ಜಾಗತೀಕರಣದಿಂದ ಮಾನವೀಯ ಮೌಲ್ಯ ಕುಸಿತ
ಚನ್ನಪಟ್ಟಣ: ಕಾಲಘಟ್ಟದಲ್ಲಿ ಎದುರಾಗುವ ಬಿಕ್ಕಟ್ಟುಗಳನ್ನು ಮೆಟ್ಟಿ ಜೀವಂತಿಕೆಯನ್ನು ಉಳಿಸಿಕೊಳ್ಳುವುದೇ ನಿಜವಾದ ಸಂಸ್ಕೃತಿ ಎಂದು ಸಂಶೋಧಕ ಡಾ. ಬಂಜಗೆರೆ ಜಯಪ್ರಕಾಶ್ ಅಭಿಪ್ರಾಯ ಪಟ್ಟರು.
ಪಟ್ಟಣದಲ್ಲಿ ನಡೆದ ಸ್ಫೂರ್ತಿ ಸಾಮಾಜಿಕ ಮತ್ತು ಶೈಕ್ಷಣಿಕ ಟ್ರಸ್ಟ್‌ನ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ಸಂಸ್ಕೃತಿ ತಲೆಮಾರಿಂದ ತಲೆಮಾರಿಗತೆ ಪ್ರವಹಿಸುತ್ತಾ ಚಿರಸ್ಥಾಯಿ ಯಾಗಿರುತ್ತದೆ ಎಂದರು.
ನಾಗರಿಕತೆಗೂ ಸಂಸ್ಕೃತಿಗೂ ಸಾಕಷ್ಟು ವ್ಯತ್ಯಾಸವಿದ್ದು ಒಂದು ನಾಗರಿಕತೆಯನ್ನು ನಾಶಮಾಡಲು ಪ್ರವಾಹ, ಯುದ್ಧ ಮೊದಲಾದ ಬಿಕ್ಕಟ್ಟುಗಳು ಕಾರಣವಾಗಬಹುದು. ಆದರೆ ಸಂಸ್ಕೃತಿಯನ್ನು ಅನುಸರಿಸುವ ಸಮುದಾಯದ ಕಟ್ಟಕಡೆಯ ವ್ಯಕ್ತಿ ಜೀವಂತವಾಗಿರುವವರೆಗೆ ಸಂಸ್ಕೃತಿ ನಶಿಸುವುದಿಲ್ಲ ಎಂದರು.
ಅವನತಿಯತ್ತ ಮಾನವೀಯ ಮೌಲ್ಯ: ಜಾಗತೀಕರಣದಿಂದಾಗಿ ಎಲ್ಲವೂ ಕೊಡುವ ಕೊಳ್ಳುವ ಸರಕಾಗಿ ಪರಿಣಮಿಸಿದ್ದು ಇದರಿಂದಾಗಿ ಮಾನವೀಯ ಮೌಲ್ಯಗಳು ಅವನತಿಯಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ವ್ಯಕ್ತಿತ್ವ, ಸೇವೆ, ಪುರಸ್ಕಾರ, ಶಿಕ್ಷಣ ಎಲ್ಲದಕ್ಕೂ ನಾವು ಪಾರ್ಸೆಲ್ ಎಂಬ ಲೇಬಲ್ ಅಂಟಿಸಿದ್ದು ಇದರಿಂದ ನಮ್ಮ ಬದುಕನ್ನು ಮಲೀನ ಮಾಡಿಕೊಂಡಿದ್ದೇವೆ. ಇದು ಹೀಗೇ ಮುಂದುವರೆದಿದ್ದೇ ಆದಲ್ಲಿ ನಾವು ಉಸಿರು ಗಟ್ಟಿ ಸಾಯ ಬೇಕಾಗುತ್ತದೆ ಎಂದು ಎಚ್ಚರಿಸಿದರು.
ಮೂರ್ಖರನ್ನಾಗಿಸುತ್ತಿರುವ ಟಿ.ವಿ: ಇತ್ತಿಚಿನ ದಿನಗಳಲ್ಲಿ ಮಹಿಳೆಯರು ಟಿ.ವಿ ಗಳಿಗೆ ದಾಸರಾಗಿದ್ದು ಈ ಟೀವಿಗಳು ನಮ್ಮನ್ನು ಮೂರ್ಖರನ್ನಾಗಿಸುತ್ತಿದೆ. ಸುಳ್ಳು ಸುಳ್ಳೇ ಜಾಹೀರಾತು ನೀಡಿ ಜನರನ್ನು ವಂಚಿಸುವ ಜತೆಗೆ ಟಿಆರ್‌ಪಿಗಾಗಿ ಜನತೆಗೆ ಅಳುವುದನ್ನು ಕಲಿಸುತ್ತಿದ್ದು ಯುವಜನತೆ ವಾಸ್ತವವನ್ನು ಅರಿಯಲು, ಸಮಾಜಕ್ಕಾಗಿ ಬದುಕುವುದನ್ನು ಕಲಿತಾಗ ಮಾತ್ರ ನಿಜವಾದ ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದರು.
ಸಹ ಪ್ರಧ್ಯಾಪಕರಾದ ಡಾ.ಬಿ.ಟಿ.ನೇತ್ರಾವತಿಗೌಡ, ಡಾ. ಡಾಮೊನಿಕ್, ಅನಂತಪಧ್ಮನಾಭ, ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್ ಕನ್ನಡ ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ದೇವರಾಜು, ವಿದ್ಯಾನಿಕೇತನ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಟಿ.ಎಂ.ರಾಜು, ಟ್ರಸ್ಟ್‌ನ ಕಾರ್ಯದರ್ಶಿ ಬಿ.ಪಿ.ಸುರೇಶ್, ಸಾಹಿತಿ ಸುರೇಶ್ ಗೌತಮ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

