ಇತಿಹಾಸವನ್ನು ತಿರುಚುವ ಕೆಲಸ ಮಾಡಬಾರದು
ಚನ್ನಪಟ್ಟಣ: ಶಿಕ್ಷಣ ಇತಿಹಾಸವನ್ನು ಕಲಿಸ ಬೇಕೆ ವಿನಃ ಇತಿಹಾಸವನ್ನು ತಿರುಚುವ ಕೆಲಸ ಮಾಡಬಾರದು ಎಂದು ಸ್ಪಟಿಕಪುರಿ ಮಠಾಧೀಶ ನಂಜಾವಧೂತ ಶ್ರೀಗಳು ತಿಳಿಸಿದರು.
ಪಟ್ಟಣದ ಕೇಂಬ್ರಿಡ್ಜ್ ಶಾಲೆಯ 11ನೇ ವಾರ್ಷಿ ಕೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿ, ಇತ್ತೀಚಿನ ಪಠ್ಯಕ್ರಮಗಳು ಇತಿಹಾಸವನ್ನು ತಿರುಚುತ್ತಿದ್ದು ಇರು ಅಪಾರ್ಥಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ವಿಷಾದಿಸಿದರು.
ಶಿಕ್ಷಣ ಸಮಾಜ ಮುಖಿಯಾದಾಗ ಮಾತ್ರ ವಿದ್ಯಾರ್ಥಿಗಳನ್ನು ಸತ್ಪ್ರಜೆಗಳನ್ನಾಗಿ ರೂಪಿಸುತ್ತದೆ. ಶಿಕ್ಷಣ ಸಂಸ್ಥೆಗಳು ಇಂತಹ ಕೆಲಸ ಮಾಡಬೇಕಿದ್ದು ಕೇವಲ ಅಂಕಗಳನ್ನು ಗಳಿಸುವ ವಿದ್ಯಾರ್ಥಿಗಳನ್ನು ರೂಪಿಸುವ ಬದಲು ಸಮಾಜಕ್ಕೆ ಉತ್ತಮ ವ್ಯಕ್ತಿಯನ್ನು ತಯಾರು ಮಾಡುವ ಜವಾಬ್ದಾರಿಯನ್ನು ಶಿಕ್ಷಣ ಸಂಸ್ಥೆಗಳು ಹೊರಲಿ ಎಂದು ತಿಳಿಸಿದರು.
ಪ್ರತಿಭೆ ಹೊರೆತೆಗೆಯಲಿ: ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಧುಗಿರಿ ಶಾಸಕಿ ಅನಿತಾಕುಮಾರಸ್ವಾಮಿ, ಶಿಕ್ಷಣ ಎಂದರೆ ಉದ್ಯೋಗ ದೊರಕಿಸುವ ಸಾಧನವಲ್ಲ. ಅದು ಮನುಷ್ಯನನ್ನು ಪರಿಪೂರ್ಣವಾಗಿಸುವ ಪ್ರಕ್ರಿಯೆ ಎಂದು ಅಭಿಪ್ರಾಯ ಪಟ್ಟರು. ಪೋಷಕರು, ಶಿಕ್ಷಣ ಸಂಸ್ಥೆಗಳು ಮಕ್ಕಳನ್ನು ಪುಸ್ತಕದ ಹುಳುಗಳನ್ನಾಗಿಸಿ ಕೇವಲ ಅಂಕಗಳಿಸುವ ಯಂತ್ರಗಳನ್ನಗಿಸದೆ ಅವರಲ್ಲಿನ ಬಹುಮುಖ ಪ್ರತಿಭೆಯನ್ನು ಹೊರತೆಗೆಯುವ ಕೆಲಸ ವಾಗಬೇಕೆಂದು ಕರೆ ನೀಡಿದರು.
ವಿನಯ, ಮೌಲ್ಯಗಳನ್ನು ತುಂಬಿಸಿ ಮುಂದಿನ ಪ್ರಜೆಗಳೆನಿಸಿದ ಇಂದಿನ ಮಕ್ಕಳನ್ನು ನೈತಿಕತೆಯ ಪ್ರತಿರೂಪ ವಾಗಿಸಬೇಕಿದ್ದು ಶಿಕ್ಷಣ ಸಂಸ್ಥೆಗಳು ಎಲ್ಲಾ ಮಕ್ಕಳಿಗೂ ಸಮಾನವಾದ ಅವಕಾಶ ದೊರಕಿಸಿ ಕೊಡಬೇಕಿದೆ ಎಂದು ಕರೆ ನೀಡಿದರು.
ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಎಸ್. ಲಿಂಗೇಶ್ ಕುಮಾರ್, ಹತ್ತು ಹಲವು ಸವಾಲುಗಳ ನಡುವೆ ಆರಂಭ ಗೊಂಡ ವಿದ್ಯಾಸಂಸ್ಥೆ ಯಶಸ್ವಿ 11 ವರ್ಷಗಳನ್ನ ಪೂರೈಸಿದ್ದು ಇದಕ್ಕೆ ನಿಮ್ಮೆಲ್ಲರ ಸಹಕಾರವೇ ಕಾರಣ ಎಂದರು.
ಹಿರಿಯ ನ್ಯಾಯಾಧೀಶ ಕಿರಣ್ ಕಿಣಿ, ಶಾಸಕರಾದ ಬಾಲಕೃಷ್ಣ, ಕೆ.ರಾಜು, ಜಿ.ಪಂ ಅಧ್ಯಕ್ಷ ಮುದ್ದುರಾಜ್ ಯಾದವ್, ಸಂಸ್ಥೆಯ ಮ್ಯಾನೇಜಿಂಗ್ ಟ್ರಸ್ಟಿ ಚಿತ್ರಾ ಲಿಂಗೇಶ್ಕುಮಾರ್, ನಿಜಲಿಂಗೇಗೌಡ, ರಘುಕುಮಾರ್, ಜಾಮಿಯಾ ಮಸೀದಿಯ ಧರ್ಮಗುರು ಮೌಲಾನ ಸಿಕಂದರ್ ಅಲಿಖಾನ್, ನಗರಸಭಾ ಸದಸ್ಯ ವಾಸೀಲ್ ಅಲಿಖಾನ್, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ಪ, ಜಿ.ಪಂ ಸದಸ್ಯ ರಘುಕುಮಾರ್, ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಡಾ. ಬೆಳ್ಳೂರು ಕೃಷ್ಣ, ಟಿಎಪಿಸಿಎಂಎಸ್ ಅಧ್ಯಕ್ಷ ಜಿ. ಕೃಷ್ಣೇಗೌಡ ಮುಂತಾದವರು ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

