ತಾವರೆಕೆರೆಯಲ್ಲಿ ಪಟಾಲಮ್ಮದೇವಿ ವೈಭವದ ದೀಪೋತ್ಸವ
ಕ.ಪ್ರ.ವಾರ್ತೆ ಸೂಲಿಬೆಲೆ ಜೂ. 9-
ಇಲ್ಲಿಗೆ ಸಮೀಪದ ನಂದಗುಡಿ ಹೋಬಳಿಯ ತಾವರೆಕೆರೆ ಗ್ರಾಮದಲ್ಲಿ ನೆಲೆಸಿರುವ ಪಟಾಲಮ್ಮ ದೇವಿಗೆ ಹೆತ್ತಕ್ಕಿ ಗ್ರಾಮಸ್ಥರಿಂದ ಅದ್ಧೂರಿಯಾಗಿ ದೀಪೋತ್ಸವ ಕಾರ್ಯಕ್ರಮ ನಡೆಸಲಾಯಿತು.
ಪುರಾಣ ಪ್ರಸಿದ್ಧಿಯನ್ನು ಹೊಂದಿರುವ ಪಟಾಲಮ್ಮದೇವಿ ಅನೇಕ ದಂತ ಕಥೆಗಳನ್ನು ಹೊಂದಿ ತಾವರೆಕೆರೆ ಗ್ರಾಮದ ಗ್ರಾಮ ದೇವತೆಯಾಗಿ ನೆಲೆಸಿದ್ದಾಳೆ. ಈ ದೇವಿಯ ಬಗ್ಗೆ ಭಕ್ತರ ನಂಬಿಕೆ ಅಪಾರವಾಗಿದೆ. ಈ ದೇವತೆಗೆ ಹರಕೆ ಹೊತ್ತಿದ್ದ ಹೆತ್ತಕ್ಕಿ ಗ್ರಾಮಸ್ಥರು ಸಾಲು ದೀಪಗಳನ್ನು ಹೊತ್ತು ಹರಕೆ ತೀರಿಸಿದರು. ದೀಪಗಳ ಮಹೋತ್ಸವ ಪ್ರಯುಕ್ತ ಅಮ್ಮನವರಿಗೆ ದೀಪಾದಾರತಿ ಬೆಳಗುವ ಮಹೋತ್ಸವ, ಪೂಜಾ ಕಾರ್ಯಕ್ರಮ, ವಿಶೇಷ ಹೂವಿನ ಅಲಂಕಾರ, ಹೋಮ, ಹವನ ಇತ್ಯಾದಿ ಕಾರ್ಯಕ್ರಮಗಳು ಗಮನ ಸೆಳೆದವು. ಇದಕ್ಕೂ ಮುನ್ನ ದೇಗುಲದ ಅರ್ಚಕರಾದ ನಾಗರಾಜ್ ಮತ್ತು ಆಶ್ವತ್ಥಪ್ಪ ಕತ್ತಿಯಿಂದ ಕುಂಬಳಕಾಯಿ ಕತ್ತರಿಸುವ ಮೂಲಕ ದೀಪಾದಾರತಿ ಮಹೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು ತಾಯಿ ಸನ್ನಿಧಿಗೆ ಬಂದು ಮಡಲಕ್ಕಿ, ಸೀರೆ ಕುಪ್ಪಸ ನೀಡುವ ಮೂಲಕ ತಮ್ಮ ಹರಕೆ ತೀರಿಸಿದರು. ದೀಪಗಳನ್ನು ಹೊತ್ತ ಮಹಿಳೆಯರು ಸಾಲು ಗ್ರಾಮದೆಲ್ಲಡೆ ಮೆರವಣಿಗೆ ಮೂಲಕ ಸಾಗಿ ದೇಗುಲದ ಮುಂಭಾಗದಲ್ಲಿ ತೊಡಿದ್ದ ಅಗ್ನಿಕುಂಡದಲ್ಲಿ ನಡೆದು ಭಕ್ತಿಯನ್ನು ಮೆರೆದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

