ಶಾರ್ಟ್ ಸರ್ಕ್ಯೂಟ್ನಿಂದ ಮನೆಗೆ ಬೆಂಕಿ
ಬಾಗಲಕೋಟೆ: ನಗರದ ಕಿಲ್ಲಾದ ಮರಾಠ ಗಲ್ಲಿಯಲ್ಲಿ ಶನಿವಾರ ಬೆಳಗ್ಗೆ ಮಹೇಶ ಚೆನ್ನಾನಿ ಅವರ ಮನೆಯಲ್ಲಿ ಶಾರ್ಟ್ ಸರ್ಕ್ಯೂಟ್ನಿಂದಾಗಿ ಬೆಂಕಿ ಹೊತ್ತಿಕೊಂಡು ಅಪಾರ ಹಾನಿಯಾಗಿದೆ.
ಘಟನೆಯಲ್ಲಿ ಮನೆಯ ಜಂತಿಗಳು ಹೊತ್ತಿ ಉರಿದಿವೆ. ಬಟ್ಟೆ, ಪಾತ್ರೆ, ಧಾನ್ಯ ಸೇರಿದಂತೆ ಒಳಗಿದ್ದ ಬಹುತೇಕ ಗೃಹೋಪಯೋಗಿ ವಸ್ತುಗಳು ಸುಟ್ಟು ಕರಕಲಾಗಿವೆ. ಮನೆಯ ಯಜಮಾನಿ ಸರಸ್ವತಿ ಚೆನ್ನಾನಿ ಪಾತ್ರೆ ತೊಳೆಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಅವರ ಮನೆ ಅಕ್ಕ-ಪಕ್ಕದವರು ತಕ್ಷಣ ಅಗ್ನಿಶಾಮಕ ದಳಕ್ಕೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದರು.
ಆದರೆ, ಕಿರಿದಾದ ಈ ಗಲ್ಲಿಯಲ್ಲಿ ಅಗ್ನಿಶಾಮಕ ಟ್ಯಾಂಕರ್ ಬರಲು ಆಗದೇ ಹೋದಾಗ ಆರ್.ಎಸ್.ಎಸ್. ಕಾರ್ಯಕರ್ತರು ಹಾಗೂ ಗಲ್ಲಿಯ ಯುವಕರು ಸೇರಿ ನೀರನ್ನು ಎರಚಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು. ಆದರೆ, ಅಷ್ಟೊತ್ತಿಗೆ ಮನೆಯಲ್ಲಿನ ಎಲ್ಲವೂ ಬೆಂಕಿಗೆ ಆಹುತಿಯಾಗಿತ್ತು.
ಅಲ್ಲದೆ ಚೆನ್ನಾನಿ ಅವರ ಮನೆಯಲ್ಲಿ ಬಾಡಿಗೆ ಇರುವ ಎಂ.ಎಚ್. ಪತ್ತಾರ ಅವರ ಮನೆಗೂ ಸಹ ಬೆಂಕಿ ತಗುಲಿದ ಪರಿಣಾಮ ಉದ್ಯೋಗದ ಕೆಲ ಸಲಕರಣೆಗಳು ಸುಟ್ಟು ಕರಕಲಾಗಿವೆ. ಘಟನಾ ಸ್ಥಳಕ್ಕೆ ಆಗಮಿಸಿದ್ದ ಪೊಲೀಸ್, ಅಗ್ನಿಶಾಮಕ ಅಧಿಕಾರಿಗಳು ಪರಿಸ್ಥಿತಿಯನ್ನು ಪರಿಶೀಲಿಸಿದರು.
ರಾಜು ಶಿಂಧೆ, ಮಂಜು ಶಿಂಧೆ, ಕಾಶೀನಾಥ ಚವ್ಹಾನ, ಶಂಕರ ಕದಂ, ಹಂಚಿನಮಠ ಹಾಗೂ ಕಾಜೀಸಾಬ ಅಥಣಿ ಸೇರಿದಂತೆ ಮತ್ತಿತರರ ಯುವಕರು ಬೆಂಕಿಯನ್ನು ಆರಿಸುವಲ್ಲಿ ಸಹಕರಿಸಿ ಹೆಚ್ಚಿನ ಅಪಾಯವನ್ನು ತಪ್ಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

