ಬೆಂಗಳೂರು ಗ್ರಾಮಾಂತರ

ಕಾರ್ಮಿಕರಿಗೆ ಮಾಲೀಕರಿಂದ ಅನ್ಯಾಯ ಆರೋಪ: ಪ್ರತಿಭಟನೆ

Published On :

ದೊಡ್ಡಬಳ್ಳಾಪುರ: ಕಾರ್ಮಿಕರ ವಿಚಾರದಲ್ಲಿ ಕಂಪನಿ ಮಾಲೀಕರು ನಿರ್ಲಕ್ಷ್ಯದ ಧೋರಣೆ ಅನುಸರಿಸುತ್ತಿದ್ದಾರೆ ಎಂದು ಆರೋಪಿಸಿ ಇಲ್ಲಿನ ಎಸ್.ಎ.ಎಂಜಿನಿಯರಿಂಗ್ ವರ್ಕ್ಸ್ ಇಂಡಿಯಾ ಪ್ರೈ.ಲಿಮಿಟೆಡ್ ಕಾರ್ಖಾನೆಯ ಕೆಲ ಕಾರ್ಮಿಕರು ಕಾರ್ಖಾನೆ ಮುಂದೆ ಪ್ರತಿಭಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಭಟನಾನಿರತರು, ಕಳೆದ ಕೆಲ ತಿಂಗಳ ಹಿಂದೆ ಕಾರ್ಖಾನೆಯಲ್ಲಿ ಉತ್ಪಾದನೆಯಾಗುವ ವಸ್ತುಗಳಿಗೆ ಬೇಡಿಕೆ ಕುಸಿತವಾಗಿರುವ ಹಿನ್ನಲೆಯಲ್ಲಿ ಕೆಲಸ ಕಡಿಮೆಯಾಗಿದೆ ಎಂದು ಹೇಳಿ ಕೆಲ ಕಾರ್ಮಿಕರನ್ನು ಕೆಲಸದಿಂದ ತಾತ್ಕಾಲಿಕವಾಗಿ ತೆಗೆಯಲಾಗಿತ್ತು. ಆ ಪ್ರಕಾರ 45 ದಿನಗಳವರೆಗೆ ಮೂಲವೇತನ ಮತ್ತು ತುಟ್ಟಿಭತ್ಯೆಯ ಶೇ.50ರಷ್ಟನ್ನು ಕಾರ್ಮಿಕರಿಗೆ ನೀಡುವುದಾಗಿ ಹೇಳಿದ್ದರು. 45 ದಿನಗಳಿಗಿಂತ ಹೆಚ್ಚಾದರೆ ಕಾರ್ಮಿಕ ಇಚ್ಛಿಸಿದರೆ ರಿಟ್ರಿಂಚ್ ಆಗಬಹುದು. ಕಾರ್ಮಿಕ ಕಾನೂನು ಪ್ರಕಾರ ಪರಿಹಾರವನ್ನು ರಿಟ್ರಿಂಚ್‌ಮೆಂಟ್ ಪರಿಹಾರದೊಂದಿಗೆ ಸರಿಹೊಂದಿಸಿ ಕೊಡಲಾಗುವುದು ಎಂದಿದ್ದರು.
ಆದರೆ ಈಗ ಕಾರ್ಮಿಕರನ್ನು ಕೆಲಸದಿಂದ ತೆಗೆಯುವುದಾಗಿ ಸೂಚನೆ ಕೊಟ್ಟಿದ್ದಾರೆ. ಕೈಗಾರಿಕೆಗೆ ಉತ್ಪಾದನಾ ಆದೇಶಗಳು ದೊರೆಯದ ಕಾರಣ ಅನಿವಾರ್ಯವಾಗಿ ಕೆಲಸದಿಂದ ತೆಗೆಯಬೇಕಾಗಿದೆ ಎಂದು ಹೇಳಿದ್ದಾರೆ. ಆದರೆ ಗುತ್ತಿಗೆ ಕಾರ್ಮಿಕರನ್ನು ತಂದು ಕೆಲಸ ಮಾಡಿಸುತ್ತಿದ್ದಾರೆ. ಕೂಡಲೇ ನೊಂದ ಕಾರ್ಮಿಕರಿಗೆ ಪರಿಹಾರ ಸಿಗಬೇಕು ಎಂದು ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.