ಕಾರು ಡಿಕ್ಕಿಯಾಗಿ ಎಂಜಿನಿಯರ್ ವಿದ್ಯಾರ್ಥಿಯೊಬ್ಬ ಮೃತಪಟ್ಟಿರುವ ಘಟನೆ ಗುರುವಾರ ಮಡಿವಾಳ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಾರುತಿ ನಗರದ ನಿವಾಸಿ ಅರುಣ್‍ಕುಮಾರ್(21) ಮೃತಪಟ್ಟವರು. ನಗರದ ಖಾಸಗಿ ಕಾಲೇಜಿನಲ್ಲಿ ಮೂರನೇ ವರ್ಷದ ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿರುವ ಇವರು, ರಾತ್ರಿ 11.30ರ ಸುಮಾರಿಗೆ ಮಾರುತಿ ನಗರದ ಗಂಗೋತ್ರಿ ವೃತ್ತದಲ್ಲಿ ರಸ್ತೆ ದಾಟುತ್ತಿದ್ದರು.