'ಜಾನಪದ ಮಾನವೀಯತೆ ನೆಲೆಗಟ್ಟಿನ ಮೇಲೆ ರಚಿತ ಸಾಹಿತ್ಯ'
ಚನ್ನಪಟ್ಟಣ: ಬಾಯಿಂದ ಬಾಯಿಗೆ ಹರಡುವ ಮೂಲಕ ಜನಪ್ರಿಯವಾಗಿರುವ ಜಾನಪದ ಕಲೆ ಸಮಾಜದ ಶೋಷಿತರು ಮತ್ತು ನೊಂದವರ ದನಿಯಾಗಿದ್ದು ಜಾನಪದ ಸಾಹಿತ್ಯ ಮಾನವೀಯತೆಯ ನೆಲೆಗಟ್ಟಿನ ಮೇಲೆ ರಚಿತವಾದ ಸಾಹಿತ್ಯ ಎಂದು ಉಪನ್ಯಾಸಕ ಸುರೇಶ್ ಗೌತಮ್ ಅಭಿಪ್ರಾಯಪಟ್ಟರು.
ಪಟ್ಟಣದ ಗಾಂಧಿಸ್ಮಾರಕ ಭವನದ ಆವರಣದಲ್ಲಿ ಜಾಗೃತಿ ಸಾಮಾಜಿಕ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಟ್ರಸ್ಟ್ ವತಿಯಿಂದ ಹಮ್ಮಿಕೊಂಡಿದ್ದ ಜಾನಪದ ಕಲಾಮೇಳದಲ್ಲಿ ಮಾತನಾಡಿ, ಜನಪದ ಸಂಸ್ಕೃತಿಯು ಮಾನವನ ಜೀವನದಲ್ಲಿ ಮಾನವಿಯ ಮೌಲ್ಯಗಳನ್ನು ಕಟ್ಟಿಕೊಡುತ್ತದೆ ಎಂದರು.
ಜನಪದ ಎಲ್ಲಾ ಆಧುನಿಕ ಜ್ಞಾನ ಶಾಖೆಗಳಿಗೂ ತಾಯಿ ಬೇರಾಗಿದೆ. ಆ ಮೂಲಕ ಒಡೆದ ಮನಸ್ಸುಗಳನ್ನು ಪುನರ್ ಕಟ್ಟಿ ಮಾನವಿಯ ಸಮಾಜ ನಿರ್ಮಿಸುತ್ತದೆ ಎಂದರು.
ಕಾರ್ಯಕ್ರಮದ ಉದ್ಘಾಟಿಸಿದ ಡಾ.ಮಲ್ಲೇಶ್ ದ್ಯಾವಪಟ್ಟಣ, ಜನಪದ ಸಂಸ್ಕೃತಿಯನ್ನು ರಕ್ಷಿಸಿಸುವ ಮೂಲಕ ಮುಂದಿನ ಪೀಳಿಗೆಗೆ ಈ ಸಾಹಿತ್ಯ ದೊರಕುವಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದ್ದು ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕೆಂದು ತಿಳಿಸಿದರು.
ಪ್ರೋತ್ಸಾಹ ಅಗತ್ಯ: ಜನಪದ ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹದ ಅಗತ್ಯತೆ ಇದ್ದು ಈ ಬಗ್ಗೆ ಸರ್ಕಾರ ಹೆಚ್ಚಿನ ಆಸಕ್ತಿ ತಳೆಯಬೇಕಿದೆ. ಜಾನಪದ ಅಕಾಡಮಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಜಾನಪದ ಕಲಾವಿದರನ್ನು ಉತ್ತೇಜಿಸುವ ಕಾರ್ಯಕ್ಕೆ ಸರ್ಕಾರ ಮುಂದಾಗಬೇಕೆಂದರು.
ಕಾರ್ಯಕ್ರಮದಲ್ಲಿ ಬಿ.ಪಿ. ಸುರೇಶ್, ಅಮ್ಮರಾಮಚಂದ್ರು, ದಲಿತ ಮುಖಂಡ ಸಿದ್ದರಾಮಯ್ಯ, ಬ್ಯಾಡರಹಳ್ಳಿ ಶಿವಕುಮಾರ್, ಚೇತನ್ಕುಮಾರ್, ವಸಂತಕುಮಾರಿ, ರವಿ.ಹೆಚ್ ಮುಕುಂದರನ್ನು ಸನ್ಮಾನಿಸ ಲಾಯಿತು.
ಟ್ರಸ್ಟ್ನ ಸಂಸ್ಥಾಪಕ ಕಾರ್ಯದರ್ಶಿ ಹೊಟ್ಟಿಗನಹೊಸಹಳ್ಳಿ ಎಚ್.ಡಿ. ಪುಟ್ಟಸ್ವಾಮಿ ಪ್ರಸ್ಥಾವಿಕವಾಗಿ ಮಾತನಾಡಿದರು. ಸಮಾಜದಲ್ಲಿ ಜಡ್ಡು ಗಟ್ಟಿರುವ ಸಮಸ್ಯೆಗಳನ್ನು ನಿವಾರಣೆ ಮಾಡಲು ಸಂಸ್ಥೆ ವತಿಯಿಂದ ಜಾಗೃತಿ ಶಿಬಿರಗಳನ್ನು ಹಮ್ಮಿಕೊಳ್ಳಲಾಗುವುದು. ಜೊತೆಗೆ ಜನಪದ ಸಂಸ್ಕೃತಿಯನ್ನು ಉಳಿಸಲು ಶ್ರಮಿಸುವುದಾಗಿ ತಿಳಿಸಿದರು.
ನಂತರ ಹೊಟ್ಟಿಗನಹೊಸಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ 1ನೇ ತರಗತಿಯಿಂದ 7ನೇ ತರಗತಿಯ ಎಲ್ಲಾ ವಿದ್ಯಾರ್ಥಿನಿಯರಿಗೆ ನೋಟ್ ಬುಕ್ ವಿತರಿಸಲಾಯಿತು.
ಕಾರ್ಯಕ್ರಮಕ್ಕೆ ಶಾಸಕ ಸಿ.ಪಿ.ಯೋಗೇಶ್ವರ್ ಮತ್ತು ಹಾಪ್ಕಾಮ್ಸ್ ಮಾಜಿ ನಿರ್ದೇಶಕರಾದ ಎಸ್.ಸಿ. ಶೇಖರ್ ಆಗಮಿಸಿ ಶುಭ ಹಾರೈಸಿದರು.
ಕೆ.ಬಸವರಾಜ್, ಪತ್ರಕರ್ತ ಲಕ್ಷ್ಮಿಪತಿ, ಕುಮಾರ್ ಬುಕ್ಕಸಾಗರ, ಡಾ. ಅಕ್ರಂ ಪಾಷಾ, ಗಾಯಕ ಹೊನ್ನಾಗನಹಳ್ಳಿ ಸಿದ್ದರಾಜು, ಪಾಪಣ್ಣ, ಶಶಿಕುಮಾರ್ ದೇವರ ಹೊಸಹಳ್ಳಿ, ಅಪ್ಪಗೆರೆ ಮಹೇಶ್ ಮೌರ್ಯ, ಸಿದ್ದನಹಳ್ಳಿ ಸಿದ್ದೇಗೌಡ, ವಂದನಾರ್ಪಣೆ ಬಿ.ಪಿ. ಸುರೇಶ್, ಬ್ಯಾಡರಹಳ್ಳಿ ಶಿವಕುಮಾರ್ ಉಪಸ್ಥಿತರಿದ್ದರು.
ಸರ್ವೋತ್ತಮ್ ಚಂದ್ರುಸಾಕ್ಯವಂಶಿ, ಪುಟ್ಟರಾಜು, ಸಿದ್ದರಾಮ್, ಅಪ್ಪಗೆರೆ ಸತೀಶ್, ಮಳೂರ್ ಮಹದೇವ್, ಚಕ್ಕೆರೆ ಲೋಕೇಶ್ ಗೀತ ಗಾಯನ ನಡೆಸಿಕೊಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

