ಬೆಂಗಳೂರು ಗ್ರಾಮಾಂತರ

ಟಿಪ್ಪು ವಿವಿ ಸ್ಥಾಪನೆಗೊಳ್ಳಲೇಬೇಕು: ಆನೇಕಲ್ ಕೃಷ್ಣಪ್ಪ

Published On :

ದೇವನಹಳ್ಳಿ: ಕೇಂದ್ರ ಸರ್ಕಾರ ಶ್ರೀರಂಗಪಟ್ಟಣದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಟಿಪ್ಪೂ ಸುಲ್ತಾನ್ ವಿಶ್ವ ವಿದ್ಯಾಲಯ ಪ್ರಾರಂಭಿಸುವ ನಿಟ್ಟಿನಲ್ಲಿ ರಾಜ್ಯದ ಬಿಜೆಪಿ ಸರ್ಕಾರ ಟಿಪ್ಪೂವಿನ ಹೋರಾಟ ಮನಗಂಡು  ಸಂಪೂರ್ಣ ಸಹಕಾರ ನೀಡಿ ಟಿಪ್ಪೂ ಸುಲ್ತಾನರ ಹೆಸರನ್ನು ಶಾಶ್ವತವಾಗಿರುವಂತೆ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.
ದೇವನಹಳ್ಳಿ ತಾಲೂಕು ಪ್ರಜಾ ವಿಮೋಚನಾ ಚಳವಳಿ ಕಾರ್ಯಕರ್ತರು ಟಿಪ್ಪೂ ಸುಲ್ತಾನ್ ವಿಶ್ವ ವಿದ್ಯಾಲಯ ಸ್ಥಾಪನೆಗೆ ಒತ್ತಾಯಿಸಿ ಮನುವಾದಿಗಳನ್ನು ಧಿಕ್ಕರಿಸಲು ಇಲ್ಲಿನ ಟಿಪ್ಪೂ ಸರ್ಕಲ್‌ನಿಂದ ಮಿನಿ ವಿಧಾನಸೌದದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ ತಹಸೀಲ್ದಾರರಿಗೆ ಮನವಿ ನೀಡಿದರು.   
ಪಿವಿಸಿ ರಾಜ್ಯಾಧ್ಯಕ್ಷರಾದ ಆನೇಕಲ್ ಕೃಷ್ಣಪ್ಪ ಅವರು ಮಾತನಾಡಿ ಟಿಪ್ಪೂ ಸುಲ್ತಾನ್ ದೇಶ ಭಕ್ತನಾಗಿದ್ದು ಕನ್ನಡ ಪ್ರೇಮಿಯೂ ಆಗಿದ್ದ, ಕೋಮುವಾದ ಧರಿಸಿರುವವರ ಕಣ್ಣಿಗೆ ಟಿಪ್ಪೂ ಸುಲ್ತಾನ್ ರಾಜ್ಯಕ್ಕೆ ಸಲ್ಲಿಸಿರುವ ಸಾಧನೆ ಮತ್ತು ಕೊಡುಗೆಗಳನ್ನು ಮರೆತು ತಮ್ಮ ಕಾಮಾಲೆ ಕಣ್ಣುಗಳಿಂದ ರಾಜ್ಯದ ಜನತೆಯನ್ನು ದಿಕ್ಕು ತಪ್ಪಿಸುವಂಥ ಕೆಲಸ ಮಾಡುತ್ತಿದ್ದಾರೆ. ಇದು ಖಂಡನೀಯ ಎಂದರು. ಪ್ರತಿಭಟನಾ ಸಭೆಯಲ್ಲಿ ಪಿವಿಸಿ ಮುಖಂಡರಾದ ಜಿ. ವೆಂಕಟೇಶ್, ಶಿಂಗ್ರಹಳ್ಳಿ ನರಸಿಂಹಯ್ಯ, ಎಂ.ಮೂರ್ತಿ, ಮುನೀಂದ್ರ, ಜಿ.ಲಕ್ಷ್ಮಣ್, ಅಲಿಜಾನ್, ಮೆಹಬೂಬ್ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.