ಬೆಂಗಳೂರು ಗ್ರಾಮಾಂತರ

ಲೋಕಾಯುಕ್ತ ಕಚೇರಿ ಸಿಬ್ಬಂದಿ ಎಂದು ಹಣ ವಸೂಲಿ ಯತ್ನ

Published On :

ಕನಕಪುರ: ಲೋಕಾಯುಕ್ತ ಕಚೇರಿ ಸಿಬ್ಬಂದಿ ಎಂದು ಹೇಳಿಕೊಂಡು ಕೆಲ ವ್ಯಕ್ತಿಗಳು ಕನಕಪುರ ತಾಲೂಕಿನ ಸಾತನೂರಿನ ನಾಡಕಚೇರಿಗೆ ತೆರಳಿ ಗ್ರಾಮಲೆಕ್ಕಿಗರಿಂದ ಹಣವಸೂಲಿ ಮಾಡಲು ನಕಲಿ ಸಾಕ್ಷ್ಯಾಧಾರಗಳನ್ನು ಸೃಷ್ಟಿಸಿ ಪ್ರಯತ್ನಿಸಿ ವಿಫಲರಾಗಿ ಪರಾರಿಯಾದ ಘಟನೆ ವರದಿಯಾಗಿದೆ.  ಸಾತನೂರು ಹೋಬಳಿ ಕಂಚನಹಳ್ಳಿ ರವಿಕುಮಾರ್ ಎಂಬುವವರು ತಮ್ಮ ನಾಲ್ಕು ಮಂದಿ ಗೆಳೆಯರೊಂದಿಗೆ ಸಾತನೂರಿನ ನಾಡಕಚೇರಿಗೆ ನುಗ್ಗಿ ತಾವುಗಳು ಲೋಕಾಯುಕ್ತ ಇಲಾಖೆಯವರು, ಗ್ರಾಮಲೆಕ್ಕಿಗ ಗಿರಿಯಪ್ಪ ಲಂಚಪಡೆಯುತ್ತಿರುವುದಕ್ಕೆ ತಮ್ಮ ಬಳಿ ಸಾಕ್ಷಿಇದೆ ಎಂದು ಹೇಳಿ ಜೋರುಮಾಡಿ, ಜೋಬಿನಲ್ಲಿ ಎಷ್ಟಿದೆಯೋ ಅಷ್ಟನ್ನೇ ಕೊಡು ಎಂದು ಒತ್ತಡ ಹೇರುತ್ತಿದ್ದರು. ಗಲಭೆಯನ್ನು ಕಂಡ ಜನರು ಗುಂಪುಗೂಡಿ ವಿಚಾರಿಸಿದಾಗ ತಾವು ಲೋಕಾಯುಕ್ತ ಸಂಸ್ಥೆಯವರಲ್ಲಾ, ನವದೆಹಲಿಯ ಮಾನವಹಕ್ಕುಗಳು ಹಾಗೂ ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆಯವರು ಎಂದು ಮೊಹನ್‌ವಿ.ಗೌಡ ಹೆಸರಿನ ವಿಸಿಟಿಂಗ್‌ಕಾರ್ಡ್ ನೀಡಿದ್ದಾರೆ. ಅದರಲ್ಲಿನ ದೂರವಾಣಿಗೆ ಸಂಪರ್ಕಿಸಿದರೆ ಅವರು ರವಿಕುಮಾರ್ ಅಥವಾ ಇತರೆ ಯಾರೂ ತಮಗೆ ತಿಳಿದಿಲ್ಲ, ಕ್ರಮ ಕೈಗೊಳ್ಳಿ ಎಂದು ಹೇಳಿದ್ದಾರೆ. ಗುಂಪಿನ ಗಡಿಬಿಡಿಯಲ್ಲಿ ಆರೋಪಿಗಳು ಪರಾರಿಯಾಗಿದ್ದಾರೆ ಎಂದು ತಾಪಂ ಮಾಜಿ ಉಪಾಧ್ಯಕ್ಷ ಕಾಡಹಳ್ಳಿ ಪ್ರಕಾಶ್ ತಿಳಿಸಿದ್ದಾರೆ. ಸಾತನೂರಿನಲ್ಲಿ ನಡೆದ ಸಭೆಯಲ್ಲಿ ಘಟನೆಯ ಬಗ್ಗೆ ವಿವರಗಳನ್ನು ಮುಖಂಡರುಗಳಾದ ಶಿವಸ್ವಾಮಿ, ನಾಗರಾಜು, ಕೃಷ್ಣೇಗೌಡ, ಸೋಲಿಗೇರಿ ಗಿರಿಮಾದು, ಕುರಿಮಂದೆ ಪುಟ್ಟಸ್ವಾಮಿ, ಚಂದಣ್ಣ, ಪುಟ್ಟರಾಜು ನೀಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.