ಬೆಂಗಳೂರು ಗ್ರಾಮಾಂತರ

ನಟ ವಿಜಯ್ ವಿರುದ್ಧದ ದೂರು: ವಾಪಸ್ ಪಡೆದ ವಿಜಿ ಮಾವ ರುದ್ರಪ್ಪ

Published On :

ಆನೇಕಲ್ಲು: ನಟ ವಿಜಯ್ ವಿರುದ್ದ ಜಿಗಣಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಅಪಹರಣ ಹಾಗೂ ಕೊಲೆ ಬೆದರಿಕೆ ಪ್ರಕರಣವನ್ನು ಮಾವ ರುದ್ರಪ್ಪ ವಾಪಸ್ ತೆಗೆದುಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಟ ವಿಜಯ್ ಮಾವ ಕುಂಬಾರನಹಳ್ಳಿಯ ರುದ್ರಪ್ಪನ ಮಗ ಆನಂದಕುಮಾರ್(ವಿಜಯ್ ಪತ್ನಿ ನಾಗರತ್ನ ಸಹೋದರ) ಗೆ ಅದೇ ಗ್ರಾಮದ ರಶ್ಮಿ ಎಂಬ ಯುವತಿಯೊಂದಿಗೆ ವಿವಾಹ ಮಾತುಕತೆ ನಡೆದಿತ್ತು. ಆದರೆ, ನಾಗರತ್ನಗೆ ಈ ಸಂಬಂಧ ಇಷ್ಟವಿರಲಿಲ್ಲ ಎನ್ನಲಾಗಿದೆ. ಇದರಿಂದಾಗಿಯೇ ಇವರ ದಾಂಪತ್ಯದಲ್ಲಿ ಸಾಮರಸ್ಯ ಕದಡಿ ವಿರಸ ಉಂಟಾಗಿತ್ತು. ಈ ನಡುವೆ ಆನಂದಕುಮಾರನನ್ನು ವಿಜಯ್ ಅಪಹರಿಸಿ ಕೊಲೆ ಬೆದರಿಕೆ ಹಾಕಿದ್ದರು ಎಂದು ರುದ್ರಪ್ಪ ದೂರು ನೀಡಿದ್ದರು.  
ಬುಧವಾರ ಬೆಳಗ್ಗೆ ವಿಜಯ್ 11 ಗಂಟೆ ಸುಮಾರಿಗೆ ಜಿಗಣಿ ಠಾಣೆಗೆ ವಕೀಲರ ಸಮೇತ ಹಾಜರಾಗಿ ದೂರಿನ ಸಂಬಂಧ ತಮ್ಮದೇನೂ ಪಾತ್ರವಿಲ್ಲ ಎಂದು ಹೇಳಿಕೆ ನೀಡಿ ಅವಶ್ಯಕತೆ ಬಂದಲ್ಲಿ ದೂರವಾಣಿ ಕರೆ ಮಾಡಿದ ಕೂಡಲೇ ಠಾಣೆಗೆ ಹಾಜರಾಗುವುದಾಗಿ ತಿಳಿಸಿದ್ದಾರೆ. ಕುಟುಂಬದ ಹಿರಿಯರ ಜೊತೆ ನಡೆಸಿದ ಮಾತುಕತೆ ಸಫಲವಾಗಿ ಜಿಗಣಿ ಪೊಲೀಸ್ ಠಾಣೆಯಲ್ಲಿನ ದೂರನ್ನು ವಾಪಸ್ ಪಡೆದಿರುವುದಾಗಿ ವಿಜಯ್ ಮಾವ ರುದ್ರಪ್ಪ ತಿಳಿಸಿದರು.
ಈ ನಡುವೆ ಆನಂದ ಕುಮಾರ್ ಸಹ ಠಾಣೆಗೆ ಬಂದಿದ್ದರು. ದೂರು ದಾಖಲಾಗಿದ್ದರೂ ತಕ್ಷಣಕ್ಕೆ  ಕ್ರಮ ವಹಿಸುವುದಿಲ್ಲ. ಕುಟುಂಬ ಸದಸ್ಯರ ನಡುವೆ ಸಾಮರಸ್ಯ ಮೂಡಲಿ. ಕಾನೂನಿನ ನೆರಳಿನಲ್ಲೇ ಆರೋಗ್ಯವಂತ ಸಮಾಜ ಕಟ್ಟುವ ಜವಾಬ್ದಾರಿ ಇಲಾಖೆಯದೂ ಆಗಿದೆ. ಎರಡೂ ಕುಟುಂಬಗಳ ಹಿರಿಯರು ಮಾತುಕತೆ ನಡೆಸಿರುವುದು ಉತ್ತಮ ಬೆಳವಣಿಗೆ ಎಂದು ಠಾಣಾಧಿಕಾರಿ ರೈ ತಿಳಿಸಿದ್ದಾರೆ.    ಚಿತ್ರ ನಟ ದುನಿಯಾ ವಿಜಯ್ ಬಂಧನ ಎಂಬ ಗಾಳಿಸುದ್ದಿಗೆ ಆಭಿಮಾನಿಗಳು ಹಾಗೂ ಬಂಧುಗಳು ಠಾಣೆ ಬಳಿ ಜಮಾಯಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.