ಬಾಗಲಕೋಟೆ

ಮತ ಚಲಾಯಿಸದಂತೆ ಶಾಸಕ ಪಾಟೀಲಗೆ ತಡೆ

Published On :

ಇಳಕಲ್ಲ: ಇಲ್ಲಿನ ನಗರಸಭೆ ಚುನಾವಣೆಗೆ ಕುಟುಂಬ ಸಮೇತರಾಗಿ ಮತ ಚಲಾಯಿಸಲು ಬಂದಿದ್ದ ಶಾಸಕ ದೊಡ್ಡನಗೌಡ ಪಾಟೀಲ ಅವರನ್ನು ಕೆಲವರು ಮತದಾನಕ್ಕೆ ತಡೆಯೊಡ್ಡಿದ ಪ್ರಸಂಗ ನಡೆದಿದೆ.
ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ. 9ರಲ್ಲಿ ಡಿವ್ಹಿಜನ್ 7ರಲ್ಲಿ ಮತ ಚಲಾಯಿಸಲು ಬಂದಿದ್ದ ಶಾಸಕರಿಗೆ ಮತದಾನ ಮಾಡಲು ಅವಕಾಶ ನೀಡಬಾರದು ಎಂದು ಕೆಲವರು ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು.
ಮತದಾರರ ಪಟ್ಟಿಯಲ್ಲಿ ಶಾಸಕರ ಹೆಸರು ಎರಡು ವಾರ್ಡ್‌ಗಳಲ್ಲಿ ಇರುವ ಕಾರಣ ಅವರಿಗೆ ಮತದಾನಕ್ಕೆ ಅವಕಾಶ ನೀಡಬಾರದು ಎಂದು ಪಟ್ಟು ಹಿಡಿದರು.
ಚುನಾವಣಾಧಿಕಾರಿ ಶಾಸಕರ ಹೆಸರು ನಮ್ಮ ಮತಗಟ್ಟಿಯಲ್ಲಿ ಇರುವುದರಿಂದ ಅವರಿಗೆ ಮತದಾನ ಮಾಡಲು ಅವಕಾಶ ನೀಡಬೇಕಾದದ್ದು ನನ್ನ ಕರ್ತವ್ಯ. ಅವರು ಇಲ್ಲಿ ಮತ ಚಲಾಯಿಸಿದ ನಂತರ, ಬೇರೆಡೆ ಮತ ಚಲಾಯಿಸಿದರೆ ಆಗ ತಡೆಯಬಹುದು ಎಂದು ತಿಳಿಹೇಳಿದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಪೊಲೀಸರು, ಎಜೆಂಟರನ್ನು ಹೊರತುಪಡಿಸಿ ಇನ್ನುಳಿದವರನ್ನು ಸಮಾಧಾನ ಪಡೆಸಿ ಹೊರ ತಂದರು. ನಂತರ ಶಾಸಕ ಪಾಟೀಲ ಮತ ಚಲಾಯಿಸಿದರು.
ಮತದಾನ ಪ್ರತಿಯೊಬ್ಬರ ಹಕ್ಕು: ಮತದಾನ ಪ್ರತಿಯೊಬ್ಬರ ಹಕ್ಕು. ಹಾಗೇ ನಾನು ಮತ ಚಲಾಯಿಸಲು ಬಂದಿದ್ದೇನೆ ಹೋರತು ಶಾಸಕನಾಗಿ ಅಲ್ಲ. ಇನ್ನೊಂದು ವಾರ್ಡಿನಲ್ಲಿ ನನ್ನ ಹೆಸರಿದ್ದರೇ ಅದಕ್ಕೆ ನಾನು ಕಾರಣನಲ್ಲ. ಅದು ಚುನಾವಣಾ ಆಯೋಗಕ್ಕೆ ಸಂಬಂಧಿಸಿದ್ದು. ಅಲ್ಲದೇ ಈ ರೀತಿ ತಕರಾರು ಮಾಡಬೇಕಾಗಿರುವರು ಚುನಾವಣಾ ಅಧಿಕಾರಿಗಳು ಮತ್ತು ಇಲ್ಲಿ ಅಧಿಕೃತವಾಗಿ ಕುಳಿತಿರುವ ಮತಗಟ್ಟೆ ಎಜೆಂಟರು ಮಾತ್ರ. ಹೊರಗಿನವರು ಈ ರೀತಿ ಗಲಾಟೆ ಮಾಡುವುದು ಪ್ರಜಾಪ್ರಭುತ್ವ ಪದ್ಧತಿಗೆ ಮಾಡುತ್ತಿರುವ ದ್ರೋಹವಾಗಿದೆ. ಈ ರೀತಿ ಬೇರೆ ಕಡೆ ನಡೆಯದಂತೆ ಬಿಗಿ ಬಂದೋಬಸ್ತು ಮಾಡಬೇಕೆಂದು ಪೊಲೀಸರಿಗೆ ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.