ಗಣರಾಜ್ಯೋತ್ಸವ ಸಾಂಕೇತಿಕ ಆಚರಣೆ ಆಗದಿರಲಿ
ಕನಕಪುರ: ದೇಶದ ಸಾರ್ವಭೌಮತೆ, ಅಖಂಡತೆಗಳನ್ನು ಎತ್ತಿಹಿಡಿಯುವ ಗಣರಾಜ್ಯೋತ್ಸವ ಸಾಂಕೇತಿಕ ಆಚರಣೆಯಾಗದೆ ಜನರೆಲ್ಲರೂ ಪಾಲ್ಗೊಳ್ಳುವ ನಾಡಹಬ್ಬವಾಗಬೇಕು. ಯುವಜನರಲ್ಲಿ ದೇಶಾಭಿಮಾನ,ಪ್ರೀತಿಗಳನ್ನು ಬೆಳೆಸುವ ಸಮಾರಂಭವಾಗಬೇಕು ಎಂದು ದೇಗುಲಮಠದ ಶ್ರೀ ಮುಮ್ಮಡಿ ಮಹಾಲಿಂಗಸ್ವಾಮೀಜಿ ಹೇಳಿದ್ದಾರೆ.
ಅವರು ಕನಕಪುರದ ದೇಗುಲಮಠ ಸಮೂಹ ಶಿಕ್ಷಣಸಂಸ್ಥೆ ಆವರಣದಲ್ಲಿ 64 ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಧ್ವಜವಂದನೆ ಸ್ವೀಕರಿಸಿ ಮಾತನಾಡಿದರು. ಶ್ರೀ ಮುಮ್ಮಡಿ ಮಹಾಲಿಂಗ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು.
ಶಾಲಾ ಮಕ್ಕಳಿಂದ ಆಕರ್ಷಕ ಸಮೂಹನೃತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಮುಖ್ಯಅತಿಥಿಗಳಾಗಿ ಹಿರಿಯ ನ್ಯಾಯವಾದಿ ಮುದ್ದುಮಲ್ಲಪ್ಪ, ಪತ್ರಕರ್ತ ಜಿ.ಎನ್. ಸತೀಶ್, ಆಡಳಿತಾಧಿಕಾರಿ ಬಸವರಾಜು, ವ್ಯವಸ್ಥಾಪಕ ರೇವಣ್ಣ ಪಾಲ್ಗೊಂಡಿದ್ದರು. ಮುಖ್ಯ ಶಿಕ್ಷಕಿ ಪುಷ್ಟಲತಾ ಸ್ವಾಗತಿಸಿದರು. ಉಪನ್ಯಾಸಕ ಉಮೇಶ್ ನಿರೂಪಿಸಿದರು. ಐಟಿಐ ವಿದ್ಯಾಲಯದ ಪ್ರಾಂಶುಪಾಲ ಭೈರಣ್ಣ ವಂದಿಸಿದರು.
ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ ಕಂಕಣಬದ್ಧರಾಗೋಣ
ಮಾಗಡಿ: ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕಾಗಿ ನಾವೆಲ್ಲರೂ ಕಂಕಣಬದ್ಧರಾಗೋಣ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ಕರೆ ನೀಡಿದರು.
ಅವರು ಐತಿಹಾಸಿಕ ಕೆಂಪೇಗೌಡ ಕೋಟೆ ಮೈದಾನದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಏರ್ಪಡಿಸಿದ್ದ 64ನೇ ಗಣರಾಜ್ಯೋತ್ಸವ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಸಂವಿಧಾನದ ಆಶಯಗಳಿಗೆ ಹಾಗೂ ಭದ್ರತೆಯಲ್ಲಿ ವಿಫಲರಾಗಿದ್ದೇವೆ. 64 ವರ್ಷ ಕಳೆದರೂ ಇನ್ನೂ ಸಂವಿಧಾನದ ಆಶಯಗಳು ಈಡೇರಿಲ್ಲ, ದೇಶದಲ್ಲಿ ಭಯೋತ್ಪಾದನೆ ಜೊತೆಗೆ ಆಂತರಿಕ ಭದ್ರತೆಯೂ ನಮ್ಮನ್ನು ಕಾಡುತ್ತಿದೆ. ಇದರಿಂದಾಗಿ ಅನೇಕ ಸಮಸ್ಯೆಗಳನ್ನು ಭಾರತ ಎದುರಿಸುತ್ತಿದೆ. ದೇಶದಲ್ಲಿ ಕಟ್ಟ ಕಡೆಯ ವ್ಯಕ್ತಿಯೂ ನೆಮ್ಮದಿಯ ವಾತಾವರಣದಲ್ಲಿ ಜೀವಿಸಬೇಕಾದರೆ ನಾವೆಲ್ಲರೂ ಒಗ್ಗಟ್ಟಿನ ಮಂತ್ರ ಜಪಿಸಿದಾಗ ಮಾತ್ರ ವಿವಿಧತೆಯಲ್ಲಿ ಏಕತೆ ಕಾಣಲು ಸಾಧ್ಯ. ಶಿಕ್ಷಕರು ಮಕ್ಕಳಿಗೆ ಐಕ್ಯತಾ ಮಂತ್ರದ ಪಾಠ ಹೇಳಬೇಕಿದೆ ಎಂದರು.
ತಹಸೀಲ್ದಾರ್ ಎಚ್.ಡಿ. ಚಂದ್ರಶೇಖರಯ್ಯ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶದಲ್ಲಿ ಸಾಮರಸ್ಯ ಐಕ್ಯತೆ ಕಾಪಾಡಬೇಕಾದರೆ ಸಂವಿಧಾನದಿಂದ ಮಾತ್ರ ಸಾಧ್ಯ ಎಂದರು.
ಕಿತ್ತು ತಿನ್ನುತ್ತಿದೆ: ಅತ್ಯಾಚಾರ, ಭ್ರಷ್ಟಾಚಾರ ದೇಶವನ್ನೇ ಕಿತ್ತುತಿನ್ನುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳು ಆಂತರಿಕ ಭದ್ರತೆಯ ಕರ್ತವ್ಯವವನ್ನು ಮರೆತಿದ್ದಾರೆ. ನಾಗರಿಕರು ಆತ್ಮಾಲೋಕನ ಮಾಡಿಕೊಳ್ಳಬೇಕಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷೆ ಕಲ್ಪನಾ ಶಿವಣ್ಣ ತಿಳಿಸಿದರು.
ಇದೇ ಸಂದರ್ಭದಲ್ಲಿ ಶಾಲಾ ಮಕ್ಕಳಿಂದ ಶಾಸಕ ಎಚ್.ಸಿ. ಬಾಲಕೃಷ್ಣ ವಂದನೆ ಸ್ವೀಕರಿಸಿದರು. ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ವಿಜೇತ ಮಕ್ಕಳಿಗೆ ಶಾಸಕ ಬಹುಮಾನ ಹಾಗು ಪ್ರಶಸ್ತಿ ಪತ್ರ ವಿತರಿಸಿದರು. ಪುರಸಭಾಧ್ಯಕ್ಷೆ ಸುಮಾ ಗಂಗರೇವಣ್ಣ, ತಾ.ಪಂ. ಅಧ್ಯಕ್ಷ ಬಿ.ಟಿ. ವೆಂಕಟೇಶ್, ಜಿ.ಪಂ. ಸದಸ್ಯ ವಿಜಯಕುಮಾರ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

