ಬೆಂಗಳೂರು ಗ್ರಾಮಾಂತರ

'ರಾನಡೆ ವಿಚಾರ ಯುವಕರಿಗೆ ಅಗತ್ಯ'

Published On :

ಕನಕಪುರ: ಸಂಕೀರ್ಣವಾದ ಭಾರತೀಯ ಸಮಾಜ ಅನೇಕ ವಿಶ್ವಮಾನ್ಯ ಸಮಾಜಸುಧಾರಕರಿಗೆ ಜನ್ಮನೀಡಿದೆ. ಸ್ವಾಂತಂತ್ರ್ಯಪೂರ್ವ ದಲ್ಲಿಯೇ ಭಾರತೀಯ ಸಮಾಜವನ್ನು ಸುಧಾರಣೆಯ ಪಥದಲ್ಲಿ ನಡೆಸಿ ಚಲನಶೀಲತೆ ತಂದಿತ್ತ ಸಮಾಜಸುಧಾರಕ ಮಹದೇವ ಗೋವಿಂದ ರಾನಡೆಯವರ ವಿಚಾರಗಳು ಇಂದಿನ ಯುವಜನರನ್ನು ಅತ್ಯಗತ್ಯವಾಗಿ ತಲುಪಬೇಕಾಗಿದೆ ಎಂದು ಪ್ರಾಧ್ಯಾಪಕ ಮುನಿರಾಜಪ್ಪ ಹೇಳಿದ್ದಾರೆ.
 ಅವರು ಕನಕಪುರ ಎಸ್.ಕರಿಯಪ್ಪ ಸ್ನಾತಕೋತ್ತರ ಕೇಂದ್ರದಲ್ಲಿ ರಾನಡೆ 171 ನೇ ಜನ್ಮದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.  ಕಾರ್ಯಕ್ರಮದ ಅಂಗವಾಗಿ ಸಹಾಯಕ ಪ್ರಾಧ್ಯಾಪಕ ಡಾ.ಟಿ.ಎಸ್. ವೆಂಕಟೇಶ್ ರಾನಡೆಯವರ ಬದುಕು-ಸಾಧನೆಗಳ ಪರಿಚಯ ಮಾಡಿಕೊಟ್ಟರು. ಬಿ.ಎನ್.ಸಂತೋಷ್ ಕುಮಾರ್ ರಾನಡೆಯವರ ಆರ್ಥಿಕ ವಿಚಾರಗಳನ್ನು ಕುರಿತು ಮಾತನಾಡಿದರೆ, ಲಕ್ಷ್ಮೀನಾರಾಯಣ ರಾನಡೆಯವರ ಸಮಾಜ ಸುಧಾರಣೆ ಬಗ್ಗೆ ತಿಳಿಸಿಕೊಟ್ಟರು. ಮುಖ್ಯ ಅತಿಥಿಗಳಾಗಿ ಪ್ರಾಧ್ಯಾಪಕ ಡಾ.ಗೋವಿಂದಪ್ಪ, ಪಾರ್ಥಸಾರಥಿ, ಡಾ.ಶ್ರೀಧರ್ ಪಾಲ್ಗೊಂಡಿದ್ದರು.
ಕೃಷಿ ಉತ್ಪನ್ನ ಕುರಿತು ಸಂವಾದ
ಹೊಸಕೋಟೆ: ಪಟ್ಟಣದ ತಾಲೂಕು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮವನ್ನು ಕೃಷಿ ವಿವಿಯ ಪ್ರಾಧ್ಯಾಪಕ ಡಾ.ನರಸೇಗೌಡ ಉದ್ಘಾಟಿಸಿದರು.ನಂತರ ಮಾತನಾಡಿ ಕೃಷಿಯಲ್ಲಿ ವೈಜ್ಞಾನಿಕ ಪದ್ಧತಿ ಅಳವಡಿಸಿಕೊಳ್ಳಬೇಕಾದದ್ದು ಅತ್ಯವಶ್ಯಕವಾಗಿದೆ, ಕೇವಲ ಸ್ವವಿವೇಚನೆಯಿಂದ ತರಕಾರಿಗಳನ್ನು ಬೆಳೆಯುವ ಬದಲಾಗಿ ಋತುವಿನ ವಾತಾವರಣಕ್ಕೆ ಅನುಗುಣವಾಗಿ ಸರಿ ಹೊಂದುವ ಬೆಳೆಗಳನ್ನು ಆಯ್ಕೆಮಾಡಿ ನಷ್ಟ ಉಂಟಾಗುವುದನ್ನು ನಿವಾರಿಸಿಕೊಳ್ಳಬೇಕು. ಔಷಧಗಳ ಬಳಕೆ, ಉತ್ಪಾದನೆ ಸುಧಾರಣೆಗೆ ಅಗತ್ಯ ಮಾಹಿತಿ ನೀಡಿದರು.
ನಂತರ ತಾಲೂಕು ಎಪಿಎಂಸಿ ಅಧ್ಯಕ್ಷ ಸಿ ಮುನಿಯಪ್ಪ ಮಾತನಾಡಿ ತಾಲೂಕಿನಲ್ಲಿ ರೈತರು ಹೆಚ್ಚಾಗಿ ತರಕಾರಿ ಬೆಳೆಗಳನ್ನೆ ಅವಲಂಬಿಸಿದ್ದು, ತಜ್ಞರಿಂದ ಇಂತಹ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ರೈತರು ಬೆಳೆಗಳ ಬಗ್ಗೆ ಅಧಿಕಾರಿಗಳೊಂದಿಗೆ ಸಂವಾದ ನಡೆಸಿದರು. ಸಮಿತಿ ಉಪಾಧ್ಯಕ್ಷ ರಾಮಾಂಜಿನಪ್ಪ, ಕಾರ್ಯದರ್ಶಿ ಜಿ.ಚಿಕ್ಕನರಸಿಂಹ ರೆಡ್ಡಿ, ಕೃಷಿ ಮಾರಾಟ ಮಂಡಳಿಯ ಎಜಿಎಂ ಪ್ರಮೀಳಾ, ಟಿಎಪಿಸಿಎಂಎಸ್ ಅಧ್ಯಕ್ಷ ಟಿ. ಸೊಣ್ಣಪ್ಪ ಉಪಸ್ತಿತರಿದ್ದರು.

28 ರಂದು ಸಭೆ
ರಾಮನಗರ:  ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೆ.ಮುದ್ದುರಾಜ್ ಅಧ್ಯಕ್ಷತೆಯಲ್ಲಿ ಜ.28ರ ಬೆಳಗ್ಗೆ 11ಕ್ಕೆ ಜಿ.ಪಂ.ಸಭಾಂಗಣದಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.