ಬೆಂಗಳೂರು ಗ್ರಾಮಾಂತರ

ಕೈ ಅಭ್ಯರ್ಥಿಗೆ ಬೆಂಬಲ

Published On :

ಸೂಲಿಬೆಲೆ: ಹೊಸಕೋಟೆ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎನ್.ನಾಗರಾಜ್ ಅವರಿಗೆ ಹೊಸಕೋಟೆ ತಾಲೂಕಿನ ವಾಲ್ಮೀಕಿ ಗಿರಿಜನ ನಾಯಕ ಸಂಘ(ರಿ) ಬೆಂಬಲ ವ್ಯಕ್ತಪಡಿಸಿದೆ.
ವಾಲ್ಮೀಕಿ ಗಿರಿಜನ ನಾಯಕ ಸಂಘದ ಮುಖಂಡರು, ಪದಾಧಿಕಾರಿಗಳು ಸಭೆ ಸೇರಿ ಈ ತಿರ್ಮಾನ ಕೈಗೊಂಡಿರುವುದಾಗಿ ಅಧ್ಯಕ್ಷ ಕೃಷ್ಣಪ್ಪ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಶಪಡೆದ 50 ಲಕ್ಷ ವಾಪಸ್
ನೆಲಮಂಗಲ: ತಾಲೂಕಿನ ದೊಡ್ಡಬಳ್ಳಾಪುರ ರಸ್ತೆ ಮುದ್ದಲಿಂಗನಹಳ್ಳಿ ಬಳಿ ಚುನಾವಣೆ ಪ್ರಯುಕ್ತ ನಿರ್ಮಿಸಿರುವ ಚೆಕ್‌ಪೋಸ್ಟ್‌ನಲ್ಲಿ ಐ.ಎನ್.ಜಿ ವೈಶ್ಯ ಬ್ಯಾಂಕ್‌ಗೆ ಸೇರಿದ 50 ಲಕ್ಷ ಸಾಗಿಸುತ್ತಿದ್ದ ಕಾರನ್ನು ತಪಾಸಣೆ ತಂಡ ವಶಕ್ಕೆ ಪಡೆದುಕೊಂಡು ಚುನಾವಣೆ ಅಧಿಕಾರಿಗೆ ನೀಡಿತ್ತು. ಸಂಬಂಧಿಸಿದ ಹಣಕ್ಕೆ ಅಗತ್ಯ ದಾಖಲೆ ನೀಡಿದ ಬ್ಯಾಂಕ್ ಅಧಿಕಾರಿಗಳು ಹಣ ವಾಪಸ್ ಪಡೆದುಕೊಂಡಿದ್ದಾರೆ.
235 ಮೂಟೆ ಅಕ್ಕಿ ಚೀಲ ವಶ
ನೆಲಮಂಗಲ: ತಾಲೂಕಿನ ಕೆ.ಜಿ.ಕೃಷ್ಣರಾಜಪುರದ ಮನೆಯೊಂದರಲ್ಲಿ ಅಕ್ರಮವಾಗಿ ಶೇಖರಿಸಿಟ್ಟಿದ್ದ ಸುಮಾರು 4.65 ಲಕ್ಷ ರು. ಮೌಲ್ಯದ 235 ಮೂಟೆ ಅಕ್ಕಿ ಚೀಲಗಳನ್ನು ಚುನಾವಣೆಯ ವಿಚಕ್ಷಣ ತಂಡ  ವಶಕ್ಕೆ ಪಡೆದಿದೆ. ಗಿರಿಯಪ್ಪ ಅವರಿಗೆ ಸೇರಿದ ಹಳೆ ಮನೆಯಲ್ಲಿ ಅಕ್ಕಿ ಮೂಟೆಯನ್ನು ಶೇಖರಿಸಿದ್ದರು. ಪ್ರಕರಣಕ್ಕೆ  ಸಂಬಂಧಿಸಿದಂತೆ ಆರೋಪಿ ಚಂದ್ರಪ್ಪ ಮತ್ತು ಇತರರ ಮೇಲೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಕಾರ್ಯಾಚರಣೆಯಲ್ಲಿ  ವಿಚಕ್ಷಣ ತಂಡದ ಅಧಿಕಾರಿಗಳಾದ ಎನ್.ಎಮ್. ನಂಜೇಗೌಡ, ಪದ್ಮನಾಭ್, ಶೃತಿಗೌಡ ಹಾಗೂ ಸಬ್‌ಇನ್ಸ್‌ಪೆಕ್ಟರ್ ನವೀನ್‌ಕುಮಾರ್ ಇದ್ದರು.
ಬೆಂಗಳೂರು-ನೆಲಮಂಗಲ ರೈಲು
ನೆಲಮಂಗಲ: ಕಳೆದ ಕೆಲವು ವರ್ಷದಿಂದ ಉದ್ಘಾಟನೆಯಾಗದೇ ಮರೀಚಿಕೆಯಾಗಿಯೇ ಉಳಿದಿದ್ದ ಬೆಂಗಳೂರು-ನೆಲಮಂಗಲ  ರೈಲು ಸಂಚಾರಕ್ಕೆ ಸೋಮವಾರ ಕೊನೆಗೂ ಮುಕ್ತಿ ಸಿಕ್ಕಿದೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ನೆಲಮಂಗಲ ರೇಲ್ವೆ ನಿಲ್ದಾಣ ಕೂಡ ಇದೇ ವೇಳೆ ಉದ್ಘಾಟನೆಗೊಂಡಿರುವುದೂ ನಗರದ ಜನಕ್ಕೆ ತುಂಬಾ ಖುಷಿಯಾಗಿದೆ. ನೆಲಮಂಗಲದಿಂದ ಬೆಂಗಳೂರಿಗೆ ಇರುವುದು ಕೇವಲ 26 ಕಿ.ಮೀ ಮಾತ್ರ. ಈ ದೂರವನ್ನು ಕ್ರಮಿಸಬೇಕಾದರೆ ಕನಿಷ್ಠ ಒಂದರಿಂದ ಒಂದೂವರೆ ಗಂಟೆ ಬೇಕಾಗುತ್ತಿತ್ತು. ಟ್ರಾಫಿಕ್ ಜಾಮ್‌ನಿಂದ ಕಂಗೆಟ್ಟಿದ್ದ ನಗರದ ಜನ, ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ನೌಕರರು ರೈಲು ಸಂಚಾರದ ಉಪಯೋಗ ಪಡೆದುಕೊಳ್ಳಲಿದ್ದಾರೆ.ನೆಲಮಂಗಲದಿಂದ ಬೆಂಗಳೂರಿಗೆ ಪ್ರಯಾಣಿಸುವ ಬಸ್ ಪ್ರಯಾಣಿಕರಿಗೆ ಹೆಚ್ಚಿನ ಒತ್ತಡ ಇಲ್ಲದೆ ಸಂಚರಿಸಬಹುದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.