

ನವದೆಹಲಿ: ಈ ಬಾರಿಯ ನೈರುತ್ಯ ಮಾನ್ಸೂನ್ 14 ಶೇಕಡ ಮಳೆಯ ಕೊರತೆಯೊಂದಿಗೆ ಕೊನೆಯಾಗಿದೆ. ಈ ಮಳೆಗಾಲದಲ್ಲಿ ದೇಶದ ಶೇಕಡಾ 55 ಭಾಗಕ್ಕಷ್ಟೇ ಸಾಮಾನ್ಯ ಮಳೆಯಾಗಿದೆ. ಕರ್ನಾಟಕದಲ್ಲಿ ಬರ ತಲೆದೋರಬಹುದೆಂದು ಭಾರತೀಯ ಹವಾಮಾನ ಇಲಾಖೆ ಅಂದಾಜಿಸಿದೆ.
ನೈರುತ್ಯ ಮಳೆಮಾರುತಗಳ ಅಧಿಕೃತ ಅವಧಿ ಜೂನ್ 1ರಿಂದ ಸೆ.30. ಕಳೆದ ವರ್ಷವೂ ಶೇ.12 ಮಳೆ ಕೊರತೆಯುಂಟಾಗಿತ್ತು. ಈ ಸಲದ ಮಳೆಕೊರತೆ ಎಲ್ ನಿನೋದ ಪರಿಣಾಮದಿಂದಾಗಿದೆ. ದೇಶದ ಈಶಾನ್ಯ ಭಾಗಕ್ಕೆ ಶೇ.17, ಮಧ್ಯಭಾರತಕ್ಕೆ ಶೇ.16, ದಕ್ಷಿಣ ಭಾರತಕ್ಕೆ ಶೇ.15 ಮತ್ತು ಪೂರ್ವಭಾಗಕ್ಕೆ ಶೇ.8 ಮಳೆಕೊರತೆ ಉಂಟಾಗಿದೆ.
ಕೆಲವು ಪ್ರದೇಶಗಳಲ್ಲಿ ಬರಪರಿಸ್ಥಿತಿ ತಲೆದೋರಿದೆ. ಉದಾಹರಣೆಗೆ ಮರಾಠವಾಡದಲ್ಲಿ 45 ಶೇಕಡಾ, ಪಶ್ಚಿಮ ರಾಜಸ್ಥಾನದಲ್ಲಿ 46 ಶೇಕಡಾ ಕೊರತೆ ತಲೆದೋರಿದೆ. ಕರ್ನಾಟಕದಂಥ ಕೆಲ ರಾಜ್ಯಗಳಲ್ಲಿ ಬರ ಹಾಗೂ ದೇಶದ ಖಾರಿಫ್ ಸೀಸನ್‍ನ ಆಹಾರಧಾನ್ಯ ಉತ್ಪಾದನೆಯಲ್ಲಿ 1.78-ರಿಂದ 124.05 ಟನ್‍ವರೆಗೆ ಕೊರತೆ ತಲೆದೋರಬಹುದು ಎಂದು ಅಂದಾಜಿಸಲಾಗಿದೆ.