ಪರಿಹಾರ ಘೋಷಣೆ: ಹಿಂದೆ ಸರಿದ ಜಿಲ್ಲಾಡಳಿತ
ರಾಮನಗರ: ಬರಪೀಡಿತ ರೈತರಿಗೆ ತಲಾ ರು.1 ಸಾವಿರ ಪರಿಹಾರ ವಿತರಿಸುವ ಘೋಷಣೆಯಿಂದ ಜಿಲ್ಲಾಡಳಿತ ಹಿಂದೆ ಸರಿದಿದೆ. ರೈತರಿಗೆ ಕವಡೆ ಕಾಸಿನ ಪರಿಹಾರವೇ ಅಂತಿಮವೆನ್ನುವುದು ಸ್ಪಷ್ಟವಾಗಿದ್ದು, ಈ ಧೋರಣೆ ಖಂಡಿಸಿ ಮತ್ತೆ ಬೀದಿಗಿಳಿಯಲು ರೈತ ಸಂಘ ಸಜ್ಜಾಗಿದೆ.
ಜಿಲ್ಲೆಯಲ್ಲಿ ಕಳೆದ ವರ್ಷ ತಲೆದೋರಿದ್ದ ಬರದಿಂದ ಸಂತ್ರಸ್ತರಾಗಿರುವ ರೈತರಿಗೆ ಕೇಂದ್ರ ಸರ್ಕಾರದಿಂದ ರು.9.26 ಕೋಟಿ ಬಿಡುಗಡೆಯಾಗಿದೆ. ತಲಾ ರು.250ರಂತೆ ಪರಿಹಾರಕ್ಕೆ ಮುಂದಾಗಿದ್ದ ಜಿಲ್ಲಾಡಳಿತದ ಕ್ರಮ ಖಂಡಿಸಿ ರೈತ ಸಂಘ ಕಳೆದ ತಿಂಗಳು ಹೋರಾಟ ನಡೆಸಿತ್ತು.
ಈ ಪರಿಣಾಮ ಜಿಲ್ಲಾಡಳಿತ ಮತ್ತು ರೈತ ಮುಖಂಡರ ನಡುವೆ ಸಂಧಾನ ಮಾತುಕತೆ ನಡೆದು, ಕೃಷಿ ಅವಲಂಬಿತ ರೈತರಿಗೆ ತಲಾ ರು.1 ಸಾವಿರ ಮತ್ತು ತೋಟಗಾರಿಕೆ ರೈತರಿಗೆ ರು.2 ಸಾವಿರ ಪರಿಹಾರ ನೀಡಲು ಜಿಲ್ಲಾಡಳಿತ ಸಮ್ಮತಿಸಿತ್ತು. ಆದರೆ, ಬರ ಪೀಡಿತ ಪ್ರದೇಶದಲ್ಲಿ ಮತ್ತೆ ರು.250ರ ಚೆಕಕ್ವಿತರಣೆ ಪ್ರಕ್ರಿಯೆ ನಡೆದಿದೆ.
ಮುರಿದು ಬಿದ್ದ ಮಾತುಕತೆ: ಪರಿಹಾರ ಮೊತ್ತವನ್ನು ಕನಿಷ್ಠ ರು.1 ಸಾವಿರ ಮತ್ತು 2 ಸಾವಿರಕ್ಕೆ ಹೆಚ್ಚಳ ಮಾಡುವ ಘೋಷಣೆ ಜಾರಿಗೆ ಬಾರದ ಹಿನ್ನೆಲೆಯಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಲಕ್ಷ್ಮಣಸ್ವಾಮಿ ನೇತೃತ್ವದ ನಿಯೋಗ ಮಂಗಳವಾರ ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿತಾದರೂ ಒಮ್ಮತ ಮೂಡಲಿಲ್ಲ.
ಪ್ರಸ್ತುತ ಪೌರ ಸಂಸ್ಥೆಗಳ ಚುನಾವಣಾ ಪ್ರಕ್ರಿಯೆಯಲ್ಲಿ ಬ್ಯುಸಿಯಾಗಿರುವ ಕಾರಣ ನೀಡಿ ಶ್ರೀರಾಮರೆಡ್ಡಿ ರೈತ ಮುಖಂಡರೊಂದಿಗೆ ಬರ ಪರಿಹಾರ ವಿಷಯವಾಗಿ ಮಾತುಕತೆಗೆ ನಿರಾಕರಿಸಿದರು. ಇದರಿಂದ ಆಕ್ರೋಶಿತರಾದ ರೈತ ಮುಖಂಡರು ಚುನಾವಣೆ ವೇಳೆ ಕವಡೆ ಕಾಸಿನ ಪರಿಹಾರದ ಚೆಕಕ್ವಿತರಿಸುತ್ತಿರುವುದಾದರೂ ಏಕೆ ಎಂದು ಪ್ರಶ್ನಿಸಿದರು.
ಬದ್ಧರಾಗಲು ಒತ್ತಾಯ: ಈ ಹಿಂದೆ ನೀಡಿರುವ ಮಾತಿನಂತೆ ಕೃಷಿಕರಿಗೆ ರು.1 ಸಾವಿರ ಮತ್ತು ತೋಟಗಾರಿಕೆ ರೈತರಿಗೆ ರು.2 ಸಾವಿರ ಪರಿಹಾರವನ್ನೇ ನೀಡಬೇಕು. ಇಲ್ಲವಾದಲ್ಲಿ ಜನ, ಜಾನುವಾರು ಸಮೇತ ಜಿಲ್ಲಾಡಳಿತ ಕಚೇರಿಗೆ ಮುತ್ತಿಗೆ ಹಾಕಬೇಕಾಗುತ್ತದೆ ಎಂದು ಲಕ್ಷ್ಮಣಸ್ವಾಮಿ ಏರು ಧ್ವನಿಯಲ್ಲೇ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

