ಸಂಘದ ವ್ಯವಹಾರದಲ್ಲಿ ರಾಜಕೀಯ ಬೆರೆಸಬೇಡಿ
ಕ.ಪ್ರ.ವಾರ್ತೆ ರಾಮನಗರ ಜು. 22
ಜಿಲ್ಲಾ ಸರ್ಕಾರಿ ನೌಕರರ ಸಂಘದ ಬಹುಪಾಲು ನಿರ್ದೇಶಕ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ. ಕೆಲವೇ ಸ್ಥಾನಗಳಿಗೆ ನಡೆದ ಚುನಾವಣೆ ಸುಸೂತ್ರವಾಗಿ ಮುಗಿದಿದೆ. ಅಧ್ಯಕ್ಷರ ಆಯ್ಕೆ ಕೂಡ ಯಾವುದೇ ಗೊಂದಲವಿಲ್ಲದಂತೆ ನಡೆಯಲಿದೆ ಎಂದು ಸಂಘದ ಹಾಲಿ ಅಧ್ಯಕ್ಷ ವೈ.ಟಿ. ಸೋಮಶೇಖರಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ನಗರದ ಸ್ಫೂರ್ತಿ ಭವನದ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಘದ ವ್ಯವಹಾರದಲ್ಲಿ ರಾಜಕೀಯ ಬೆರೆಸಬಾರದು. ಸಂಘದ ಅಭಿವೃದ್ಧಿಗೆ ಹಾಗೂ ನೌಕರರ ಸಮಸ್ಯೆಗಳಿಗೆ ಸ್ಪಂದಿಸಬೇಕು ನೂತನ ನಿರ್ದೇಶಕರಿಗೆ ಕಿವಿಮಾತು ಹೇಳಿದರು.
ಸರ್ಕಾರಿ ನೌಕರರು ಸಮಾಜಕ್ಕೆ ಮಾದರಿಯಾಗುವಂತೆ ನಡೆದುಕೊಳ್ಳಬೇಕು. ಯಾವುದೇ ಭಿನ್ನಾಭಿಪ್ರಾಯ ತಲೆದೋರಿದರೂ ಪರಸ್ಪರ ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವಂತೆ ಅವರು ಸಲಹೆ ನೀಡಿದರು.
ಅವಿರೋಧ ಆಯ್ಕೆಯಾದವರು: ಕೃಷಿ ಇಲಾಖೆ- ಸಿ.ಚಿಕ್ಕವೀರಯ್ಯ, ರಾಮಕೃಷ್ಣರಾಜೇ ಅರಸ್, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ- ಎಸ್. ವೆಂಕಟಪ್ಪ, ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ- ರಿಜ್ವಾನ್ ಉರ್ ರೆಹಮಾನ್ ತುರಾಬಿ, ವಾಣಿಜ್ಯ ತೆರಿಗೆ ಇಲಾಖೆ- ವೆಂಕಟರಮಣಯ್ಯ, ಸಿ.ಶಿವಣ್ಣ, ಸಹಕಾರ ಸಂಘಗಳ ಇಲಾಖೆ- ಬಿ.ಪಿ.ಪ್ರೇಮಾನಂದ.
ಸಹಕಾರ ಸಂಘಗಳ ಲೆಕ್ಕಪರಿಶೋಧನಾ ಇಲಾಖೆ- ಎಸ್.ಡಿ.ಹರೀಶ, ನೀರಾವರಿ ಇಲಾಖೆ- ಟಿ.ವೆಂಕಟೇಶ್, ಜಿಪಂ ಆಡಳಿತ- ಕೆ.ರಮೇಶ್, ಅಬಕಾರಿ ಇಲಾಖೆ- ಎಸ್.ಎಂ. ಮಹೇಶ್, ಸಮಾಜ ಕಲ್ಯಾಣ, ಹಿಂದುಳಿದ ವರ್ಗ ಮತ್ತು ಅಲ್ಪ ಸಂಖ್ಯಾತರ ಇಲಾಖೆ- ಕೆ.ಸತೀಶ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ- ಡಿ.ಪ್ರಭುದಾಸ್.
ಮೀನುಗಾರಿಕೆ ಇಲಾಖೆ- ರಾಜಾನಾಯಕ್, ಅರಣ್ಯ ಇಲಾಖೆ- ಕೆ.ರಾಜು, ತೋಟಗಾರಿಕೆ ಇಲಾಖೆ- ರಾಮಚಂದ್ರ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ- ಬಿ.ಎಸ್.ಗುರುದತ್, ವಾರ್ತಾ, ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ- ಎಂ.ವಿ.ರಾಘವೇಂದ್ರ, ಯುವಜನ ಸೇವೆ ಮತ್ತು ಸಾರ್ವಜನಿಕ ಗ್ರಂಥಾಲಯ ಇಲಾಖೆ- ಎಸ್.ಎಂ.ಮಹದೇವ ಸ್ವಾಮಿ.
ಸರ್ಕಾರಿ ವಿಮಾ ಇಲಾಖೆ- ಕೆ.ನಾಗರಾಜು, ಪದವಿ ಕಾಲೇಜಿ- ಆರ್.ಧನಂಜಯ, ತಾಂತ್ರಿಕ ಶಿಕ್ಷಣ ಇಲಾಖೆ- ಸಿ.ಚನ್ನೇಗೌಡ, ಕೃಷಿ ಮಾರುಕಟ್ಟೆ- ಜಿ.ಬಿ. ಬಸವರಾಜಯ್ಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ- ಕೆ.ಅಪ್ಪಾಜಿಗೌಡ, ಮೋಟಾರು ವಾಹನ ಇಲಾಖೆ- ಎಚ್.ಹೊನ್ನಯ್ಯ, ಪೊಲೀಸ್ ಆಡಳಿತ ಮತ್ತು ಗೃಹರಕ್ಷಕ ಇಲಾಖೆ- ಸಿ.ಎಸ್. ಚಂದ್ರಶೇಖರ್.
ರೇಷ್ಮೆ ಇಲಾಖೆ- ಡಿ.ಪುಟ್ಟಸ್ವಾಮಿ, ರಾಜ್ಯ ಲೆಕ್ಕಪತ್ರ ಇಲಾಖೆ- ಟಿ.ನರಸಯ್ಯ, ಭೂಮಾಪನ ಮತ್ತು ಕಂದಾಯ ಇಲಾಖೆ- ಎಸ್.ಬಿ. ಪುಷ್ಪಲತಾ, ಎನ್ಸಿಸಿ ಮತ್ತು ಕಾರಾಗೃಹ ಇಲಾಖೆ- ಕೆ.ಪಿ.ಜಯಕುಮಾರ್, ಮುದ್ರಾಂಕಗಳ ನೋಂದಣಿ ಮತ್ತು ಸಣ್ಣ ಉಳಿತಾಯ ಇಲಾಖೆ- ಆರ್. ವಿಜಯ್ಕುಮಾರ್, ಖಜಾನೆ ಇಲಾಖೆ- ಜಿ.ಬಿ.ರಾಜೇಗೌಡ.
ಕಾರ್ಮಿಕ ಇಲಾಖೆಯಿಂದ ದೊಡ್ಡಶಿವಲಿಂಗಪ್ಪ, ನಗರಯೋಜನೆ ಮತ್ತುನಗರಾಭಿವೃದ್ಧಿ ಇಲಾಖೆ- ಎನ್.ತ್ಯಾಗರಾಜು, ಉದ್ಯೋಗ ಮತ್ತು ತರಬೇತಿ ಇಲಾಖೆ- ಎ.ಎಸ್. ವೈಕುಂಠಯ್ಯ, ಮಾಪನಶಾಸ್ತ್ರ ಇಲಾಖೆ- ಟಿ.ಎ.ನಾಗರಾಜ್, ನ್ಯಾಯಾಂಗ ಇಲಾಖೆ- ಶಿವಣ್ಣ, ಎಚ್.ಎಸ್.ಈಶ್ವರ್, ಶಿವಣ್ಣ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆ- ಹೊನ್ನಗಿರಿಗೌಡ.
ಲೋಕಾಯುಕ್ತ ಇಲಾಖೆ- ಸಿ.ಬಸವರಾಜು, ಔಷಧ ನಿಯಂತ್ರಣ ಇಲಾಖೆ- ಎಂ.ವಿ. ಚಂದ್ರಶೇಖರಯ್ಯ, ಪಶುಸಂಘೋಪನಾ ಇಲಾಖೆ- ಎಚ್.ಕೃಷ್ಣಪ್ಪ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ- ಜಿ.ಎನ್. ಹನುಮಂತರಾಯ, ಶಿವಕುಮಾರ್, ಟಿ. ಕೃಷ್ಣೇಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಚುನಾಯಿತರ ವಿವರ: ಕಂದಾಯ ಇಲಾಖೆ- ರಾಜಶೇಖರ್, ವೆಂಕಟಮುತ್ತಯ್ಯ, ರಮೇಶ್, ಜಿಪಂ ಮತ್ತು ಲೋಕೋಪಯೋಗಿ ಇಲಾಖೆ- ಬೈರಪ್ಪ, ಶ್ರೀನಿವಾಸ್, ಜಿಲ್ಲಾಸ್ಪತ್ರೆ- ಸುಬ್ರಮಣ್ಯ, ಎಚ್.ಪಿ.ಜಯರಾಮು, ಜಿಲ್ಲಾ ಆಯುಷ್ ಇಲಾಖೆ- ಮಲ್ಲಿಕಾರ್ಜುನಯ್ಯ, ಪ್ರೌಢ ಶಿಕ್ಷಣ ಇಲಾಖೆ- ಆರ್.ಕೆ. ಬೈರಲಿಂಗಯ್ಯ, ಎಂ.ಎನ್.ದೇವರಾಜು, ಪದವಿ ಪೂರ್ವ ಮತ್ತು ಕಾಲೇಜು ಶಿಕ್ಷಣ ಇಲಾಖೆ- ಎಸ್.ಮಂಜುನಾಥ್, ಪ್ರಾಥಮಿಕ ಶಿಕ್ಷಣ ಇಲಾಖೆ- ಎಂ.ಕಾಂತರಾಜು, ಎ.ಎಸ್.ಬಸವೇಗೌಡ, ಹನುಮಯ್ಯ, ಎಸ್. ಜಗದೀಶ್ ಚುನಾಯಿತರಾಗಿದ್ದಾರೆ.
27 ಮಂದಿ ಅವಿರೋಧ ಆಯ್ಕೆ
ದೇವನಹಳ್ಳಿ: ತಾಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ 2013- 2018ನೇ ಸಾಲಿಗೆ ಎಲ್ಲ ಸರ್ಕಾರಿ ಇಲಾಖೆಗಳಿಂದ ಒಟ್ಟು 31 ಸ್ಥಾನಗಳಿದ್ದು, ಅವರಲ್ಲಿ 27 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಉಳಿದ ನಾಲ್ಕು ಸ್ಥಾನಗಳಲ್ಲಿ ಒಂದು ಪ್ರೌಢಶಾಲಾ ಶಿಕ್ಷಕರ ವಿಭಾಗದಿಂದ ದೇವನಹಳ್ಳಿ ಜಿಜೆಸಿ ಕಾಲೇಜಿನ ಬಸವರಾಜು ಕೆಂಚನಗೌಡ ಚುನಾಯಿತರಾಗಿದ್ದು, ಪ್ರಾಥಮಿಕ ಶಾಲಾ ವಿಭಾಗದ ಮೂರು ಸ್ಥಾನಗಳಿಗೆ ಒಟ್ಟು 11 ಮಂದಿ ಸ್ಪರ್ಧಿಸಿದ್ದು, ಸೋಮವಾರ ನಡೆದ ಚುನಾವಣೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯ ಎಂ.ಎಂ. ರಾಘವೇಂದ್ರ (380 ಮತಗಳು), ಶೆಟ್ಟೇರಹಳ್ಳಿ ಗೋವಿಂದರಾಜು (246 ಮತಗಳು) ಹಾಗೂ ಚನ್ನರಾಯಪಟ್ಟಣದ ಆಂಜಿನಪ್ಪ (202 ಮತಗಳು) ಚುನಾಯಿತರಾಗಿದ್ದಾರೆ. ಒಟ್ಟು 743 ಮಂದಿ ಮತದಾರರಿದ್ದು, ಅವರಲ್ಲಿ 669 ಮಂದಿ ತಮ್ಮ ಮತ ಚಲಾಯಿಸಿದ್ದಾರೆ.
ಗುರುಭವನದಲ್ಲಿ ಮತದಾನ
ನೆಲಮಂಗಲ: ತಾಲೂಕು ಸರ್ಕಾರಿ ನೌಕರರ ಸಂಘದ ವಿವಿಧ ಇಲಾಖೆಗಳ ನಿರ್ದೇಶಕ ಚುನಾವಣೆ ಸೋಮವಾರ ಪಟ್ಟಣದ ಗುರುಭವನದಲ್ಲಿ ಮತದಾನ ನಡೆಯಿತು. ಸರ್ಕಾರಿ ಕಚೇರಿಗಳ 28 ಇಲಾಖೆಗಳ ಪೈಕಿ 20 ಇಲಾಖೆಗಳಲ್ಲಿ ಅವಿರೋಧವಾಗಿ ಈಗಾಗಲೇ ನಿರ್ದೇಶಕರನ್ನು ಆಯ್ಕೆಗೊಳಿಸಿದ್ದಾರೆ. ಉಳಿದ 8 ಇಲಾಖೆಗಳಲ್ಲಿ ಒಮ್ಮತ ಬಾರದ ಕಾರಣ ನಿರ್ದೇಶಕರ ಆಯ್ಕೆಗಾಗಿ ಚುನಾವಣೆ ನಡೆಯಿತು. ಚುನಾವಣೆ ಮತದಾನ ಮಾಡಲು ಇಲಾಖೆಗಳ ನೌಕರರು, ಸಿಬ್ಬಂದಿ ಮತದಾನ ಕೇಂದ್ರಕ್ಕೆ ತೆರಳಿ ಸರತಿ ಸಾಲಿನಲ್ಲಿ ಮತದಾನ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

