ಬೆಂಗಳೂರು ಗ್ರಾಮಾಂತರ

'ಬಾಲಗಂಗಾಧರನಾಥ ಸ್ವಾಮೀಜಿ ಮತ್ತೆ ಹುಟ್ಟಿ ಬರಲಿ'

Published On :

ಮಾಗಡಿ: ಆದಿಚುಂಚನಗಿರಿ ಶ್ರೀಬಾಲಗಂಗಾಧರನಾಥಸ್ವಾಮೀಜಿ ಮತ್ತೆ ಹುಟ್ಟಿ ಬರಲಿ, ಮತ್ತೊಷ್ಟು ಸಾಮಾಜಿಕ ಕ್ರಾಂತಿ ಉಂಟುಮಾಡಲಿ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ನುಡಿದರು.
   ಅವರು ಇಲ್ಲಿನ ಅಂಬೇಡ್ಕರ್ ಭವನದಲ್ಲಿ  ಶುಕ್ರವಾರ  ಏರ್ಪಡಿಸಿದ್ದ ಶ್ರದ್ಧಾಂಜಲಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಶೂದ್ರರೂ ಸಮಾನತೆಯಿಂದ ಸಮಾಜದಲ್ಲಿ ಬದುಕಬೇಕು. ಮುಖ್ಯವಾಹಿನಿಯಲ್ಲಿ ಬೆಳೆಯಬೇಕು ಎಂಬ ಚಿಂತನೆಯಿಂದ ಸಮಾಜಕ್ಕೆ ತನ್ನದೇ ಆದ ಕೊಡುಗೆಯನ್ನು ಶ್ರೀಗಳರು ನೀಡಿದ್ದಾರೆ.  ನಿಸ್ವಾರ್ಥ ಸೇವೆ, ಸಮಸ್ತ ಆಸ್ತಿಯನ್ನು ಸಮಾಜಕ್ಕೆ ವಿನಿಯೋಗಿಸಿದ್ದಾರೆ.  ಶ್ರೀಗಳ ಹೆಸರು ಅಜಾಮರವಾಗಿರಬೇಕು ಎಂಬ ಚಿಂತನೆಯಿಂದ ಪಟ್ಟಣದಲ್ಲಿನ ವೃತ್ತಕ್ಕೆ ಶ್ರೀಬಾಲಗಂಗಾಧರನಾಥಸ್ವಾಮೀಜಿ ವೃತ್ತ ಎಂಬ ನಾಮಕರಣ ಮಾಡಲು ನಿರ್ಣಯ ಕೈಗೊಳ್ಳಲು ಪುರಸಭೆಗೆ ಮನವಿ ಮಾಡುವುದಾಗಿ ತಿಳಿಸಿದರು. ಶ್ರೀಗಳ ಹೆಸರಿನಲ್ಲಿ ಲಕ್ಷ ಸಸಿ ನೆಡುವ ಕಾರ್ಯಕ್ರಮಗಳನ್ನು ತಾಲೂಕಿನಲ್ಲಿ ಹಮ್ಮಿಕೊಳ್ಳವುದಾಗಿ   ಬಾಲಕೃಷ್ಣ ಭರವಸೆ  ನೀಡಿದರು.
    ಜೆಡಿಎಸ್ ಮುಖಂಡ ಹಾಗು ನಿವೃತ್ತ ಉಪಾಧ್ಯಾಯ ಎಂ.ರೇವಣ್ಣ ಮಾತನಾಡಿ ಶ್ರೀಗಳು ಮಠವನ್ನು ಬಾನೆತ್ತರಕ್ಕೆ ವಿಸ್ತರಿಸಿದ ಕೀರ್ತಿಗೆ ಪಾತ್ರರಾಗಿದ್ದಾರೆ. ಮಠ ಮತ್ತೊಷ್ಟು ವಿಸ್ತಾರಗೊಳ್ಳಲಿ, ಶ್ರೀಗಳರು ಹಾಕಿಕೊಟ್ಟಿರುವ ತಳಹದಿಯ ಮೇಲೆ ನಾವೆಲ್ಲರೂ ಸಾಗೋಣ ಎಂದರು.
 ಬುದ್ಧ, ಬಸವ, ಅಂಬೇಡ್ಕರ್  ಅವರ ಹೆಸರು ಜನಮನದಲ್ಲಿ ಉಳಿದಂತೆ ಸಂತ ಆದಿಶ್ರೀಗಳ ಹೆಸರು ಶಾಶ್ವತವಾಗಿ ವಿಶ್ವದಲ್ಲೆಡೆ ಪಸರಿಸಲಿ,  ಧರ್ಮ ಕಾರ್ಯಗಳು ಇನ್ನಷ್ಟು ನಡೆಯಲಿ ಎಂದು ರಾಮಣ್ಣ ತಿಳಿಸಿದರು. ರಾಜ್ಯ ಕೆಪಿಟಿಸಿಎಸ್  ಉಪಾಧ್ಯಕ್ಷ  ತಗ್ಗೀಕುಪ್ಪೆ ರಾಮಕೃಷ್ಣಯ್ಯ ಶ್ರೀಗಳ ಸಾಧನೆ, ಪರಿಸರ ಕಾಳಜಿ ಕುರಿತು ಮಾತನಾಡಿದರು. ಜಿಪಂ ಅಧ್ಯಕ್ಷಮುದ್ದುರಾಜ ಯಾದವ್, ಹಂಸಕುಮಾರಿ,  ವಿಜಯಕುಮಾರ್, ಕೆಂಪೇಗೌಡ, ಶಿಕ್ಷಕ ನಾಗರಾಜು, ತಾ.ಪಂ. ಅಧ್ಯಕ್ಷ ಬಿ.ಟಿ. ವೆಂಕಟೇಶ್, ಎಸ್.ಕಾಂತರಾಜು, ಬಮೂಲ್ ನರಸಿಂಹಮೂರ್ತಿ, ಮಂಜುನಾಥ್, ಮೂರ್ತಿ,  ಕಲ್ಯ ಪದ್ಮಯ್ಯ, ಯಲಕ್ಕಯ್ಯ, ಡಾ.ಸಿ. ರಾಜಶೇಖರ್, ನರಸಿಂಹಮೂರ್ತಿ, ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.