ಬೆಂಗಳೂರು ಗ್ರಾಮಾಂತರ

ವಕೀಲರ ಸಂಘದ ಪದಾಧಿಕಾರಿಗಳು

Published On :

ಹೊಸಕೋಟೆ: ಇಲ್ಲಿನ ವಕೀಲರ ಸಂಘದ ಸರ್ವ ಸದಸ್ಯರ ಸಭೆ ನಡೆದು ಈ ಕೆಳಕಂಡವರು ಅವಿರೋಧವಾಗಿ ಪದಾಧಿಕಾರಿಗಳಾಗಿ ಆಯ್ಕೆಯಾಗಿರುತ್ತಾರೆ.
ಅಧ್ಯಕ್ಷರು-ಹರೀಂದ್ರ, ಉಪಾಧ್ಯಕ್ಷರು-ಎಂ.ವೆಂಕಟಸ್ವಾಮಿ, ಪ್ರಧಾನ ಕಾರ್ಯದರ್ಶಿ-ಶ್ರೀಮತಿ ಜಿ.ಲಕ್ಷ್ವೀ ನಾಗರಾಜ್, ಜಂಟಿ ಕಾರ್ಯದರ್ಶಿ-ಬಿ.ಎಂ.ಅನಂತ ಪ್ರಭಾಕರ್,ಖಚಾಂಚಿ - ಎಸ್. ಎಂ. ಹನುಮಂತರಾವ್.
ನಿರ್ದೇಶಕರು :1 ಪಿ.ಎಸ್.ಮಂಜುನಾಥ್ 2. ಕೆ.ಎಂ.ದೇವೇಗೌಡ 3. ಪಿ.ಮುನಿರಾಜು 4. ಜಿ.ಶಾಂತಮ್ಮ 5. ಎಂ.ನಾಗರಾಜ್ 6. ಕೆ.ಕಾಂತರಾಜ್.
ಸಲಹಾ ಸಮಿತಿ: ಎಚ್.ವಿ.ರಾಮಚಂದ್ರಪ್ಪ . 2. ಮುತ್ಕೂರು-ನಾ.ಮನೋಹರ್ 3. ಎನ್.ಗೋವಿಂದ ಗೌಡ  ಹೊಸಕೋಟೆ ವಕೀಲರ ಸಂಘದ ಪದಾಧಿಕಾರಿಗಳಾಗಿ ಆಯ್ಕೆಯಾಗಿರುತ್ತಾರೆ.

18 ರೊಳಗೆ ಚೆಕ್ ಪಡೆಯಲು ಆದೇಶ
ಮಾಗಡಿ: 2011-12ನೇ ಸಾಲಿಗೆ ಮಾಗಡಿ ತಾಲೂಕಿನ ಕೃಷಿ, ತೋಟಗಾರಿಕೆ ಬೆಳೆಗಳಿಗೆ ಬರಪರಿಹಾರ ನಿಧಿಯಡಿ ಸರ್ಕಾರದಿಂದ ಮಂಜೂರಾಗಿದ್ದ ಧನಸಹಾಯದ  ಚೆಕ್‌ಗಳನ್ನು ಇಲ್ಲಿಯವರೆಗೂ ಪಡೆಯದೆ ಇರುವ ಅರ್ಹ ಫಲಾನುಭವಿಗಳು ತಮ್ಮ ಹೋಬಳಿಯ ಗ್ರಾಮ ಲೆಕ್ಕಾಧಿಕಾರಿಗಳನ್ನು ಸಂಪರ್ಕಿಸಿ ಡಿ.18 ರೊಳಗೆ  ಪಡೆಯುವಂತೆ ತಹಸೀಲ್ದಾರ್ ಸಿ.ಎಚ್. ಶಿವಕುಮಾರ್ ಕೋರಿದ್ದಾರೆ. ಜಿಲ್ಲಾಧಿಕಾರಿಗಳು  ನಿರ್ದೇಶನ ನೀಡಿರುವುದರಿಂದ ಡಿ. 18 ರ ನಂತರ ಚೆಕ್‌ಗಳನ್ನು ವಿತರಿಸುವುದಿಲ್ಲ ಎಂದು ತಿಳಿಸಿದ್ದಾರೆ.

ಶಾಲೆಗೆ ಅಧಿಕಾರಿಗಳ ಭೇಟಿ
ಮಾಗಡಿ: ತಾಲೂಕಿನ ಕುದೂರು ಹೋಬಳಿ ಬೆಟ್ಟಹಳ್ಳಿ ಕಾಲೋನಿ ಶಾಲೆಗೆ ವಂಡರ್ ಲಾ ಪಾರ್ಕಿನ ಅಧಿಕಾರಿಗಳ  ತಂಡ ಭೇಟಿ ನೀಡಿ ಶಾಲೆಯ ಪ್ರಗತಿ ಮತ್ತು ಪರಿಸರ  ನಿರ್ವಹಣೆ ಜಾಗೃತಿ ಕುರಿತು ಪ್ರಶಂಸೆ ವ್ಯಕ್ತಪಡಿಸಿತು. ಈ ಶಾಲೆಗೆ ಆಗಮಿಸಿದ ಮೂರು ಮಂದಿ ಅಧಿಕಾರಿಗಳ ತಂಡ ಶಾಲಾ ಸ್ವಚ್ಛತೆ, ಪರಿಸರ ನಿರ್ವಹಣೆ, ಕಸ ವಿಲೇವಾರಿ, ಸೌರಶಕ್ತಿ ಬಳಕೆ ಪರಿಸರ ಕಾಳಜಿ ಕುರಿತು ಅನೇಕ ವಿಚಾರಗಳನ್ನು ಶಿಕ್ಷಕರು ಮತ್ತು ಶಾಲಾ ಮಕ್ಕಳಿಂದ ಕಲೆಹಾಕಿದರಲ್ಲದೆ ಶಾಲಾ ಅಂಗಳದಲ್ಲಿದ್ದ ಕಲ್ಲಿನ ಮತ್ತು ಬಿದಿರಿನ ಕಲಾಕೃತಿಯನ್ನು ನೋಡಿ ಸಂತಸ ಪಟ್ಟರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.