ಬಡ್ಡಿ ರಹಿತ ಕೃಷಿ ಸಾಲದಿಂದ ಪ್ರಗತಿ ಸಾಧಿಸಿ: ಸತೀಶ್‌ಗೌಡ
ಸೂಲಿಬೆಲೆ: ಸರ್ಕಾರ ನೀಡಿರುವ ಬಡ್ಡಿ ರಹಿತ ಕೃಷಿ ಸಾಲವನ್ನು ಪಡೆದು ಪ್ರಗತಿ ಕಾಣುವಂತೆ ಸೂಲಿಬೆಲೆ ರೇಷ್ಮೆ ಬೆಳೆಗಾರರು ಹಾಗೂ ರೈತರ ಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷ ಬಿ.ವಿ ಸತೀಶ್‌ಗೌಡ ಕಿವಿಮಾತು ಹೇಳಿದ್ದಾರೆ.
ಪಟ್ಟಣದ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ಬುಧವಾರ ನಡೆದ ಸಾಲ ವಿತರಣೆ ಸಮಾರಂಭದಲ್ಲಿ ಫಲಾನುಭವಿಗಳಿಗೆ ಚೆಕ್ ವಿತರಿಸಿ ಮಾತನಾಡಿದರು.
ಸರ್ಕಾರ ರೈತರ ಅಭಿವೃದ್ಧಿಗಾಗಿ ನೀಡುವ ಕೃಷಿ ಸಾಲವನ್ನು ಪಡೆದು ರೈತರು ಉತ್ತಮ ಬೆಳೆ ಪಡೆಯುವ ಮುಖೇನಾ ಆರ್ಥಿಕಾಭಿವೃದ್ಧಿಯನ್ನು ಹೊಂದಬೇಕು. ಅಂತರ್ಜಲ ಕುಸಿತವಾಗುತ್ತಿರು ಈ ದಿನಗಳಲ್ಲಿ ರೈತರ ಸಂಕಷ್ಟಕ್ಕೆವನ್ನು ಮನಗಂಡು ಸರ್ಕಾರ ನೀಡುತ್ತಿರುವ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಬ್ಯಾಂಕ್ ವ್ಯಾಪ್ತಿಯ 80 ಫಲಾನುಭವಿಗಳಿಗೆ ರು.35 ಲಕ್ಷ ಕೃಷಿ ಸಾಲ ನೀಡಲಾಗುವುದು. ಸಹಕಾರ ಬ್ಯಾಂಕ್ ರೈತ ಮತ್ತು ಗ್ರಾಹಕರಿಗೆ ಉತ್ತಮ ಸೇವೆ ನೀಡುವಲ್ಲಿ ನಾನಾ ಯೋಜನೆ ರೂಪಿಸಿದ್ದು, ಇದಕ್ಕೆ ಗ್ರಾಹಕರ ಸಹಕಾರ ಅಗತ್ಯವಾಗಿದೆ ಎಂದರು.
ಬಿಡಿಸಿಸಿ ಬ್ಯಾಂಕ್ ಜಿಲ್ಲಾ ನಿರ್ದೇಶಕ ಬಿ.ತಮ್ಮೇಗೌಡ ಮಾತನಾಡಿ, ರಾಮನಗರ ಮತ್ತು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯಲ್ಲಿ 186 ಸಹಕಾರ ಬ್ಯಾಂಕ್‌ಗಳಿದ್ದು, ಇವುಗಳ ಮೂಲಕ ರೈತರಿಗೆ ಸಾಲ ವಿತರಣೆ ಮಾಡಲಾಗುತ್ತಿದೆ. ಹೊಸಕೋಟೆ ತಾಲೂಕಿನಲ್ಲಿ 9 ಸಂಘಗಳಿದ್ದು, ಸೂಲಿಬೆಲೆ ಬ್ಯಾಂಕಿನಿಂದ ಕಳೆದ ಸಾಲಿನಲ್ಲಿ 366 ಮಂದಿಗೆ ಬೆಳೆ ಸಾಲ ನೀಡಿದ್ದು, ರೈತರ ಸಕಾಲಕ್ಕೆ ಮರುಪಾವತಿಸಿ ಸಾಲವನ್ನು ನವೀಕರಣ ಮಾಡಬಹುದಾಗಿದೆ ಎಂದರು.
ಸಿಇಒ ಶ್ರೀನಿವಾಸ್ ಮೂರ್ತಿ, ಸಹಾಯಕ ಸಿಇಒ ಶ್ರೀನಿವಾಸ್, ತಾಪಂ ಸದಸ್ಯೆ ಮಂಜುಳಾ ವೆಂಕಟೇಶ್, ನಿರ್ದೇಶಕರಾದ ಗಂಗಪ್ಪ, ಸೋಮಶೇಖರ್, ಗ್ರಾಪಂ ಸದಸ್ಯ ಕೃಷ್ಣಪ್ಪ, ಜಗದೀಶ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

