ಸುದ್ದಿ ಸಂಕ್ಷೇಪ
ದಲಿತ ಮುಖಂಡರ ಪ್ರತಿಭಟನೆ: ಸಭೆ ರದ್ದು
ರಾಮನಗರ: ತಾಲೂಕಿನ ದೊಡ್ಡಗಂಗವಾಡಿ ಗ್ರಾಮದಲ್ಲಿ ಜೂ.18ರಂದು ನಡೆಯಬೇಕಿದ್ದ ಗ್ರಾಮ ಸಭೆಯು ದಲಿತ ಮುಖಂಡರ ಪ್ರತಿಭಟನೆ ಹಿನ್ನೆಲೆಯಲ್ಲಿ ರದ್ದುಗೊಂಡಿದೆ. ರೈತರ, ದಲಿತರ, ಶೋಷಿತರ ಸಮಸ್ಯೆಗಳನ್ನು ಆಲಿಸಿ, ಚರ್ಚಿಸುವ ಮೂಲಕ ಪರಿಹಾರ ಕಂಡುಹಿಡಿಯುವುದು ಗ್ರಾಮ ಸಭೆಯ ಉದ್ದೇಶವಾಗಿದೆ. ಸಭೆ ನಡೆಯುವ 15 ದಿನ ಮುಂಚಿತವಾಗಿ ನೋಟಿಸ್ ನೀಡಬೇಕು. ಆದರೆ ಜೂ.18ರಂದು ನಡೆಯಬೇಕಿದ್ದ ಸಭೆಗೆ ಗ್ರಾಮದ ದಲಿತ ಕೇರಿಗಳಲ್ಲಿ ಡಂಗುರ ಸಾರಿಸಿಲ್ಲ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಸಭೆ ನಡೆಯಲು ಗ್ರಾಮ ಕನಿಷ್ಠ 100 ಮಂದಿ ಗ್ರಾಮಸ್ಥರಿರಬೇಕು. ಆದರೆ ಕೇವಲ 30-40 ಜನರಷ್ಟೇ ಇದ್ದರು. ಅಲ್ಲದೆ ಆಹ್ವಾನ ಪತ್ರಿಕೆಯಲ್ಲಿದ್ದ ಶಾಸಕರು, ತಾ.ಪಂ. ಅಧ್ಯಕ್ಷ, ಜಿ.ಪಂ. ಅಧ್ಯಕ್ಷರಾಗಲೀ ಸಭೆಯಲ್ಲಿ ಹಾಜರಿರಲಿಲ್ಲ. ಯಾವೊಬ್ಬ ತಾಲೂಕು ಮಟ್ಟದ ಅಧಿಕಾರಿಯೂ ಆಗಮಿಸಿರಲಿಲ್ಲ ಆದ್ದರಿಂದ ಸಭೆಯನ್ನು ಮುಂದೂಡುವಂತೆ ಪಟ್ಟುಹಿಡಿಯಲಾಯಿತು. ಕಡೆಗೆ, ನೋಡಲ್ ಅಧಿಕಾರಿಯಾದ ಪುಟ್ಟಲಿಂಗಯ್ಯ ಅವರು ಸಭೆಯನ್ನು ಮಂದೂಡಿಕೆ ಘೋಷಿಸಿದರು. ಪ್ರತಿಭಟನೆಯಲ್ಲಿ ಸುಂದರೇಶ್, ಗುರುಪ್ರಸಾದ, ಉಮೇಶ, ಸುರೇಂದ್ರ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ನಾಳೆ ವಿದ್ಯುತ್ ವ್ಯತ್ಯಯ
ರಾಮನಗರ: ತಾಲೂಕಿನ ಮೆಳೇಹಳ್ಳಿ ವಿದ್ಯುತ್ ವಿತರಣಾ ಉಪಕೇಂದ್ರದ ನಿರ್ವಹಣಾ ಕಾರ್ಯ ಇರುವುದರಿಂದ ಜೂ.21ರ ರಂದು ಮಧ್ಯಾಹ್ನ 2ರಿಂದ ಸಂಜೆ 6ರವರೆಗೆ ಉಪಕೇಂದ್ರ ವ್ಯಾಪ್ತಿಯ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಇರುವುದಿಲ್ಲ.
ವಿದ್ಯುತ್ ನಿಲುಗಡೆ ಗ್ರಾಮಗಳು: ರಾಮನಗರ, ಸೇನಾಪತಿ ವೈಟ್ಲೆ, ಜನಪದ ಲೋಕ, ಹುಣಸನಹಳ್ಳಿ, ಬಸವನಪುರ, ಬಿಳಗುಂಬ. ಕೆಂಪನಹಳ್ಳಿ, ನಾಮಧಾರಿ, ಹೆಗ್ಗಡಗೆರೆ, ರಾಮನಗರ ಕೈಗಾರಿಕಾ ಪ್ರದೇಶ, ಮಾಯಗಾನಹಳ್ಳಿ, ಮೆಳೆಹಳ್ಳಿ, ಜಾಲಮಂಗಲ, ಕೂಟಗಲ್ಲು, ಚಿಕ್ಕಗಂಗವಾಡಿ ಹಾಗೂ ಬೇವೂರು ಸುತ್ತಮುತ್ತಲಿನ ಗ್ರಾಮಗಳು. ಹರಿಸಂದ್ರ, ಸುಗ್ಗನಹಳ್ಳಿ, ರಾಂಪುರ, ತಿಮ್ಮಸಂದ್ರ, ಲಕ್ಷ್ಮೀಪುರ, ಅಂಕನಹಳ್ಳಿ, ಕಣ್ವ, ಅಕ್ಕೂರು, ಚಿಕ್ಕಗಂಗವಾಡಿ, ಎರೆಹಳ್ಳಿ, ಕೂಟಗಲ್ಲು, ವಿರೂಪಸಂದ್ರ, ಚಿಕ್ಕಗಂಗವಾಡಿ ಹಾಗೂ ಸುತ್ತಮುತ್ತಲಿನ ಗ್ರಾಮಗಳು. ಚನ್ನಪಟ್ಟಣ ತಾಲೂಕಿನ ಬೇವೂರು ವಿದ್ಯುತ್ ಉಪ ಕೇಂದ್ರದ ವ್ಯಾಪ್ತಿಯ ಹೊನಗಾನಹಳ್ಳಿ, ಬೇವೂರು, ಹೊನ್ನಾಯಕನಹಳ್ಳಿ, ಗೌಡಗೆರೆ, ಕೆಳಗೆರೆ, ಮಾಕಳಿ, ಹೆಚ್.ಮೋಗೇನಹಳ್ಳಿ, ಬ್ಯಾಡರಹಳ್ಳಿ, ಹುಲುವಾಡಿ ಗ್ರಾಮಗಳಲ್ಲಿ ವಿದ್ಯುತ್ ಇರುವುದಿಲ್ಲ. ಗ್ರಾಹಕರು ಎಂದಿನಂತೆ ಸಹಕರಿಸಬೇಕು ಎಂದು ಬೆಸ್ಕಾಂನ ಎಇಇ ತಿಳಿಸಿದ್ದಾರೆ.
ಕುಮಾರ್ ಆಯ್ಕೆ
ದೇವನಹಳ್ಳಿ: ದೇವನಹಳ್ಳಿ ತಾಲೂಕು ಜನತಾದಳ (ಸಂಯುಕ್ತ) ಪಕ್ಷದ ತಾಲೂಕು ಸಂಚಾಲಕರಾಗಿ ದೇವನಹಳ್ಳಿಯ ಡಿ.ಎಂ.ಕುಮಾರ್ ಅವರನ್ನು ಸಂಚಾಲಕರನ್ನಾಗಿ ನೇಮಿಸಲಾಗಿದೆ ಎಂದು ಜಿಲ್ಲಾ ಘಟಕ ಅಧ್ಯಕ್ಷರಾದ ಎಸ್.ಪಿ.ಗಾಂಧಿ ಅವರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

