ಶಾಲೆಗಳು ಸತ್ಪ್ರಜೆಗಳನ್ನು ರೂಪಿಸುವ ಶ್ರದ್ಧಾಕೇಂದ್ರವಾಗಲಿ
ಆನೇಕಲ್: ಖಾಸಗೀ ಶಾಲೆಗಳು ಸರ್ಕಾರಕ್ಕೆ ಸೆಡ್ಡು ಹೊಡೆಯುವಂತ ಕಟ್ಟಡ, ಮೈದಾನ, ಆಧುನಿಕ ಕಲಿಕಾ ಉಪಕರಣಗಳನ್ನು ಹೊಂದುವ ಮೂಲಕ ಉತ್ತಮ ಶಿಕ್ಷಣ ನೀಡುತ್ತಿರುವುದು ಶ್ಲಾಘನೀಯ ಎಂದು ನಿವೃತ್ತ ಶಿಕ್ಷಕ ಹಾಗೂ ಶಿಕ್ಷಣ ತಜ್ಞ ಕೆ. ವೆಂಕಟೇಶಮೂರ್ತಿ ತಿಳಿಸಿದ್ದಾರೆ.
ಅವರು ತಾಲೂಕಿನ ತೆಲಗರಹಳ್ಳಿಯ ಸ್ವಾಮಿ ವಿನೇಕಾನಂದ ಸೆಂಟ್ರಲ್ ಸ್ಕೂಲ್ ಆವರಣದಲ್ಲಿ ಸ್ವಾಮಿ ವಿವೇಕಾನಂದರ 150ನೆಯ ಜನ್ಮ ದಿನದ ನೆನಪಿನಲ್ಲಿ ಗಿಡ ನೆಟ್ಟು ಮಾತನಾಡಿ ಆಧುನಿಕ ಶಿಕ್ಷಣದ ಜೊತೆಗೆ ಉತ್ತಮ ಮಾರ್ಗದರ್ಶನ ನೀಡಿ ವಿದ್ಯಾರ್ಥಿಗಳನ್ನು ಸತ್ಪ್ರಜೆಗಳನ್ನಾಗಿ ರೂಪಿಸಬೇಕೆಂದು ಕರೆ ನೀಡಿದರು.
ರಾಜಾಪುರ ಮಠದ ಶ್ರೀ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ ಪ್ರಾಚೀನ ಗುರುಕುಲದಲ್ಲಿ ವಿದ್ಯಾರ್ಥಿಗಳನ್ನು ಎಲ್ಲ ರಂಗಗಳಲ್ಲಿಯೂ ತಯಾರು ಮಾಡುತ್ತಿದ್ದರು.
ಇಂದಿನ ಪಠ್ಯ ಶಿಕ್ಷಣ ಕ್ರಮ ಅಮೂಲಾಗ್ರವಾಗಿ ಬದಲಾಗಬೇಕು ಎಂದರು.
ಜಿಪಂ ಸದಸ್ಯ ಜೆ. ನಾರಾಯಣಪ್ಪ ಮಾತನಾಡಿ ಕೆಲ ಖಾಸಗಿ ಶಾಲೆಗಳು ಹಣ ಮಾಡುವ ಕೇಂದ್ರಗಳಾಗಿದ್ದು ವಿದೇಶಿ ಸಂಸ್ಕೃತಿಯನ್ನು ಪೋಷಿಸುತ್ತದೆ.
ಕೇವಲ ಪಿಯು ಮಾಡಿದವರನ್ನು ಶಿಕ್ಷಕರನ್ನಾಗಿ ನೇಮಿಸಿಕೊಳ್ಳದೇ ಟಿಸಿಹೆಚ್, ಬಿಎಡ್ ಆದವರನ್ನು ಮಾತ್ರ ನೇಮಿಸಿಕೊಂಡು ಶಿಕ್ಷಣದಲ್ಲಿ ಉತ್ತಮ ಅಡಿಪಾಯ ಹಾಕಬೇಕೆಂದು ಹೇಳಿದರು. ವಿವೇಕಾನಂದರ ಜೀವನದ ತ್ಯಾಗ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಪೊರೇಷನ್ ಬ್ಯಾಂಕ್ ವ್ಯವಸ್ಥಾಪಕ ರಾಮಕೃಷ್ಣ ಮಾತನಾಡಿ ಮೌಲ್ಯಯುತ ಶಿಕ್ಷಣಕ್ಕೆ ಬ್ಯಾಂಕ್ ವತಿಯಿಂದ ರು. 20 ಲಕ್ಷ ಶೈಕ್ಷಣಿಕ ಸಾಲ ನೀಡುವುದಾಗಿ ತಿಳಿಸಿದರು. ಮರಸೂರು ಎಪಿಎಂಸಿ ಸದಸ್ಯ ಬಿ.ನಾಗರಾಜು ವೇದಿಕೆಯಲ್ಲಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

