ಕಲಿಕೆಯೇ ಮಕ್ಕಳ ಮುಂದಿನ ಜೀವನದ ಹಾದಿ: ಬಸಪ್ಪ
ವಿಜಯಪುರ: ಶಿಕ್ಷಣದೊಂದಿಗೆ ಮಾನವೀಯ ಮೌಲ್ಯಗಳನ್ನು ಕಲಿಯುವುದರಿಂದ ಮುಂದಿನ ಹಾದಿ ಸುಗಮವಾಗುತ್ತದೆ ಎಂದು ಹಿರಿಯ ಮಾರ್ಗದರ್ಶಕ ಸಿ.ಬಸಪ್ಪ ತಿಳಿಸಿದರು.
ಅವರು ಪಟ್ಟಣದ ಮಹಂತಿ ಮಠ ಧರ್ಮ ಸಂಸ್ಥೆಯಲ್ಲಿ ನಡೆದ 2013ನೇ ಸಾಲಿನ ವಿದ್ಯಾರ್ಥಿ ವೇತನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಕಲಿಕೆಗೆ ಹೆಚ್ಚಿನ ಒತ್ತು ನೀಡಿ ಮುಂದಿನ ದಿನಗಳಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದರು. ಸಂಸ್ಥೆಯ ಅಧ್ಯಕ್ಷ ಶೀಲಾ ಸುರೇಶ್ ಮಾತನಾಡುತ್ತಾ ವಿದ್ಯಾರ್ಥಿ ವೇತನವನ್ನು ವಿದ್ಯಾರ್ಜನೆಗೆ ಸದುಪಯೋಗಪಡಿಸಿಕೊಳ್ಳಬೇಕು ಎಂದರು. ಸಂಸ್ಥೆಯ ವತಿಯಿಂದ 40 ಮಂದಿ ವಿದ್ಯಾರ್ಥಿಗಳಿಗೆ ವೇತನ ನೀಡಲಾಯಿತು. ಎಂ.ಎಸ್.ಸಿ ವಿದ್ಯಾರ್ಥಿನಿ ರಮ್ಯ ಮಕ್ಕಳ ವತಿಯಿಂದ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸಂಸ್ಥೆಯ ಪದಾಧಿಕಾರಿಗಳಾದ ಕಾರ್ಯದರ್ಶಿ ವಿಶ್ವನಾಥ್, ಖಜಾಂಜಿ ರಾಜಶೇಖರ್, ನಿರ್ದೇಶಕರಾದ ಸ್ವರ್ಣಗೌರಿ, ಆನಂದಪ್ಪ, ರಮೇಶ್, ಮಹೇಶ್, ಎಂ. ನಟರಾಜ್ ಪೋಷಕರು ಭಾಗವಹಿಸಿದ್ದರು.
ಜಾನುವಾರು ವಿಮೆ ಸೌಲಭ್ಯ ಪ್ರಾರಂಭ
ಮಾಗಡಿ: ತಾಲೂಕಿನಾದ್ಯಂತ ಇರುವ ರೈತರ ಜಾನುವಾರುಗಳಿಗೆ ವಿಮಾ ಭದ್ರತೆ ಕಾರ್ಯಕ್ರಮ ಪ್ರಾರಂಭಗೊಂಡಿದೆ ಎಂದು ಪಶುಪಾಲನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ. ರಾಜಶೇಖರ್ ತಿಳಿಸಿದರು. ರೈತರು ತಮ್ಮ ನಾಟಿ, ಮಿಶ್ರತಳಿ ಹಸುಗಳು, ಎಮ್ಮೆಗಳಿಗೆ ಬೆಲೆಗೆ ಅನುಗುಣವಾಗಿ ಶೇ. 50 ರಿಯಾಯಿತಿ ದರದಲ್ಲಿ ವಿಮೆ ಸೌಲಭ್ಯ ಆರಂಭಿಸಲಾಗಿದ್ದು, ಪ್ರತಿ ರಾಸುಗೆ ಉದಾಹರಣೆಗೆ 10 ಸಾವಿರಕ್ಕೆ ರು. 203ನಂತೆ ವಿಮೆ ಕಟ್ಟಿಸಿಕೊಳ್ಳಲಾಗುತ್ತಿದೆ. ರೈತರು ವಿಮೆ ಹಣ ಪಾವತಿಸಿ ವಿಮೆ ಸೌಲತ್ತು ಪಡೆದುಕೊಳ್ಳುವಂತೆ ತಿಳಿಸಿದ್ದಾರೆ. 1, 2 ಮತ್ತು 3 ವರ್ಷಗಳಿಗೂ ವಿಮೆ ಮಾಡಿಸಬಹುದಾಗಿರುತ್ತದೆ ಎಂದರು.
ಇಂದು ಧಾರ್ಮಿಕ ಚಿಂತನೆ ಸಂಕಿರಣ
ವಿಜಯಪುರ: ಇಲ್ಲಿನ ಪುರಾತನ ದೇವಾಲಯಗಳಲ್ಲಿ ಒಂದಾದ ಸರೋವರ ಗಣಪತಿ ದೇವಾಲಯದಲ್ಲಿ ಗುರು ಪೌರ್ಣಮಿ ಪ್ರಯುಕ್ತ ಪತಂಜಲಿ ಯೋಗಾಸನ ಸಮಿತಿ ವತಿಯಿಂದ ಧಾರ್ಮಿಕ ಚಿಂತನೆಗಳ ಅಗತ್ಯತೆ ಎಂಬ ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ. ಕಾರ್ಯಕ್ರಮವು ಸೋಮವಾರ ನಡೆಯಲಿದ್ದು ಕೇಂದ್ರ ಬಿಂದುವಾಗಿ ಸೂಲಿಬೆಲೆ ಚಕ್ರವರ್ತಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಸಾಕಷ್ಟು ಸಂಘ ಸಂಸ್ಥೆಗಳು ಪಾಲ್ಗೊಳ್ಳಲಿವೆ ಎಂದು ಸಮಿತಿಯ ಸಂಚಾಲಕಿ ಭಾರತಿ ಪ್ರಭುದೇವ್ ತಿಳಿಸಿದ್ದಾರೆ.
ರಸ್ತೆ ಅಪಘಾತದಲ್ಲಿ ಬಾಲಕಿ ಸಾವು
ಮಾಗಡಿ: ರಸ್ತೆ ಅಪಘಾತದಲ್ಲಿ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ತಾಲೂಕಿನ ಚಂದೂರಾಯನಹಳ್ಳಿ ಬಳಿ ಭಾನುವಾರ ನಡೆದಿದೆ. ಚಂದೂರಾಯನಹಳ್ಳಿಯ ವೆಂಕಟೇಶ್ ಮತ್ತು ಜಯಮ್ಮ ಅವರ ಪುತ್ರಿ ನಯನ (12) ಮೃತಪಟ್ಟ ದುರ್ದೈವಿ. ಬಾಲಕಿ ನಯನ ರಸ್ತೆ ದಾಟುತ್ತಿದ್ದಾಗ ಬೈಕ್ ಹೊಡೆದ ಪರಿಣಾಮ ಮೃತಪಟ್ಟಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ವ್ಯಕ್ತಿ ಮೇಲೆ ಹಲ್ಲೆ
ಬೆಂಗಳೂರು: ಔಷಧ ಪೂರೈಕೆದಾರ ಮೇಲೆ ಹಲ್ಲೆ ನಡೆಸಿ ಹಣ ದೋಚಿದ ಘಟನೆ ತಿಲಕ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಶ್ರೀನಗರದ ಸಂತೋಷ್‌ಕುಮಾರ್ ಹಲ್ಲೆಗೊಳಗಾದವರು. ಜಯನಗರ 9ನೇ ಮುಖ್ಯರಸ್ತೆಯಲ್ಲಿ ಶನಿವಾರ ರಾತ್ರಿ ಘಟನೆ ನಡೆದಿದೆ. ಸಂತೋಷ್ ಅವರು ಔಷಧ ಪೂರೈಕೆದಾರರಾಗಿ (ಮೆಡಿಕಲ್ ರೆಪ್ರೆಸೆಂಟೆಟಿವ್)ಕೆಲಸ ನಿರ್ವಗಿಸುತ್ತಿದ್ದರು. ರಾತ್ರಿ ಜಯನಗರದ ಅಂಗಡಿಯೊಂದಕ್ಕೆ ಔಷಧ ನೀಡಿ ದ್ವಿಚಕ್ರ ವಾಹನದಲ್ಲಿ ಹಿಂತಿರುಗುತ್ತಿದ್ದಾಗ ಎರಡು ದ್ವಿಚಕ್ರ ವಾಹನದಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಅಡ್ಡಗಟ್ಟಿ, ಹಲ್ಲೆ ಮಾಡಿ ಈ ಕೃತ್ಯವೆಸಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

