ಬಾಗಲಕೋಟೆ

ಇಂದು ಉಚಿತ ಆರೋಗ್ಯ ತಪಾಸಣೆ

Published On :

ತಾಳಿಕೋಟೆ: ಪಟ್ಟಣದ ಡಾ. ಅಂಬೇಡ್ಕರ್ ವೃತ್ತದ ಸಮೀಪದ ಚಿತ್ತರಗಿ ಕ್ಲಿನಿಕ್ ವತಿಯಿಂದ ಮಾ. 17ರಂದು ಬೆಳಗ್ಗೆ 10 ಗಂಟೆಯಿಂದ ಸಂಜೆ 5ರ ವರೆಗೆ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ. ಮ್ಯೂಲವ್ಯಾದಿ ತಜ್ಞ ಉಡುಪಿಯ ಡಾ. ವಿಜಯಕುಮಾರ ಹಳ್ಳಿ ಮತ್ತು ಜನರಲ್ ಮೇಡಿಸಿನ್ ತಜ್ಞ ಜಾಮಾನಗರದನ ಡಾ. ವಸಂತ ಪಾಟೀಲ ಆಗಮಿಸಲಿದ್ದು, ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಡಾ. ಗುರು ಚಿತ್ತರಗಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ 9448580878ಗೆ ಸಂಪರ್ಕಿಸಬಹುದು.
ಜೈವಿಕ ಇಂಧನ  ಬೀಜ ಪರಿಷ್ಕೃತ ದರ
ಬಿಜಾಪುರ: ರಾಜ್ಯದಲ್ಲಿ ಲಭ್ಯವಿರುವ ಜೈವಿಕ ಇಂಧನ ಬೀಜ ಖರೀದಿಗಾಗಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು 2013-14ನೇ ಸಾಲಿಗೆ ಪರಿಸ್ಕೃತ ದರ ನಿಗದಿಪಡಿಸಿದೆ.  ಹೊಂಗೆ ಬೀಜ ರು. 15(ಕೆಜೆ), ಹೊಂಗೆ ಕಾಯಿ ರು. 5 (ಕೆಜಿ), ಬೇವಿನ ಬೀಜ(ತೊಳೆದಿರುವುದು) ರು. 10 (ಕೆಜಿ), ಒಣಗಿದ ಬೇವಿನ ಹಣ್ಣು ರು. 5 (ಕೆಜಿ), ಸೀಮಾರೋಬಾ ಬೀಜ ರು. 9 (ಕೆಜಿ), ಹಿಪ್ಪೆ ಬೀಜ ರು. 9 (ಕೆಜಿ), ಜಟ್ರೋಪಾ ಬೀಜ ರು. 8 (ಕೆಜಿ), ಜಟ್ರೋಪಾ ಕಾಯಿ ರು. 3 (ಕೆಜಿ) ದರ ನಿಗದಿಪಡಿಸಲಾಗಿದೆ. ರೈತರು ತಮ್ಮಲ್ಲಿರುವ ಜೈವಿಕ ಇಂಧನ ಬೀಜಗಳನ್ನು ಜಿಲ್ಲಾ ಜೈವಿಕ ಇಂಧನ ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರ ಕರ್ನಾಟಕ ರಾಜ್ಯ ಮಹಿಳಾ ವಿಶ್ವ ವಿದ್ಯಾಲಯ ಬಿಜಾಪುರ (ಯೋಜನಾ ವಿಜ್ಞಾನಿ ಸೌದಾಗರ ಮೊ. 9731194068) ಹಾಗೂ ಜಿಲ್ಲೆಯ ಲೀಡ್ ಎನ್‌ಜಿಓ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಬಿಜಾಪುರ ದೂ. 08352277003 ಅವರನ್ನು ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.