ಆನೇಕಲ್: 32 ಗ್ರಾಪಂನಲ್ಲಿ ಇಂದು ಸ್ವಚ್ಛತಾ ಆಂದೋಲನ
ಆನೇಕಲ್: ತಾಲೂಕಿನ 32 ಗ್ರಾಮ ಪಂಚಾಯ್ತಿ ವ್ಯಾಪ್ತಿಯ 360 ಹಳ್ಳಿಗಳಲ್ಲಿ ಸ್ವಚ್ಛತಾ ಆಂದೋಲನ ಹಾಗೂ ಜಾಗೃತಿ ಮೂಡಿಸುವ ಸಲುವಾಗಿ ವಿಶೇಷ ಕಾರ್ಯಕ್ರಮ ರೂಪಿಸಿದ್ದು ಸಹಕಾರ ನೀಡಬೇಕೆಂದು ಶಾಸಕ ಬಿ. ಶಿವಣ್ಣ ಮನವಿ ಮಾಡಿದ್ದಾರೆ. ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ತಾಲೂಕಿನಲ್ಲಿ ಕೇವಲ 4 ಜ್ವರ ಪ್ರಕರಣದಲ್ಲಿ ಡೆಂಘೀ ಇರುವ ಬಗ್ಗೆ ಮಾಹಿತಿ ಇದ್ದು ಜನತೆ ಭಯ ಪಡಲು ಕಾರಣವಿಲ್ಲ ಎಂದಿದ್ದಾರೆ.
ಡೆಂಘೀ, ಟೈಫಾಯಿಡ್ ಅಥವಾ ವೈರಲ್ ಪಿವರ್ ಯಾವುದೇ ಇದ್ದಲ್ಲಿ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಅವಕಾಶವಿದ್ದು ಜನ ಎಚ್ಚರದಿಂದಿರಬೇಕೆಂದರು. ಈ ಬಾರಿ ಡೆಂಘೀ ತಡೆಯಲು ಬೇಕಾದ ಸ್ವಚ್ಛತಾ ಕ್ರಮಗಳ ಮಾಹಿತಿ ಇರುವ ಕರಪತ್ರಗಳು, ಪ್ಲೆಕ್ಸ್ ಬ್ಯಾನರ್ಗಳು, ಪೋಸ್ಟರ್ಗಳನ್ನು ಗ್ರಾಮ ಪಂಚಾಯ್ತಿ ಕಚೇರಿ, ಬಸ್ ನಿಲ್ದಾಣ, ತಾಲೂಕು ಕಚೇರಿ, ಮುಂತಾದ ಪ್ರಮುಖ ಸ್ಥಳಗಳಲ್ಲಿ ನೀಡಲಾಗುತ್ತಿದೆ.
ಶಾಲಾ ಮಕ್ಕಳ ತೊಡಗಿಸುವಿಕೆ: ಪ್ರತಿ ಶಾಲಾ ಮಕ್ಕಳಿಗೂ ಕರಪತ್ರ ನೀಡುತ್ತಿದ್ದು ಆ ಬಗ್ಗೆ ವಿದ್ಯಾರ್ಥಿ ತನ್ನ ಮನೆಯ ಮಂದಿಗೆ ಹಾಗೂ ನೆರೆ ಮನೆಯವರಿಗೆ ಡೆಂಘೀ ಮುನ್ನೆಚ್ಚರಿಕೆ ವಹಿಸುವ ಬಗ್ಗೆ ಮಾಹಿತಿ ನೀಡುವಂತೆ ಸೂಚಿಸಲಾಗಿದೆ. ಉಳಿದಂತೆ ಆಶಾ ಕಾರ್ಯಕರ್ತೆಯರೂ ಮತ್ತು ಆಸ್ಪತ್ರೆ ಸಿಬ್ಬಂದಿಯನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದರು.
ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿ ಡಾ. ವೀರಭದ್ರಪ್ಪ, ತಾಪಂ ಅಧ್ಯಕ್ಷ ರಮೇಶ್, ಮುಖಂಡರಾದ ಸೋಮಶೇಖರರೆಡ್ಡಿ, ಕೃಷ್ಣಮೂರ್ತಿ ಇತರರು ಇದ್ದರು.
ನಾಳೆ ಚನ್ನಕೇಶವ ಸ್ವಾಮಿ ದೇಗುಲ ಲೋಕಾರ್ಪಣೆ
ಸೂಲಿಬೆಲೆ: ಇಲ್ಲಿಗೆ ಸಮೀಪದ ದೊಡ್ಡಅರಳಿಗೆರೆ ಗ್ರಾಮದಲ್ಲಿರುವ ಚನ್ನಕೇಶವ ಸ್ವಾಮಿ ದೇಗುಲ ಜೂ.26 ಮತ್ತು 27 ರಂದು ಲೋಕಾರ್ಪಣಿ ಗೊಳ್ಳಲಿದ್ದು ಇದರ ಅಂಗವಾಗಿ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ದೊಡ್ಡಅರಳಿಗೆರೆ ಗ್ರಾಮದಲ್ಲಿರುವ ಚನ್ನಕೇಶವ ಸ್ವಾಮಿ ದೇಗುಲ ಬಿ.ವಿ. ಸತೀಶ್ಗೌಡರ ಸಹಕಾರದಲ್ಲಿ ಜೀರ್ಣೋದ್ಧಾರಗೊಂಡಿದ್ದು, ಜೂ.26 ರಂದು ಹೋಮ, ಹವನ ಸೇರಿದಂತೆ ನಾನಾ ಕಾರ್ಯಕ್ರಮಗಳು ನಡೆಯಲಿವೆ. ಜೂ.27 ರಂದು ವಿಜಯಪುರ ಮಹಾದೇವ ಸ್ವಾಮಿಗಳು ಸಾನಿಧ್ಯದಲ್ಲಿ ಲೋಕಾರ್ಪಣೆಗೊಳ್ಳಲಿದ್ದು, ಮಾಜಿ ಸಚಿವ ಬಿ.ಎನ್. ಬಚ್ಚೇಗೌಡ, ಬಿ.ಎನ್. ಗೋಪಾಲಗೌಡ, ಸೊಣ್ಣಪ್ಪ, ಕೆ.ನಾರಾಯಣಪ್ಪ, ಮಂಜುಳಾ ಡಿ.ಟಿ. ವೆಂಕಟೇಶ್ ಸೇರಿದಂತೆ ಹಲವರು ಭಾಗವಹಿಸಲಿದ್ದಾರೆ ಎಂದು ದೇಗುಲ ಸಮಿತಿ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

