ಸಂಯೋಜನೆಯೇ ಸಮಸ್ಯೆ; ಇಂದಿನಿಂದ ಬಿಎಡ್ ಪರೀಕ್ಷೆ
ಕ.ಪ್ರ.ವಾರ್ತೆ ಬೆಂಗಳೂರು ಜೂ. 9
ಬಿಎಡ್ ಕಾಲೇಜುಗಳಿಗೆ ಸಂಯೋಜನೆ ನೀಡುವ ವಿಚಾರ ಇತ್ಯರ್ಥಗೊಳ್ಳದ್ದರಿಂದ ವಿವಾದಕ್ಕೆ ಕಾರಣವಾಗಿರುವ ಬಿಎಡ್ ಕಾಲೇಜುಗಳ ಪರೀಕ್ಷೆ ಸೋಮವಾರದಿಂದ (ಜೂ.10) ಆರಂಭವಾಗಲಿದೆ.
ನಗರದ 21 ಪರೀಕ್ಷಾ ಕೇಂದ್ರಗಳಲ್ಲಿ ಜೂ.10ರಿಂದ ಪರೀಕ್ಷೆ ಪ್ರಾರಂಭವಾಗಿ ಜೂ.18ರವರೆಗೆ ನಡೆಯಲಿದೆ. ದರ್ಜೆ 3 ಮತ್ತು 4 ಹಾಗೂ ತರಗತಿಗಳೇ ನಡೆಯದಿರುವ ಒಟ್ಟು 47 ಬಿಎಡ್ ಕಾಲೇಜುಗಳ ಸಂಯೋಜನೆ ನೀಡುವ ವಿಚಾರ ಸರ್ಕಾರದ ಕೈಯಲ್ಲಿರುವಾಗಲೇ ಬೆಂಗಳೂರು ವಿವಿ ಪರೀಕ್ಷೆ ನಡೆಸಲು ಅನುಮತಿ ನೀಡಿದೆ.
ಸೋಮವಾರ ವಿದ್ಯಾರ್ಥಿಗಳು ಪರೀಕ್ಷೆ ಬರೆದ ನಂತರ ಉನ್ನತ ಶಿಕ್ಷಣ ಇಲಾಖೆ 47 ಕಾಲೇಜುಗಳ ಸಂಯೋಜನೆ ರದ್ದು ಮಾಡಿದರೆ ವಿದ್ಯಾರ್ಥಿಗಳ ಪರಿಸ್ಥಿತಿ ತ್ರಿಶಂಕಿಗೆ ಸಿಲುಕಲಿದೆ. ಕೊನೆ ಕ್ಷಣದಲ್ಲಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಂದ ಯಾವುದೇ ಪರೀಕ್ಷಾ ಶುಲ್ಕ ಪಡೆಯದೇ ಪ್ರವೇಶ ಪತ್ರ ಕಲ್ಪಿಸಲು ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಅಸ್ಸಾಂ, ಓಡಿಸ್ಸಾದಿಂದ ಅಭ್ಯರ್ಥಿಗಳು ಬಂದು ಲಾಡ್ಜ್‌ಗಳಲ್ಲಿ ಉಳಿದುಕೊಂಡು ಸೋಮವಾರ ಪರೀಕ್ಷೆ ಬರೆಯಲು ಸಜ್ಜಾಗುತ್ತಿದ್ದಾರೆ.
ನಗರದಲ್ಲಿರುವ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಹೊರ ರಾಜ್ಯದ ವಿದ್ಯಾರ್ಥಿಯೊಬ್ಬ ಭಾನುವಾರ ಬಂದು ಕಾಲೇಜಿನಲ್ಲಿ ಹಾಜರಾತಿ ಪುಸ್ತಕ್ಕೆ ಸಹಿ ಹಾಕಿ ಪರೀಕ್ಷೆ ಬರೆಯಲು ಪ್ರವೇಶ ಪತ್ರ ತೆಗೆದುಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಸಿಎಂ ಜತೆಗೆ ಚರ್ಚೆ: ಬಿಎಡ್ ವಿಚಾರದ ಬಗ್ಗೆ ಭಾನುವಾರ ಮಧ್ಯಾಹ್ನ 12 ಸುಮಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣದಲ್ಲಿ ಉನ್ನತ ಶಿಕ್ಷಣ ಸಚಿವ ಆರ್.ವಿ. ದೇಶಪಾಂಡೆ ಅವರೊಂದಿಗೆ ಚೆರ್ಚೆ ನಡೆಸಿದ್ದಾರೆ. ನಂತರ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪರೀಕ್ಷೆ ನಡೆಸಲು ಅವಕಾಶ ನೀಡಿ ಎಂದು ಸೂಚನೆ ನೀಡಿದ್ದಾರೆ. ಈ ಸಭೆಯಲ್ಲಿ ಬೆಂಗಳೂರು ವಿವಿ ಕುಲಪತಿಗಳೂ ಇದ್ದರು. ಇದೇ ಮೊದಲ ಬಾರಿಗೆ ಬಿಎಡ್ ವಿಚಾರ ಮುಖ್ಯಮಂತ್ರಿಗಳವರೆಗೂ ಹೋಗಿದೆ ಎನ್ನುತ್ತಾರೆ ರಾಜ್ಯ ಅನುದಾನರಹಿತ ಬಿಎಡ್ ಕಾಲೇಜು ಪ್ರಾಂಶುಪಾಲರು ಹಾಗೂ ಅಧ್ಯಾಪಕರ ಒಕ್ಕೂಟದ ಕಾರ್ಯದರ್ಶಿ ಜೆ.ಎನ್. ನಟರಾಜ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

