ಬೆಂಗಳೂರು ಗ್ರಾಮಾಂತರ

ನೀತಿ ಸಂಹಿತೆ ಕಾಟ, ಸಂಭ್ರಮಕ್ಕೆ ಬಿತ್ತು ಕತ್ತರಿ

Published On :

ಸೂಲಿಬೆಲೆ: ಮೇ 5ರಂದು ಕರ್ನಾಟಕ ವಿಧಾನ ಸಭಾ ಕ್ಷೇತ್ರಕ್ಕೆ ಚುನಾವಣಿ ಘೋಷಣೆಯಾಗಿರುವ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅವರ 122 ಜನ್ಮ ದಿನಾಚರಣಿಗೆ ನೀತಿ ಸಂಹಿತೆ ಕಾಟ ಕಾಡಿದ ಪರಿಣಾಮ ಹೊಸಕೋಟೆ ತಾಲೂಕಿನ ಬಹುತೇಕ ಕಡೆ ಸಂಭ್ರಮದ ಆಚರಣೆಗೆ ಕಲ್ಲು ಬಿತ್ತು. ಹೊಸಕೋಟೆ ತಾಲೂಕಿನಾದ್ಯಂತ ಇರುವ ದಲಿತ ಸಂಘಟನೆಗಳು ತಮ್ಮ ನಾಯಕನ ಜನ್ಮ ದಿನ ಸಮಾರಂಭಗಳನ್ನು ಪ್ರತಿವರ್ಷ ಅದ್ಧೂರಿಯಾಗಿ ಸಂಭ್ರಮದಿಂದ ಆಚರಣೆ ಮಾಡುವ ಪದ್ಧತಿಯನ್ನು ಬೆಳೆಸಿಕೊಂಡು ಬಂದಿದ್ದು, ಈ ಬಾರಿ ಸಂಭ್ರಮಕ್ಕೆ ತಣ್ಣೀರೆರಚ್ಚಿದ್ದು ಚುನಾವಣೆ ಆಯೋಗ. ಕಟ್ಟು ನಿಟ್ಟು ನೀತಿ ಸಂಹಿತೆಯನ್ನು ಜಾರಿ ಮಾಡಿರುವ ಆಯೋಗ ಅಂಬೇಡ್ಕರ್ ಜನ್ಮ ದಿನ ಸಮಾರಂಭ ಆಚರಣೆ ನೆಪದಲ್ಲಿ ರಾಜಕಾರಣಗಳು  ಪಾಲ್ಗೊಂಡು ತಮ್ಮ ಹಿತಾಸಕ್ತಿಯನ್ನು ಈಡೇರಿಸಿಕೊಳ್ಳುತ್ತಾರೆ ಎಂಬ ಆಲೋಚನೆಯಿಂದ ಅದ್ಧೂರಿ ಸಮಾರಂಭಗಳಿಗೆ ಬ್ರೇಕ್ ಹಾಕಿತ್ತು.                                                                  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.