ಬೆಂಗಳೂರು ಗ್ರಾಮಾಂತರ

ಜೇನು ಪೆಟ್ಟಿಗೆ ಇಡುವುದು ಮುಖ್ಯವಲ್ಲ, ಸಾಕುವುದು ಮುಖ್ಯ: ರಜನಿ

Published On :

ಸೂಲಿಬೆಲೆ:  ಜೇನು ಕೃಷಿ ತರಬೇತಿ ಪಡೆದವರು ಬರೀ ಜೇನು ಪೆಟ್ಟಿಗೆ ಇಡುವುದು ಮುಖ್ಯವಲ್ಲ. ಅದನ್ನು ಸಮರ್ಥವಾಗಿ ಸಾಕಿ ಆರ್ಥ್ಞಿ ಅಭಿವೃದ್ಧಿಯನ್ನು ಹೊಂದುವುದು ಮುಖ್ಯ ಎಂದು ಹೊಸಕೋಟೆ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ರಜನಿ ಹೇಳಿದ್ದಾರೆ.
ಸೂಲಿಬೆಲೆ ಹೋಬಳಿ ಕಮ್ಮಸಂದ್ರ ಗ್ರಾಮದಲ್ಲಿ ತೋಟಗಾರಿಕೆ ಇಲಾಖೆಯಿಂದ ನಡೆದ ಮೂರು ದಿನಗಳ ಜೇನು ಕೃಷಿ ತರಬೇತಿ ಮುಕ್ತಾಯ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿದ್ದ ಹೊಸಕೋಟೆ ಕೃಷಿ ಮಿಷನ್ ಸದಸ್ಯ ಪ್ರಫುಲ್ಲ ಮಾತನಾಡಿ, ಅಂತರ್ಜಲ ಕುಸಿತವಾಗುತ್ತಿರುವ ಪ್ರಸಕ್ತ ದಿನಗಳಲ್ಲಿ ರೈತರು ಹೆಚ್ಚಾಗಿ ಹನಿ ನೀರಾವರಿ ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಸಾವಯವ ಗೊಬ್ಬರಗಳನ್ನು ಬಳಿಸಿ ಉತ್ತಮ ಬೆಳೆಯನ್ನು ಬೆಳೆಯಬೇಕು. ರೈತರು ತಮ್ಮ ಕುಟುಂಬದ ಮಧ್ಯ ಸಾಕುವ ಹೈನುಗಾರಿಕೆಯಂಥ ಉಪ ಕಸುಬಗಳಲ್ಲಿ ಜೇನು ಕೃಷಿಯನ್ನು ಅಳವಡಿಸಿಕೊಂಡು ಪ್ರಗತಿಯನ್ನು ಕಾಣಬೇಕು ಎಂದರು.
ಇದೇ ವೇಳೆ ತರಬೇತಿ ಪಡೆದವರಿಗೆ ಪ್ರಮಾಣ ಪತ್ರಗಳನ್ನು ವಿತರಣಿ ಮಾಡಲಾಯಿತು. ಜಿಲ್ಲಾ ಬಿಜೆಪಿ ಸಂಘಟನೆ ಕಾರ್ಯದರ್ಶಿ ಕಾಂತ್‌ರಾಜ್, ಹಾಪ್ ಕಾಮ್ ನಿರ್ದೇಶಕ ಕೆ.ಎನ್. ವಸಂತ್‌ಕುಮಾರ್, ಜೇನು ಪ್ರದರ್ಶಕ ಬಾಲಕೃಷ್ಣ ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.