'ಸುವರ್ಣ ಯುಗ ಆರಂಭಕ್ಕೆ ಎಚ್‌ಡಿಕೆ ಕೈ ಬಲಪಡಿಸಿ'
ಮಾಗಡಿ: ರಾಜ್ಯದಲ್ಲಿ ಸುವರ್ಣ ಯುಗ ಆರಂಭಕ್ಕೆ ಎಚ್‌ಡಿಕೆ ಕೈ ಬಲಪಡಿಸೋಣ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಕೆ. ಮುದ್ದುರಾಜ ಯಾದವ್ ಕರೆ ನೀಡಿದರು. ಅವರು ತಾಲೂಕಿನ ಕುದೂರು ಹೋಬಳಿ ಕಾಗಿಮಡು ಗೊಲ್ಲರಹಟ್ಟಿಯಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್.ಸಿ ಬಾಲಕೃಷ್ಣ ಅವರ ಪರ ಮತಯಾಚಿಸಿ ಮಾತನಾಡಿ, ಮಾಜಿ ಮುಖ್ಯಮಂತ್ರಿ ಅವರ 20 ತಿಂಗಳ ಆಡಳಿತ, ರಾಜ್ಯದಲ್ಲಿ ಅಭಿವೃದ್ಧಿಯ ಧೂಳೆಬ್ಬಿಸಿದ್ದರು. ಮತ್ತೆ ಎಚ್‌ಡಿಕೆ ಅವರನ್ನು 5 ವರ್ಷಗಳ ಕಾಲ ಸಿಎಂ ಮಾಡಿದರೆ ಸುವರ್ಣ ಯುಗವನ್ನು ಕಾಣಬಹುದು ಎಂದು ತಿಳಿಸಿದರು. ನರಸಿಂಹಮೂರ್ತಿ, ನರಸಿಂಹರಾಜು, ಜಯಣ್ಣ, ಬಾಳೇಗೌಡ, ದಾಸೇಗೌಡ, ದೊಳ್ಳಯ್ಯ, ಕ್ಯಾತಪ್ಪ, ಗ್ರಾ.ಪಂ ಮಾಜಿ ಉಪಾಧ್ಯಕ್ಷ ಚಿಕ್ಕರಂಗಯ್ಯ, ತಟವಾಳ್ ರಾಮಣ್ಣ, ಗ್ರಾ.ಪಂ.ಅಧ್ಯಕ್ಷ ಪ್ರಕಾಶ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

