ಕೆಲವು ತಿಂಗಳುಗಳ ಹಿಂದೆಯಷ್ಟೇ ಮೂವರು ಮಕ್ಕಳು ತನ್ನನ್ನು ತೊರೆದಿದ್ದಾರೆ ಎಂದು ಸಹಾಯವಾಣಿಗೆ 87ರ ಹರೆಯದ ವೃದ್ಧರೊಬ್ಬರು ಕರೆ ಮಾಡಿದ್ದರು. ತನ್ನೆಲ್ಲ ಆಸ್ತಿಗಳನ್ನು ಮಕ್ಕಳಿಗೆ ಹಂಚಿಕೊಟ್ಟ ನಂತರ ಆತನ ಕುಟುಂಬವೇ ಆತನನ್ನು ಕಡೆಗಣಿಸಿತ್ತು. ಈ ಬಗ್ಗೆ ವಿಚಾರಣೆ ನಡೆಸಿದ ಆಪ್ತ ಸಲಹೆಗಾರರು ಕುಟುಂಬದವರನ್ನು ಕರೆಸಿ ಮಾತುಕತೆ ನಡೆಸಿದ್ದರು. ಅನಂತರ ಆ ಹಿರಿಯ ವ್ಯಕ್ತಿಯ ಇಬ್ಬರು ಮೊಮ್ಮಕ್ಕಳು ತಿಂಗಳಿಗೆ ರು. 1000 ನೀಡುವಂತೆ ಒಪ್ಪಿಕೊಂಡರು. ಎರಡನೇ ಮಗ ಅಪ್ಪನಿಗೆ ಆಹಾರ ಮತ್ತು ಔಷಧಿಗಳನ್ನು ಪೂರೈಸಲು ಒಪ್ಪಿಕೊಂಡಿದ್ದು, ಮೂರನೇ ಮಗ ಅಪ್ಪನಿಗೆ ಮನೆ ಒದಗಿಸಲು ಒಪ್ಪಿಕೊಂಡಿದ್ದಾನೆ.