಟೋಗಳ ಎಂಜಿನ್ ಮತ್ತು ಚಾಸಿ ನಂಬರ್ ಅಳವಡಿಸಿ ತಮಿಳುನಾಡಿನಲ್ಲಿ ಮಾರುತ್ತಿದ್ದರು.