ಬೆಂಗಳೂರು ಗ್ರಾಮಾಂತರ

ಆನೇಕಲ್ಲಿನಲ್ಲಿ ವೇಣುಗೋಪಾಲಸ್ವಾಮಿ ರಥೋತ್ಸವ

Published On :

ಆನೇಕಲ್: ಆನೇಕಲ್ ಪಟ್ಟಣದ ಕಲ್ಯಾಣ ಮಂಟಪ ರಸ್ತೆಯಲ್ಲಿರುವ  ಶ್ರೀದೇವಿ ಭೂದೇವಿ ಸಹಿತ ಶ್ರೀ ವೇಣುಗೋಪಾಲಸ್ವಾಮಿ ಬ್ರಹ್ಮ ರಥೋತ್ಸವವು ಶುಕ್ರವಾರ ಅದ್ಧೂರಿಯಾಗಿ ನಡೆಯಿತು ಉತ್ಸವ ಮೂರ್ತಿಯನ್ನು ಕಲ್ಲಿನ ರಥಕ್ಕೆ ಭಕ್ತಿ ಭಾವಗಳಿಂದ ಕರೆತಂದಾಗ ನೆರೆದಿದ್ದ ಜನಸ್ಥೋಮದಿಂದ ಗೋವಿಂದಾ.. ಗೋಪಾಲ..  ಉದ್ಗಾರ ಮುಗಿಲು ಮುಟ್ಟಿತು. ದೇಗುಲ ಸಮಿತಿಯವರು ಭಕ್ತಾದಿಗಳಿಗೆ ಪ್ರಸಾದ ವಿನಿಯೋಗ ಮಾಡಿದರು.  ಕಲ್ಯಾಣ ಮಂಟಪ ನಿವಾಸಿಗಳು ಭಕ್ತಾದಿಗಳಿಗೆ ಪಾನಕ, ಕೋಸಂಬರಿ ಹಾಗೂ ಮಜ್ಜಿಗೆ ಹಂಚಿದರು. ಬ್ರಾಹ್ಮಣ ಮಂಡಳಿಯವರು ಪಾಳೇಗಾರ್  ಅಯ್ಯಂಗಾರ್ ನಿವಾಸದಲ್ಲಿ ಅರವಂಟಿಕೆ ಸೇವೆ ನಡೆಸಿದರು. ಅರ್ಚಕ ಮಂಡಳಿಯವರು ದೇಗುಲ ಜೀರ್ಣೋದ್ಧಾರ ಹಾಗೂ ಪುನರ್ ಪ್ರತಿಷ್ಠಾಪನೆ ಬಗ್ಗೆ ಭಕ್ತಾದಿಗಳಲ್ಲಿ ಮನವಿ ಸಲ್ಲಿಸಿದರು. ಪುರಸಭಾ ಸದಸ್ಯರಾದ  ಜಿ. ಗೋಪಾಲ್, ಮುರಳಿ, ಬಿ.ನಾಗರಾಜು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು. ರಥೋತ್ಸವವು ಚರ್ಚ್ ರಸ್ತೆ, ತ್ಯಾಗ ರಾಜ ರಸ್ತೆ, ತಿಲಕ್ ಚೌಕ, ಥಳಿ ರಸ್ತೆ ರಾಜ ಮಾರ್ಗದಲ್ಲಿ ಸಂಚರಿಸಿ ಕಲ್ಯಾಣ ಮಂಟಪ ಮೂಲಕ ಸ್ವಸ್ಥಾನ ಸೇರಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.