ಶಾಸಕ ಡಿಕೆಶಿಗೆ ಸಚಿವ ಸೋಮಣ್ಣ ಪ್ರಶಂಸೆ
ರಾಮನಗರ: ದೂರದೃಷ್ಟಿಯ ಯೋಜನೆಗಳ ಅನುಷ್ಠಾನದ ಮೂಲಕ ಶಾಸಕ ಡಿ.ಕೆ.ಶಿವಕುಮಾರ್ ಅವರು ಕನಕಪುರ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಪಣತೊಟ್ಟಿರುವುದು ನಿಜಕ್ಕೂ ಮೆಚ್ಚುವಂಥದ್ದು ಎಂದು ವಸತಿ ಸಚಿವ ವಿ.ಸೋಮಣ್ಣ ಪ್ರಶಂಸಿಸಿದರು. ಕನಕಪುರ ಪಟ್ಟಣದಲ್ಲಿ ರಾಜೀವ್ ಗಾಂಧಿ ವಸತಿ ನಿಗಮ, ಸ್ಲಂ ಬೋರ್ಡ್, ಗಣಹ ಮಂಡಳಿಯಿಂದ ನಿರ್ಮಿಸುತ್ತಿರುವ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಬಡಾವಣೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ಬಡಾವಣೆಯಲ್ಲಿ 4 ಸಾವಿರ ಉಚಿತ ನಿವೇಶನಗಳನ್ನು ರಚಿಸುತ್ತಿದ್ದು, ಫಲಾನುಭವಿಗಳಿಗೆ ಉಚಿತವಾಗಿ ಹಂಚಲಾಗಿದೆ ಎಂದು ತಿಳಿಸಿದರು.
ಒಂದು ವರ್ಷದಲ್ಲಿ ಪೂರ್ಣ: ಮೂಲ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ಇನ್ನೊಂದು ವರ್ಷದಲ್ಲಿ ಈ ಬಡಾವಣೆಯನ್ನು ಪೂರ್ಣಗೊಳಿಸಲಾಗುತ್ತದೆ. ಹೆಚ್ಚಿನ ದರ ಸಿಗುತ್ತದೆ ಎನ್ನುವ ಕಾರಣಕ್ಕೆ ಫಲಾನುಭವಿಗಳು ನಿವೇಶನ ಮಾರಾಟ ಮಾಡಿಕೊಳ್ಳಲು ಮುಂದಾಗಕೂಡದು ಎಂದು ಅವರು ಸಲಹೆ ನೀಡಿದರು. ಬೆಂಗಳೂರು ಮಹಾನಗರಕ್ಕೆ ಸಮೀಪದಲ್ಲಿರುವ ಕನಕಪುರದಲ್ಲಿ ಇಂತಹ ಯೋಜನೆಗಳ ಅನುಷ್ಠಾನದಿಂದ ಜನರ ವಲಸೆ ತಪ್ಪಿಸಲು ಸಾಧ್ಯವಾಗುತ್ತದೆ. ಹೀಗಾಗಿ ಕನಪುರ ಬಳಿ 450 ಎಕರೆಯಲ್ಲಿ ಗಣಹ ಮಂಡಳಿಯಿಂದ ಬೃಹತ್ ಬಡಾವಣೆಯನ್ನೂ ನಿರ್ಮಿಸಲಾಗುತ್ತಿದೆ ಎಂದರು.
ತವರು ತಾಲೂಕಿನ ಋಣ: ತಮಗೆ ಜನ್ಮ ನೀಡಿರುವ ಕನಕಪುರ ತಾಲೂಕಿನ ಋಣ ತೀರಿಸುವುದಕ್ಕಾಗಿ ಕೈಲಾದಷ್ಟು ಸೇವೆ ಸಲ್ಲಿಸಬೇಕೆನ್ನುವ ಉದ್ದೇಶ ತಮ್ಮದಾಗಿದೆ. ತಮ್ಮ ಸೇವೆಯ ಹಿಂದೆ ರಾಜಕೀಯ ಉದ್ದೇಶ ಖಂಡಿತ ಇಲ್ಲ. ತಮ್ಮ ಸ್ಪರ್ಧೆಗಾಗಿ ಬೆಂಗಳೂರಿನಲ್ಲಿ ನಾನಾ ಕ್ಷೇತ್ರಗಳಿವೆ. ಯಾವ ಕಾರಣಕ್ಕೂ ಕನಕಪುರಿಂದ ಸ್ಪರ್ಧಿಸುವ ಆಸೆ ತಮಗಿಲ್ಲ ಎಂದು ಸ್ಪಷ್ಟಪಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

